ಫರಿದಾಬಾದ್, ಫೆ.23: ಹಿಂದೂಗಳ ಆರಾಧ್ಯ ದೈವ, ಮರಾಠಾ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಸಾಹಸಿ ಮಹಿಳೆ ಮಹಾರಾಣಿ ಪದ್ಮಿನಿ (ಪದ್ಮಾವತಿ) ಅವರ ಭಾವಚಿತ್ರಗಳನ್ನು ಅವಮಾನಕರ ರೀತಿಯಲ್ಲಿ ಬಳಸಿದ ಹರಿಯಾಣದ ಸಿಕ್ರಿಯಲ್ಲಿರುವ ‘ಮಿಲನ್ ಬ್ಯಾಂಕ್ವೆಟ್ ಹಾಲ್’ನಲ್ಲಿ ನಡೆದಿದೆ. ಇದು ಹಿಂದೂ ಸಂಘಟನೆಗಳು ಮತ್ತು ಇತಿಹಾಸ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಬ್ಯಾಂಕ್ವೆಟ್ ಹಾಲ್ ಶೌಚಾಲಯದ ಬಾಗಿಲುಗಳ ಮೇಲೆ ಪುರುಷ ಮತ್ತು ಮಹಿಳಾ ವಿಭಾಗವನ್ನು ಗುರುತಿಸಲು ಶಿವಾಜಿ ಮಹಾರಾಜ್ ಮತ್ತು ಮಹಾರಾಣಿ ಪದ್ಮಿನಿ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ಇದು ಕೇವಲ ಚಿತ್ರಗಳ ಬಳಕೆಯಲ್ಲ, ಬದಲಾಗಿ ಭಾರತೀಯ ಇತಿಹಾಸ ಮತ್ತು ಹಿಂದುತ್ವದ ಆಸ್ಮಿತೆಗೆ ಮಾಡಿದ ಅಪಚಾರ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. : “ನಮ್ಮ ಇತಿಹಾಸದ ವೀರ ಪುರುಷರು ಮತ್ತು ಮಹಿಳೆಯರು ನಮಗೆ ಪೂಜನೀಯರು. ಅವರನ್ನು ಶೌಚಾಲಯದ ಬಾಗಿಲಿಗೆ ಅಕ್ಷಮ್ಯ ಅಪರಾಧ” ಎಂದು ನೆಟ್ಟಿಗರು ಕಟುವಾಗಿ ಟೀಕಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ