ಮುಂಬೈನಲ್ಲಿ ಕರ್ನಾಟಕ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಕನ್ನಡ ಪ್ರೇಮಕ್ಕೆ ಇದೇ ಸಾಕ್ಷಿ

ಮುಂಬೈನಲ್ಲಿ ಕರ್ನಾಟಕ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಕನ್ನಡ ಪ್ರೇಮಕ್ಕೆ ಇದೇ ಸಾಕ್ಷಿ


ಶಿಲ್ಪಾ ಶೆಟ್ಟಿ (ಶಿಲ್ಪಾ ಶೆಟ್ಟಿ) ಬಾಲಿವುಡ್ ನ ಸ್ಟಾರ್ ನಟಿ ಆಗಿರುವ ಜೊತೆಗೆ ಬಲು ಯಶಸ್ವಿ ಉದ್ಯಮಿಯೂ ಹೌದು. ಮಂಗಳೂರು ಮೂಲದವರಾದರೂ ಸಹ ಶಿಲ್ಪಾ ಶೆಟ್ಟಿ ಬೆಳೆದಿದ್ದೆಲ್ಲ ಮುಂಬೈನಲ್ಲಿಯೇ. ಬಾಲ್ಯದಿಂದಲೂ ಮುಂಬೈನಲ್ಲೇ ಬೆಳೆದರೂ ಸಹ ತಮ್ಮ ಮೂಲವಾದ ಕರ್ನಾಟಕವನ್ನು ಶಿಲ್ಪಾ ಶೆಟ್ಟಿ ಮರೆತಿಲ್ಲ. ಇತ್ತೀಚೆಗಷ್ಟೇ ಶೆಟ್ಟಿ ಮುಂಬೈನಲ್ಲಿ ಹೋಟೆಲ್ ಒಂದನ್ನು ಶಿಲ್ಪಾ ಪ್ರಾರಂಭ ಮಾಡಿದ್ದು, ಕರ್ನಾಟಕ ಥೀಮ್ ನ ಹೋಟೆಲ್ ಆಗಿದೆ. ಇದಕ್ಕೆ ಇರಿಸಿರುವುದು ಸಹ ಕನ್ನಡದ ಹೆಸರನ್ನೇ.

ಶಿಲ್ಪಾ ಶೆಟ್ಟಿ ಬಾಸ್ಟಿಯನ್ ಹೆಸರಿನಲ್ಲಿ ಮುಂಬೈನಲ್ಲಿ ಒಂದು ಹಾಗೂ ಗೋವಾನಲ್ಲಿ ಒಂದು ಐಶಾರಾಮಿ ಹೋಟೆಲ್. ಆ ರೆಸ್ಟೊರೆಂಟ್‌ಗಳು ಸಿರಿವಂತರ ಮತ್ತು ಅಲ್ಟ್ರಾ ಸಿರಿವಂತರ ಹೋಟೆಲ್ ಇದೀಗ ಅದೇ ಬಾಸ್ಟಿಯನ್ ಹೆಸರಿನಲ್ಲಿ ಮೇಲ್ಮಧ್ಯಮ ವರ್ಗದವರಿಗಾಗಿ ರೆಸ್ಟೊರೆಂಟ್ ಆರಂಭಿಸಿದ್ದಾರೆ ಶಿಲ್ಪಾ ಶೆಟ್ಟಿ. ರೆಸ್ಟೋರೆಂಟ್ ಹೆಸರು ‘ಬಾಸ್ಟಿಯನ್ ಅಮ್ಮ ಕೈ’. ಈ ರೆಸ್ಟೊರೆಂಟ್ ಕರ್ನಾಟಕ ಥೀಮ್ ನ ರೆಸ್ಟಾರೆಂಟ್ ಆಗಿದ್ದು, ಇಲ್ಲಿ ಸಿಕ್ಕುವ ಖಾದ್ಯಗಳು ಕರ್ನಾಟಕದ ಜನಪ್ರಿಯ ಖಾದ್ಯಗಳೇ ಆಗಿವೆ.

ಮುಂಬೈನ ಬಾಂದ್ರಾ ವೆಸ್ಟ್ನ ನ್ಯೂ ಲಿಂಕ್ ರಸ್ತೆಯಲ್ಲಿ ಈ ಹೋಟೆಲ್ ಅನ್ನು ಶಿಲ್ಪಾ ಶೆಟ್ಟಿ ಪ್ರಾರಂಭಿಸಿದ್ದಾರೆ. ಹೋಟೆಲ್ನ ವಿಶೇಷತೆಯೆಂದರೆ ಅದರ ಮೆನು. ಅವರ ಮೆನುವಿನಲ್ಲಿ ಕರ್ನಾಟಕದ ಮ್ಯಾಪ್ ಅನ್ನೇ ಪ್ರಿಂಟ್ ಮಾಡಿದ್ದಾರೆ ನಟಿ. ಹೋಟೆಲ್ ಮುಂಬೈನಲ್ಲಿದ್ದರೂ ಸಹ ಖಾದ್ಯಗಳ ಹೆಸರು ಹಿಂದಿಯ ಬದಲಿಗೆ ಕನ್ನಡದಲ್ಲಿಯೇ ಇವೆ. ಮೆಣಸಿಕಾಯಿ ಬಜ್ಜಿ, ಸಬ್ಬಕ್ಕಿ ವಡೆ ಎಂದೆಂದೂ ಮೆನುವಿನಲ್ಲಿ ಮುದ್ರಿಸಲಾಗಿದೆ. ಮುಂಬೈನಲ್ಲಿ ಈ ಖಾದ್ಯಗಳನ್ನು ಮಿರ್ಚಿ ಬಾಜಿ, ಸಾಬೂದಾನ ವಡಾ ಎಂದು ಕರೆಯಲಾಗುತ್ತದೆ. ಆದರೆ ಹಿಂದಿ ಹೆಸರಿನ ಮೆನುವಿನಲ್ಲಿ ಕನ್ನಡದ ಹೆಸರುಗಳನ್ನೇ ಇರಿಸಿದ್ದಾರೆ ಶಿಲ್ಪಾ ಶೆಟ್ಟಿ.

ಇದನ್ನೂ ಓದಿ:ನಟಿ ಶಿಲ್ಪಾ ಶೆಟ್ಟಿ ಮುಂಬೈ ನಿವಾಸದ ಮೇಲೆ ಐಟಿ ದಾಳಿ: 60 ಕೋಟಿ ರೂ. ವಂಚನೆ ಕೇಸ್

ಅದು ಮಾತ್ರವೇ ಅಲ್ಲದೆ ಮೈಸೂರು ಮಸಾಲೆ ದೋಸೆ, ದಾವಣೆಗೆರೆ ಬೆಣ್ಣೆ ದೋಸೆ, ಕೂರ್ಗಿ ಪಂಡಿ ಕರಿ, ಕೂರ್ಗಿ ಚಿಕನ್, ಮಂಗಳೂರು ಗೀ ರೋಸ್ಟ್, ಬಿಸಿಬೇಳೆ ಬಾತ್, ಮಂಗಳೂರು ಸುಕ್ಕಾ, ಮೈಸೂರು ಮಸಾಲ ಬುರ್ಜಿ ಇನ್ನೂ ಹಲವು ಕರ್ನಾಟಕದ ಖಾದ್ಯಗಳ ರೆಸ್ಟೊರೆಂಟ್‌ನಲ್ಲಿ ಲಭ್ಯವಿದೆ. ಮೆನುಕಾರ್ಡ್‌ನಲ್ಲಿ ಕರ್ನಾಟಕದ ಭೂಪಟವನ್ನೇ ಮುದ್ರಿಸಿರುವ ಶಿಲ್ಪಾ ಶೆಟ್ಟಿ, ಕರ್ನಾಟಕದ ವಿವಿಧ ಜಿಲ್ಲೆಗಳ ಖಾದ್ಯಗಳು ಮತ್ತು ಡ್ರಿಂಕ್‌ಗಳನ್ನು ತಮ್ಮ ಹೋಟೆಲ್‌ನಲ್ಲಿ ಸರ್ವ್ ಮಾಡುವುದಾಗಿ ಮೆನು ಕಾರ್ಡ್‌ನಲ್ಲಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *