ಸಣ್ಣ ಪುಟ್ಟ ನಟರೂ ಸಹಸ್ ಸಿನಿಮಾಗಳು, ಪ್ಯಾನ್ ಇಂಡಿಯಾ ಸಿನಿಮಾಗಳ ಹಿಂದೆ ಬಿದ್ದಿರುವ ಸಮಯದಲ್ಲಿ ಶಿವಣ್ಣ ಮಾತ್ರ ಈ ವಯಸ್ಸಿನಲ್ಲೂ ಭಿನ್ನ-ಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸುತ್ತಾ ತಾವೊಬ್ಬ ನಿಜವಾದ ‘ನಟ’ ಎಂದು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ. ಇದೀಗ ಶಿವರಾಜ್ ಕುಮಾರ್ ಅವರು ಭಿನ್ನ ಕತೆಯುಳ್ಳ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ಜನಗಳ ನಾಯಕ ಎಂದೆಂದಿಗೂ ಹೆಸರಾಗಿರುವ ಗುಮ್ಮಡಿ ನರಸಯ್ಯ ಅವರ ಪಾತ್ರದಲ್ಲಿ ಶಿವಣ್ಣ ನಟಿಸಲಿದ್ದಾರೆ, ಇಂದು ಪೋಸ್ಟರ್ ಬಿಡುಗಡೆಯಾಗಿದೆ.
ಗುಮ್ಮಡಿ ನರಸಯ್ಯ, ತೆಲುಗು ರಾಜ್ಯಗಳಲ್ಲಿ ಜನಪ್ರಿಯವಾಗಿರುವ ಶಾಸಕ (ಈಗ ಮಾಜಿ), ಹೋರಾಟಗಾರ. ಜನ ಸೇವೆಯಲ್ಲೇ ಜೀವನ ಸವೆಸಿರುವ ವ್ಯಕ್ತಿ. ಈಗಿನ ತೆಲಂಗಾಣ ರಾಜ್ಯಕ್ಕೆ ಸೇರಿರುವ ಖಮ್ಮಂ ಜಿಲ್ಲೆಯಲ್ಲಿ ಇಲ್ಲಂದು ಕ್ಷೇತ್ರದಿಂದ ಬರೋಬ್ಬರು ಐದು ಬಾರಿ ಶಾಸಕರಾದ ವ್ಯಕ್ತಿ. ಸಿಪಿಐ (ಎಂಎಲ್-ನ್ಯೂ ಡೆಮಾಕ್ರಸಿ) ಪಕ್ಷಕ್ಕೆ ಸೇರಿದ ಗುಮ್ಮಡಿ ನರಸಯ್ಯ, ತಮ್ಮ ಸೇವೆಯ ಜೊತೆಗೆ ತಮ್ಮ ಸರಳತೆಯಿಂದಲೂ ಮನೆ ಮಾತಾಗಿರುವವರು.
ಗುಮ್ಮಡಿ ನರಸಯ್ಯ, ಕಾಲ್ನಡಿಗೆಯಲ್ಲಿ ಹೈದರಾಬಾದ್‌ಗೆ ವಿಧಾನಸಭೆಯಲ್ಲಿ ಪಾಲ್ಗೊಳ್ಳಲು ಬರುವಂತಾಗಿದೆ. ಅದರ ನಂತರ ಒಂದು ಸೈಕಲ್ ಖರೀದಿ ಮಾಡಿ ಸೈಕಲ್ ನಲ್ಲಿ ಅಸೆಂಬ್ಲಿಗೆ ಬರಲು. ಶಾಸಕನಾಗಿ ಬರುವ ಸಂಬಳವನ್ನೆಲ್ಲ ತಮ್ಮ ಪಕ್ಷಕ್ಕೆ ನೀಡಿ ಬಿಡುತ್ತಿದ್ದ ಗುಮ್ಮಡಿ ನರಸಯ್ಯ ತಮ್ಮ ಜೀವಿತ ಕಾಲದಲ್ಲಿ ಒಂದೇ ಒಂದು ಆಸ್ತಿಯನ್ನು ಸಹ ಖರೀದಿಸಿಲ್ಲ. ಬ್ಯಾಂಕ್‌ನಲ್ಲಿ ಖಾತೆ ಏನೆಂದರೆ ಯಾವುದೇ ಹಣವಿಲ್ಲ. ಆದರೆ ಕೋಟ್ಯಂತರ ಜನರ ಪ್ರೀತಿ, ಅಭಿಮಾನವನ್ನು ಗುಮ್ಮಡಿ ನರಸಯ್ಯ ಗಳಿಸಿದ್ದಾರೆ. ಶಿವರಾಜ್ ಕುಮಾರ್ ಅವರು ಗುಮ್ಮಡಿ ನರಸಯ್ಯನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:ದಸರಾನಲ್ಲಿ ಡ್ಯಾನ್ಸ್ ಮಾಡಿ ಜನರ ರಂಜಿಸಿದ ಶಿವರಾಜ್ ಕುಮಾರ್: ವಿಡಿಯೋ
ಈ ತೆಲುಗು ರಾಜಕೀಯ ನಾಯಕನ ಸಿನಿಮಾ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣ ಆಗಲಿದೆ. ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಶಿವರಾಜ್ ಕುಮಾರ್ ಅವರು ಸಿಪಿಐ ಬಾವುಟ ಕಟ್ಟಿದ ಸೈಕಲ್ ತಳ್ಳಿಕೊಂಡು ಅಸೆಂಬ್ಲಿಗೆ ಹೋಗುತ್ತಿರುವ ಚಿತ್ರ ಅದಾಗಿದೆ.
1983 ರಲ್ಲಿ ಎನ್ ಟಿಆರ್ ಅವರು ರಾಜಕೀಯಕ್ಕೆ ಧುಮುಕಿದಾಗ ಇಡೀ ರಾಜ್ಯದಲ್ಲಿ ಅವರ ಅಲೆ ಎದ್ದಿತ್ತು ಅವರ ಪಕ್ಷದ 202 ಅಭ್ಯರ್ಥಿಗಳು ಗೆದ್ದಿದ್ದರು. ಇಡೀ ರಾಜ್ಯದಲ್ಲಿ ಎನ್ ಟಿಆರ್ ಅಲೆ ಇದ್ದಾಗಲೂ ಸಹ ಬರಿಗೈ ಮಾಲೀಕ ಗುಮ್ಮಡಿ ನರಸಯ್ಯ ಗೆದ್ದು ಬಂದಿದ್ದರು. ಜನರೇ ಹಣ ಹಾಕಿ ಅವರನ್ನು ಗೆಲ್ಲಿಸಿ ಕಳಿಸುತ್ತಿದ್ದರು. ಗುಮ್ಮಡಿ ನರಸಯ್ಯ ಗೆದ್ದು ಶಾಸಕ ಆದರೂ ಸಹ ಅವರ ಪತ್ನಿ ಸೌದೆ ಮಾರುವ, ಸಗಣಿ ಬೆರಣಿಗಳನ್ನು ತಲೆ ಮೇಲೆ ಹೊತ್ತುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರಂತೆ. ಆದರೆ 2009 ರಲ್ಲಿ ಅವಿಭಜಿತ ಆಂಧ್ರ ಒಡೆದು ಎರಡು ಹೋಳಾಗಿ ಗುಮ್ಮಡಿ ನರಸಯ್ಯ ಹೊಂದಿದ್ದ ಕ್ಷೇತ್ರ ವಿಭಜನೆಯೂ ಆದ ಬಳಿಕ ಗುಮ್ಮಡಿ ಅವರು ಗೆಲ್ಲಲಿಲ್ಲ. ಆದರೆ ಸಹ ತಮ್ಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅವರು ಸಹ ಜನ ಅವರನ್ನು ‘ಶಾಸಕ’ ಎಂದೆಂದೂ ಕರೆಯುತ್ತಾರೆ. ಇಂಥಹ ಮಹನೀಯ ರಾಜಕಾರಣಿಯ ಪಾತ್ರದಲ್ಲಿ ಶಿವಣ್ಣ ಇದೀಗ ನಟಿಸುತ್ತಿದ್ದಾರೆ.
ಸಿನಿಮಾ ಅಂದರೆ ಎನ್ ಸುರೇಶ್ ರೆಡ್ಡಿ ಎಂಬವರು ನಿರ್ಮಾಣ ಮಾಡುತ್ತಿದ್ದಾರೆ, ಪರಮೇಶ್ವರ್ ಹಿವರಾಲೆ ಎಂಬವರು ನಿರ್ದೇಶನ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ