
ಟಿ20 ನಿಂದ ಗೆದ್ದ ಬಳಿಕ ಟೀಮ್ ಇಂಡಿಯಾ ಆಟಗಾರರು ಅಹಮದಾಬಾದ್ನ ವಿಮಾನ ನಿಲ್ದಾಣದತ್ತ ಮುಖ ಮಾಡಿದರು. ಆದರೆ ಶಿವಂ ದುಬೆ ಮಾತ್ರ ರೈಲು ನಿಲ್ದಾಣದತ್ತ ತೆರಳಿದ್ದರು. ಅಷ್ಟೇ ಅಲ್ಲದೆ ಮುಂಜಾನೆ ಟ್ರೈನ್ ಹತ್ತುವ ಮೂಲಕ ಮುಂಬೈಗೆ ಬಂದಿಳಿದಿದ್ದರು. ಅಂದರೆ ಗೆದ್ದ ಬಳಿಕ ದುಬೆ ಯಾರಿಗೂ ಗೊತ್ತಾಗದಂತೆ ರೈಲಿನಲ್ಲಿ ಪ್ರಯಾಣಿಸಿರುವುದು ಇದೀಗ ಬಹಿರಂಗವಾಗಿದೆ.
ನ್ಯೂಝಿಲೆಂಡ್ ವಿರುದ್ಧದ ಫೈನಲ್ ಪಂದ್ಯಗಳ 96 ರನ್ ಅಮೋಘ ಜಯ ಸಾಧಿಸಿದ ಬಳಿಕ ಟೀಮ್ ಇಂಡಿಯಾ ಆಟಗಾರರು ಸಂಭ್ರಮದಲ್ಲಿದ್ದರು. ಅದರಲ್ಲೂ ಟ್ರೋಫಿಯ ಹೋಟೆಲ್ ರೂಮ್ಗೆ ತೆರಳಿದ್ದ ಭಾರತೀಯ ಆಟಗಾರರು ಸಖತ್ತಾಗಿ ಎಂಜಾಯ್ ಮಾಡಿದ್ದರು.
ಆದರೆ ಮಧ್ಯ ರಾತ್ರಿ ಕಳೆಯುತ್ತಿದ್ದಂತೆ ಶಿವಂ ದುಬೆ ಮಾತ್ರ ಬ್ಯಾಕ್ ಮಾಡಿಕೊಂಡಿದ್ದರು. ಜೊತೆಗೆ ಮುಂಬೈಗೆ ತೆರಳಲು ವಿಮಾನವನ್ನು ಪರಿಶೀಲಿಸಲಾಗಿದೆ. ಈ ವೇಳೆ ಎಲ್ಲಾ ವಿಮಾನಗಳು ಫುಲ್ ಬುಕ್ ಆಗಿದ್ದವು.
ಇತ್ತ ಹೇಗಾದರೂ ಮಾಡಿ ಬೇಗ ಮನೆಗೆ ಹೋಗಿ ತಮ್ಮ ಮಕ್ಕಳೊಂದಿಗೆ ಗೆಲುವನ್ನು ಸಂಭ್ರಮಿಸಬೇಕೆಂಬ ಆಸೆ ಶಿವಂ ದುಬೆಗಿತ್ತು. ಹೀಗಾಗಿ ವಿಮಾನಕ್ಕಾಗಿ ಕಾಯುವ ಬದಲು ಮುಂಜಾನೆಯ ರೈಲೇ ಉತ್ತಮ ಎಂದು ಅವರು ನಿರ್ಧರಿಸಿದರು.
ಅದರಂತೆ ಅಹಮದಾಬಾದ್ ನಿಂದ ಮುಂಬೈಗೆ ಮುಂಜಾನೆ 5.10 ಕ್ಕೆ ಟ್ರೈನ್ ಬಂದಿದೆ. ಜನರಿಗೆ ಗುರುತು ಸಿಗದಂತೆ ದುಬೆ ಕ್ಯಾಪ್, ಮಾಸ್ಕ್ ಮತ್ತು ಫುಲ್ ಸ್ಲೀವ್ ಟೀ ಶರ್ಟ್ ಧರಿಸಿ ಪ್ಪರ್ ಬರ್ತ್ ಏರಿ ಕುಳಿತಿದ್ದಾರೆ.
ಇದರ ನಡುವೆ ಟಿಕೆಟ್ ಪರೀಕ್ಷಕರು (TC) ಪ್ರಯಾಣಿಕರಿಗೆ ಶಿವಂ ದುಬೆ ಹೆಸರನ್ನು ನೋಡಿ, “ಇವರು ಕ್ರಿಕೆಟರ್ ಶಿವಂ ದುಬೆ ಅವರಾ?” ಎಂದು ಕೇಳಿದ್ದಾರೆ.
ನಂತರ ಕೆಳಗಿನ ಸೀಟ್ನಲ್ಲಿ ಕೂತಿದ್ದ ಅವರ ಪತ್ನಿ ಅಂಜುಮ್ ಖಾನ್, “ಅಯ್ಯೋ ಇಲ್ಲ, ಅವರು ಇಲ್ಲಿಗೆ ಯಾಕೆ ಬರುತ್ತಾರೆ? ಶಿವಂ ದುಬೆ ರೈಲಿನಲ್ಲಿ ಪ್ರಯಾಣಿಸುತ್ತಾರಾ? ಅವರು ಬೇರೆಯವರು ಇದನ್ನು ನಂಬಿ ಟಿಸಿ ಕೂಡ ಮುಂದೆ ಹೋಗಿದ್ದಾರೆ.
ಕೊನೆಗೆ ಮುಂಬೈನ ಬೋವಲಿ ನಿಲ್ದಾಣದಲ್ಲಿ ಇಳಿದಾಗ ಅಲ್ಲಿಯ ಪೊಲೀಸರು ಶಿವಂ ದುಬೆ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.
ಇದನ್ನೂ ಓದಿ: IPL 2026: ಡಬಲ್ ಧಮಾಕಾ… 4 ದಿನಗಳಲ್ಲಿ 8 ಪಂದ್ಯಗಳು
ಇದೀಗ ಟಿ20 ಅಭಿಮಾನಿ ಗೆದ್ದ ಬಳಿಕ ಕೂಡ ಸಿಂಪಲ್ ರೈಲಿನಲ್ಲಿ ಪ್ರಯಾಣಿಸಿರುವ ಶಿವಂ ದುಬೆಯ ಜರ್ನಿಸ್ಟೋರಿ ವೈರಲ್ ಆಗಿದ್ದು, ಅವರ ಸರಳತೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.