‘ಸು ಫ್ರಮ್ ಸೋ’ ಸಿನಿಮಾ ಈ ವರ್ಷದ ಅತಿ ಯಶಸ್ವಿ ಚಿತ್ರಗಳಲ್ಲಿ ಒಂದು. ಈ ಸಿನಿಮಾ 100 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಈ ಸಿನಿಮಾದಲ್ಲಿ ಕಥಾ ನಾಯಕ ಜೆಪಿ ತುಮ್ಮಿನಾಡು ಅವರು ಸೀರೆ ಉಟ್ಟು ಬರುತ್ತಾರೆ. ಈ ದೃಶ್ಯ ಸಾಕಷ್ಟು ಗಮನ ಸೆಳೆದಿತ್ತು. ಈಗ ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಅವರು ’45’ ಚಿತ್ರಕ್ಕಾಗಿ (45 ಚಲನಚಿತ್ರ) ಇದೇ ರೀತಿಯ ಅವತಾರ ತಾಳಿದ್ದಾರೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಇಡೀ ಚಿತ್ರದಲ್ಲಿ ಈ ದೃಶ್ಯವೇ ಹೈಲೈಟ್.
’45’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಮೂಲಕ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ನಿರ್ದೇಶಕರಾಗಿದ್ದಾರೆ. ಅವರು ಪ್ರಥಮ ಸಿನಿಮಾದಲ್ಲೇ ಗೆಲ್ಲುವ ಸೂಚನೆ. ಈ ಟ್ರೇಲರ್ ಚಿತ್ರದ ಅದ್ಭುತವಾಗಿ ಮೂಡಿ ಬಂದಿದೆ. ಹುಟ್ಟು ಮತ್ತು ಸಾವಿನ ನಡುವಿನ ಕಥೆ ಇದು ಎಂದು ಹೇಳಲಾಗದು.
ಇದನ್ನೂ ಓದಿ:’ಮಾರ್ಕ್’-’45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆಗಸ್ಟ್ ತಿಂಗಳಲ್ಲೇ ’45’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಗ್ರಾಫಿಕ್ಸ್ ಕೆಲಸಗಳ ಕಾರಣಕ್ಕೆ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿತ್ತು. ಈಗ ಟ್ರೇಲರ್ ನೋಡಿದವರಿಗೆ ಅದು ಸ್ಪಷ್ಟವಾಗಿದೆ. ’45’ ಚಿತ್ರದ ಟ್ರೇಲರ್ ಜೊತೆಗೆ ಗ್ರಾಫಿಕ್ಸ್ ಹೈಲೈಟ್ ಆಗಿದೆ. ಡಿಸೆಂಬರ್ 25 ರಂದು ಸಿನಿಮಾ ತೆರೆಗೆ ಬರುತ್ತಿದೆ.
45 ಟ್ರೇಲರ್
ರಾಜ್ ಬಿ ಶೆಟ್ಟಿ, ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಪಾತ್ರಗಳು ಟ್ರೇಲರ್ ನಲ್ಲಿ ಹೈಲೈಟ್ ಆಗಿವೆ. ಗೋರಿ ಮೇಲೆ ಹುಟ್ಟಿದ ದಿನಾಂಕ, ಹಾಗೂ ಸಾಯುವ ದಿನಾಂಕ ಬರೆದಿರುತ್ತಾರೆ. ಮಧ್ಯದಲ್ಲಿ ಒಂದು ಸಣ್ಣ ಗೆರೆ ಇರುತ್ತೆ. ಅದುವೇ ಜೀವನ ಎಂದು ಉಪ್ಪಿ ಹೇಳುವ ಡೈಲಾಗ್ ಗಮನ ಸೆಳೆದಿದೆ. ಟ್ರೇಲರ್ ಕೊನೆಯಲ್ಲಿ ಶಿವರಾಜ್ಕುಮಾರ್ ತಾಳುವ ಅವತಾರ ಮೆಚ್ಚುಗೆ ಪಡೆದಿದೆ. ಈಗಾಗೇ ‘ಮಾರ್ಕ್’ ಸಿನಿಮಾ ಟ್ರೇಲರ್ ಭರ್ಜರಿ ಮೆಚ್ಚುಗೆ ಪಡೆದಿದೆ. ಈ ಚಿತ್ರ ಕೂಡ ಡಿಸೆಂಬರ್ 25 ರಂದು ಬರುತ್ತಿದೆ. ಅದರ ಜೊತೆಗೆ ’45’ ಸಿನಿಮಾ ಕೂಡ ಟ್ರೇಲರ್ ಮೂಲಕ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.