ಶಿವಮೊಗ್ಗ, (ಡಿಸೆಂಬರ್ 03): ಮದುವೆಯಾಗಿ ಹೊಸ ಬಾಳನ್ನು ಆರಂಭಿಸಬೇಕಿದ್ದ ಯುವಕ, ಹಸೆಮಣೆ ಏರಿದ ಮರುದಿನವೇ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹನುಮಂತಪುರದ ನಿವಾಸಿಯಾಗಿರುವ ರಮೇಶ್(30) ಮೃತ ದುರ್ದೈವಿ. ಮದುವೆಯ ಬಳಿಕ ಹೆಂಡ್ತಿ ಮನೆಗೆ ಹೋಗಿದ್ದು, ಅಲ್ಲಿ ದೇವರ ದರ್ಶನಕ್ಕೆ ತೆರಳಿದ ಸಂದರ್ಭದಲ್ಲಿ ಯುವಕನಿಗೆ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ದುರದೃಷ್ಟವಶಾತ್ ಮಾರ್ಗ ಮಧ್ಯದಲ್ಲಿಯೇ ರಮೇಶ್ ಕೊನೆಯುಸಿರೆಳೆದಿದ್ದಾನೆ. ಇದರಿಂದ ಮದುವೆ ಸಂಭ್ರಮದ ಮನೆಯಲ್ಲಿ ಸೂತಕ ಆವರಿಸಿದ್ದು, ಕಣ್ಣುನೀರಿಡುತ್ತಿದೆ. ಅಷ್ಟ ಆಗಿದ್ದೇನು ಎಂಬ ಬಗ್ಗೆ ಎಲ್ಲರಿಗೂ ಹಂಚಿಕೊಂಡಿದ್ದು ಹೀಗೆ