ಶಿವಮೊಗ್ಗ, ಫೆಬ್ರವರಿ 09: ಶಿವಮೊಗ್ಗ (ಶಿವಮೊಗ್ಗ) ಸೈಬರ್ ಕಾರ್ಯಾಚರಣೆ ನಡೆಸಿ ಆನ್‌ಲೈನ್ ವಂಚ (ಸೈಬರ್ ಅಪರಾಧ) ನನ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶರತ್ ಕುಮಾರ್ ಕೆ ಬಂಧಿತ ಆರೋಪಿ. ಸದ್ಯ ಬಂಧಿತನಿಂದ ಬಳಕೆ ಆಗದ ಬೇರೆ ಬೇರೆ ಜನರ ವಿವಿಧ ಬ್ಯಾಂಕ್‌ಗಳ 18 ಪಾಸ್ ಬುಕ್, 07 ಚೆಕ್ ಬುಕ್, 25 ಎಟಿಎಂ ಕಾರ್ಡ್, ಎರಡು ಮೊಬೈಲ್ ಸೇರಿದಂತೆ ಎರಡು ಕ್ಯೂ ಆರ್ ಕೋಡ್ ಸ್ಕ್ಯಾನರ್ ಸೀಜ್ ಮಾಡಲಾಗಿದೆ. ಸೈಬರ್ ವಂಚನೆ ಪ್ರಕರಣದಲ್ಲಿ ಆರೋಪಿಗೆ ಸದ್ಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
11.48 ಕೋಟಿ ರೂ ವ್ಯವಹಾರ
ಆನ್ ಲೈನ್ ವಂಚಕ ಶರತ್ ಕುಮಾರ್ ಕೆ. ಆನ್‌ಲೈನ್ ವಂಚಕರ ಜೊತೆ ಸಂಪರ್ಕ ಹೊಂದಿದ್ದ. ವಿವಿಧ ಬ್ಯಾಂಕ್‌ಗಳಲ್ಲಿ ಬಳಕೆ ಆಗದ 19 ಖಾತೆಗಳನ್ನು ದುರ್ಬಳಕೆ ಮಾಡುವ ಮೂಲಕ 11.48 ಕೋಟಿ ರೂ ಹಣದ ವ್ಯವಹಾರ ಮಾಡಿದ್ದಾನೆ.
ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ?
ಇಂತಹ ಖಾತೆಗಳ ಮಾಹಿತಿ ಪಡೆದು ಖುದ್ದು ಈತನೇ ಅದನ್ನು ನಂತರ ಮಾಡುತ್ತಿದ್ದೆ. ಈ ಎಲ್ಲಾ 19 ಖಾತೆಗೆ ಬಂದಿರುವ ಹಣವನ್ನು ಈ ಬೇರೆ ಬೇರೆ ಖಾತೆಗಳಿಗೆ ವರ್ಗವಣೆ ಮಾಡಿದ್ದಾನೆ. ಆದರೆ ಕೊನೆಗೂ ವಂಚಕ ಶಿವಮೊಗ್ಗ ಸೈಬರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ದಾವಣಗೆರೆ ಮಹಾನಗರ ಪಾಲಿಕೆ ವಲಯ ಕಚೇರಿಯ ತಂತ್ರಾಂಶ ಹ್ಯಾಕ್
ಇತ್ತೀಚೆಗೆ ಸೈಬರ್ ವಂಚಕರು ದಾವಣಗೆರೆ ಮಹಾನಗರ ಪಾಲಿಕೆ ವಲಯ ಕಚೇರಿಯ ತಂತ್ರಾಂಶಕ್ಕೆ ಕನ್ನ ಹಾಕಿದ್ದರು. ಪಾಲಿಕೆಯ ಈ – ಆಸ್ತಿ ತಂತ್ರಾಂಶವನ್ನೇ ಹ್ಯಾಕ್ ಮಾಡಿತ್ತು. ಆ ಮೂಲಕ ಅಕ್ರಮವಾಗಿ ಈ- ಆಸ್ತಿಗೆ ಅನುಮೋದನೆ ನೀಡಿದ್ದರು. ದಾವಣಗೆರೆ ಮಹಾನಗರ ಪಾಲಿಕೆ ವಲಯ ಕಚೇರಿ-1 ರಲ್ಲಿ ಘಟನೆ ನಡೆದಿತ್ತು. ಕೃತ್ಯ ನಡೆದು ಆರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿದ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್ ಮ್ಯಾನ್ ಅರೆಸ್ಟ್
ಅಧಿಕಾರಿಗಳ ಗಮನಕ್ಕೆ ಬಾರದೇ ಇ- ಸ್ವತ್ತು ಅನುಮೋದನೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇ-ಸ್ವತ್ತು ಅನುಮೋದನೆ ವಲಯ ಆಯುಕ್ತರ ಲಾಗಿನ್ ಐಡಿ ಪಾಸ್ ವರ್ಡ್ ಮೂಲಕ ಹೇಳಲಾಗಿದೆ. ವಂಚಕರು ಅಯುಕ್ತರ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಸೈಬರ್ ವಂಚಕರ ವಿರುದ್ಧ ಸೆನ್ ಪೊಲೀಸ್ ಠಾಣೆ ವಲಯ ಆಯುಕ್ತ ಕೆ ನಾಗರಾಜ್ ದೂರು ದಾಖಲಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.