ಬಹುಕಾಲದ ಗೆಳತಿ ಸೋಫಿ ಜೊತೆ ಶಿಖರ್ ಧವನ್ ಅದ್ಧೂರಿ ಮದುವೆ, ಖಾಸಗಿ ಕಾರ್ಯಕ್ರಮದಲ್ಲಿ ಧವನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊದಲ ಮದುವೆ ಮುರಿದು ಬಿದ್ದ ಬಳಿಕ ತೀವ್ರವಾಗಿ ಕುಗಿದ್ದ ಧವನ್ ಇದೀಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಕ್ರಿಕೆಟ್ ಕರಿಯರ್‌ನಲ್ಲೂ ಸಾಕಷ್ಟು ಹೋರಾಟ ಮಾಡಿದ್ದಾರೆ. ಇಂಜುರಿ, ಕಳಪೆ ಫಾರ್ಮ್‌ಗಳಿಂದ ತಂಡದಿಂದ ಹೊರಬಿದ್ದರೂ ಮತ್ತೆ ಕಮ್‌ಬ್ಯಾಕ್ ಮಾಡಿ ಮಿಂಚಿದ್ದಾರೆ. ಧವನ್ ವೈಯುಕ್ತಿಕ ಬದುಕು ಹೋರಾಟಗಳಿಂದಲೇ ಕೂಡಿತ್ತು. ಮೊದಲ ಮದುವೆ ಮುರಿದು ಬಿದ್ದ ಬಳಿಕ ಮಗನ ನೆನೆದು ತೀವ್ರವಾಗಿ ಕುಗ್ಗಿ ಹೋಗಿದ್ದ ಶಿಖರ್ ಧವನ್ ಇದೀಗ ಬಹುಕಾಲದ ಗೆಳತಿ ಸೋಫಿ ಶೈನ್ ಜೊತೆ ಸಪ್ತಪದಿ ತುಳಿದಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಶಿಖರ್ ಧವನ್, ಸೋಫಿ ಶೈನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜನವರ 12ರಂದು ಈ ಜೋಡಿ ತಮ್ಮ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು. ಈ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಇವರಿಬ್ಬರು ತಮ್ಮ ರಿಲೇಶನ್‌ಶಿಪ್‌ನ್ನು 2025ರ ಮೇ ತಿಂಗಳಲ್ಲ ಅಧಿಕೃಗೊಳಿಸಿದ್ದರು.

ಶಿಖರ್ ಧವನ್ ಎರಡನೇ ಮದುವೆಗೆ ಟೀಂ ಇಂಡಿಯಾ ಕೆಲ ಆಪ್ತ ಕ್ರಿಕೆಟಿಗರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಶಿಖರ್ ಧವನ್ , ಸೋಫಿ ಶೈನ್ ಕುಟುಂಬಸ್ಥರು ಸೇರಿದಂತೆ ಆಪ್ತರು ಮಾತ್ರ ಈ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸ್ಪಿನ್ನರ್ ಯಜುವೇಂದ್ರ ಚಹಾಲ್ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾ ಮೂಲಕ ಸಂಭ್ರಮ ಹಂಚಿಕೊಂಡಿದ್ದಾರೆ.

ಶಿಖರ್ ಧವನ್ ಹಾಗೂ ಸೋಫಿ ಶೈನ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಫೆಬ್ರವರಿ 20 ರಂದು ಹಳದಿ ಕಾರ್ಯಕ್ರಮ ನಡೆದಿತ್ತು. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯ ಶಿಖರ್ ಮದುವೆ ಸಂಭ್ರಮದಲ್ಲಿದ್ದಾರೆ.

ಸೋಫಿ ಶೈನ್ ಪ್ರಮುಖ ಹುದ್ದೆ ಹೊಂದಿದ್ದಾರೆ. ಐರಿಶ್ ಕಂಪನಿಯಲ್ಲಿ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಅಮೆರಿಕ ಮೂಲದ ನಾರ್ಥರ್ನ್ ಟ್ರಸ್ಟ್ ಕಾರ್ಪೋರೇಶನ್ ಕಂಪನಿಯಲ್ಲಿ ಪ್ರಾಡಕ್ಟ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಖರ್ ಧವನ್ ಮೊದಲು ಸೋಫಿ ಶೈನ್ ಭೇಟಿಯಾಗಿದ್ದು ಯುಎಐನಲ್ಲಿ. ಸೋಫಿ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ.

ಯಾರು ಈ ಸೋಫಿ ಶೈನ್

Source link
ಬಹುಕಾಲದ ಗೆಳತಿ ಸೋಫಿ ಜೊತೆ ಶಿಖರ್ ಧವನ್ ಅದ್ಧೂರಿ ಮದುವೆ, ಹಲವರು ಕ್ರಿಕೆಟಿಗರು ಭಾಗಿ