ಶಿವಮೊಗ್ಗ, ಡಿಸೆಂಬರ್ 05: ಜಮೀನು (ಭೂಮಿ) ಸ್ವಾಧೀನಪಡಿಸಿಕೊಂಡು ಪರಿಹಾರ ನೀಡದ ವಿರುದ್ಧ ರೈತನೊಬ್ಬ (ರೈತ) ಆದೇಶ ತಂದಿದ್ದಾನೆ. ಜಿಲ್ಲಾಧಿಕಾರಿ ಕಾರು ಹಾಗೂ ಕಚೇರಿಯ ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದ್ದು, ನ್ಯಾಯಾಲಯದ ಆದೇಶದ ಪ್ರತಿ ಹಿಡಿದು ಡಿಸಿ ಕಚೇರಿಗೆ ಬಂದ ರೈತ, ನನ್ನ ಜಮೀನಿನ 95 ಲಕ್ಷ ರೂ. ಪರಿಹಾರ ಕೊಡಿ, ಇಲ್ಲವೇ ಕಾರು ಕೊಡಿ ಅಂತಾ ಪಟ್ಟು ಹಿಡಿದಿದ್ದಾರೆ.
ಶಿವಮೊಗ್ಗ ಹರಮಘಟ್ಟ ಗ್ರಾಮದ ನಂದ್ಯಪ್ಪ ಎಂಬ ರೈತನಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆ ಜಿಲ್ಲಾಧಿಕಾರಿ ಕಾರು ಹಾಗೂ ಕಚೇರಿಯ ಜಪ್ತಿಗೆ ಶಿವಮೊಗ್ಗ ನ್ಯಾಯಾಲಯ ಆದೇಶ ನೀಡಿದೆ. 1992ರಲ್ಲಿ ಒಮ್ಮೆ ವಶಪಡಿಸಿಕೊಂಡಿದ್ದು ಈವರೆಗೂ ಪರಿಹಾರ ನೀಡಿಲ್ಲ ಅಂತಾ ನ್ಯಾಯಾಲಯದ ಮೊರೆ ಹೋಗಿದ್ದ ನಂದ್ಯಪ್ಪನಿಗೆ ನ್ಯಾಯಾಲಯ ಆದೇಶ ನೀಡಿದೆ.
ಇದನ್ನೂ ಓದಿ: ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಕಿತ್ತುಕೊಂಡಿದೆ: ಇಂಡಿಗೋ ವಿರುದ್ಧ ಪ್ರಯಾಣಿಕ ಆಕ್ರೋಶ
ಅಷ್ಟಕ್ಕೂ 1992ರಲ್ಲಿ 22 ಲಕ್ಷ ರೂ ಪರಿಹಾರ ನೀಡಬೇಕಿದ್ದ ಸರ್ಕಾರ, ಕೇವಲ 9 ಲಕ್ಷ ರೂ. ಪರಿಹಾರ ನೀಡಿ ಉಳಿದ 13 ಲಕ್ಷಕ್ಕೆ ವಿಳಂಬವಾಗಿದೆ. ಹೀಗಾಗಿ ಇದೀಗ 95 ಲಕ್ಷದ 88,283 ರೂ ಹಣ ಪರಿಹಾರವಾಗಿ ನೀಡುವಂತೆ ಶಿವಮೊಗ್ಗ 2 ನೇ ಜೆ.ಎಂ.ಎಫ್.ಸಿ. ನ್ಯಾಯಾಲಯ ಆದೇಶಿಸಿದೆ.
ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದ್ದಿಷ್ಟು
ಒಂದು ವೇಳೆ ಪರಿಹಾರ ನೀಡದೆ ಹೋದರೆ, ಜಿಲ್ಲಾಧಿಕಾರಿಗಳ ಕಾರು ಮತ್ತು ಕಚೇರಿ ಪಿಠೋಪಕರಣ ಜಪ್ತಿ ಮಾಡಲಾಗಿದೆ. ಹೀಗಾಗಿ ಕೋರ್ಟ್ ಆಮೀನ್ ಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತ, ಜಿಲ್ಲಾಧಿಕಾರಿ ಮತ್ತೊಮ್ಮೆ ಭೇಟಿ ಮಾಡಿ ಪರಿಹಾರ ಕೊಡಿ ಅಂತಾ ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ನನಗೆ ಮಾಹಿತಿ ಕೊರತೆ ಇದೆ, ನೋಟಿಸ್ ಸಹ ನನಗೆ ಸಿಕ್ಕಿಲ್ಲ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದ್ದಾರೆ. ರೈತನಿಗೆ ತೊಂದರೆಯಾಗದಂತೆ ಪರಿಹಾರಕ್ಕಾಗಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವ ಭರವಸೆ ಇದೆ.
ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಬಲ್ಡೋಟಾ ಕಾರ್ಖಾನೆ ವಿವಾದ: ಹೋರಾಟಕ್ಕಿಳಿದ ರೈತರು
ಒಟ್ಟಿ ಶಿವಮೊಗ್ಗದ ಈ ರೈತನ 12 ಜಮೀನಿಗೆ ಪರಿಹಾರವಾಗಿ 2 ಲಕ್ಷ ರೂ. ಮಾತ್ರ ನೀಡಬೇಕಿದ್ದ, ಈಗ ನ್ಯಾಯಾಲಯದ ಆದೇಶದಂತೆ 95 ಲಕ್ಷ ರೂ. ನೀಡಲಾಗಿದೆ. ರೈತನಿಗೆ ಜಿಲ್ಲಾಧಿಕಾರಿ ನೀಡಿದ ಭರವಸೆಯಂತೆ ಪರಿಹಾರ ಸಿಗುತ್ತಾ ಕಾದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.