ನಗರಸಭೆ ಪೌರಾಯುಕ್ತೆಗೆ ನಿಂದನೆ ಕೇಸ್​​: ರಾಜೀವ್​ ಗೌಡ ಪರ ಸಚಿವ ಮುನಿಯಪ್ಪ ಬ್ಯಾಟಿಂಗ್​

ನಗರಸಭೆ ಪೌರಾಯುಕ್ತೆಗೆ ನಿಂದನೆ ಕೇಸ್​​: ರಾಜೀವ್​ ಗೌಡ ಪರ ಸಚಿವ ಮುನಿಯಪ್ಪ ಬ್ಯಾಟಿಂಗ್​


ಬೆಂಗಳೂರು, ಜನವರಿ 15: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ‘ಕೈ’ ಮುಖಂಡನಿಂದ ನಿಂದನೆ ವಿಚಾರ ಸಂಬಂಧ ಆರೋಪಿ ರಾಜೀವ ಗೌಡ ಪರ ಸಚಿವ ಕೆ. ಹೆಚ್. ಮುನಿಯಪ್ಪ ಬ್ಯಾಟಿಂಗ್ ಮಾಡಿದ್ದಾರೆ. ರಾಜೀವ್ ಗೌಡ ಸೌಮ್ಯ ಸ್ವಭಾವದವರಾಗಿದ್ದರೆ, ಕರೆದು ಆತನಿಗೆ ಬುದ್ಧಿ ಹೇಳುತ್ತೇನೆ. ರಾಜಕೀಯದಲ್ಲಿರುವ ವ್ಯಕ್ತಿ ಶಾಂತ ಸ್ವಭಾವದಿಂದ ಇರಬೇಕು. ಅಧಿಕಾರದಲ್ಲಿ ಇರುವವರಿಗೆ ಯಾರೂ ಹೀಗೆ ಮಾತನಾಡಬಾರದು. ಜೊತೆಗೆ ಶಿಡ್ಲಘಟ್ಟದಲ್ಲಿ ಜೆಡಿಎಸ್ ನವರು ಈ ಹಿಂದೆ ಬ್ಯಾನರ್ ಹಾಕಿದಾಗ ತೆಗೆಸಿಲ್ಲ, ಆದರೆ ಈಗ ತೆಗೆದಿದ್ದಾರೆ ಅಂತಾ ರಾಜೀವ್ ಹೇಳಿದ್ದಾರೆ. ಆ ಅಧಿಕಾರಿ ಜೆಡಿಎಸ್ ಪಕ್ಷದ ಪೋಸ್ಟರ್, ಬ್ಯಾನರ್ ತೆಗೆಯುತ್ತಿಲ್ಲ. ಕೇವಲ ಕಾಂಗ್ರೆಸ್ ಬ್ಯಾನರ್ ತೆಗೆದಿದ್ದಾರೆ ಎಂಬುದು ರಾಜೀವ್ ವಾದವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *