ಶಿವಮೊಗ್ಗದಲ್ಲಿ ವ್ಯಾಪಾರಿ​​ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್​​: ಹಿಂದೂ ಸೇರಿ ಮೂವರು ಅರೆಸ್ಟ್​​

ಶಿವಮೊಗ್ಗದಲ್ಲಿ ವ್ಯಾಪಾರಿ​​ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್​​: ಹಿಂದೂ ಸೇರಿ ಮೂವರು ಅರೆಸ್ಟ್​​


ಶಾಸಕರ ಜೊತೆ ತೆರಳಿ ದೂರು ನೀಡಿದ್ದ ಹರೀಶ್

ಶಿವಮೊಗ್ಗ, ನವೆಂಬರ್ 21: ಮನೆಯಿಂದ ಬಸ್ ನಿಲ್ದಾಣದತ್ತ ತೆರಳುತ್ತಿದ್ದ ಪಾತ್ರೆ ವ್ಯಾಪಾರಿ ಹರೀಶ್ ಮೇಲೆ ಜಾತಿ ಕೇಳಿ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹರೀಶ್ ಮೇಲಿನ ಪ್ರಕರಣವು ಕೋಮು ಸ್ವರೂಪ ಪಡೆದುಕೊಳ್ಳುವಂತೆ ಎಚ್ಚೆತ್ತುಕೊಂಡಿದೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ಪ್ರಕರಣ ಸಂಬಂಧ ಎರಡು ತಂಡಗಳನ್ನು ರಚನೆ ಮಾಡಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಘಟನೆ ಸಂಬಂಧ ಅರ್ಮಾನ (21), ನಿರಂಜನ್ (20) ಮತ್ತು ಅಪ್ರಾಪ್ತ ಸೇರಿ ಮೂವರನ್ನು ಬಂಧಿಸಲಾಗಿದೆ. ಆಮೇಲೆ ಹಲ್ಲೆ ನಡೆಸಿದ್ದು ಅನ್ಯಕೋಮಿನ ಯುವಕರು ಬೆನ್ನಲ್ಲೇ, ಗ್ಯಾಂಗ್‌ನಲ್ಲಿ ಹಿಂದೂಗಳು ಇಬ್ಬರು ಎಂಬ ವಿಷಯ ಬೆಳಕಿಗೆ ಬಂದಿದೆ.

ಘಟನೆ ಏನು?

ನ. 15ರ ರಾತ್ರಿ ಮನೆಯಿಂದ ಬಸ್ ನಿಲ್ದಾಣದತ್ತ ತೆರಳುತ್ತಿದ್ದ ಪಾತ್ರೆ ವ್ಯಾಪಾರಿ ಹರೀಶ್ ಮೇಲೆ ನಾಲ್ವರು ಡೆಡ್ಲಿ ಅಟ್ಯಾಕ್ ನಡೆಸಿದ್ದರು. ಆರೋಪಿಗಳು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಹರೀಶ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ನವೆಂಬರ್ 17 ರಂದು ಶಾಸಕ ಚನ್ನಬಸಪ್ಪ ಜೊತೆ ಬಂದು ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನೆ ನಡೆದು ಎರಡು ದಿನ ಕಳೆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಜೊತೆಗೆ, ಮಾರ್ನಮಿ ಬೈಲು ಮತ್ತು ಆರ್ ಎಂಎಲ್ ಪುಂಡಪೋಕರಿಗಳ ಹಾವಳಿ ಜಾಸ್ತಿ, ಬಡಾವಣೆಯಲ್ಲಿ ವಾಸ ಮಾಡಲು ಭಯವಾಗುತ್ತದೆ ಎಂದು ಹರೀಶ್ ಹೇಳಿದ್ದಾರೆ.

ಇದನ್ನೂ ಓದಿ: ಕೊಲೆ ಯತ್ನ ಆರೋಪದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನ

ಘಟನೆ ಸಂಬಂಧ ಆಕ್ರೋಶ ಹೊರಹಾಕಿದ್ದ ಶಾಸಕ ಚನ್ನಬಸಪ್ಪ, ಈ ಭಾಗದ ಜನರಿಗೆ ಪೊಲೀಸರಿಗೆ ದೂರು ನೀಡಲು ಭಯಪಡಬೇಕಾದ ವಾತಾವರಣಸೃಷ್ಟಿಯಾಗಿದೆ. ದೊಡ್ಡ ಕೊಟ್ಟಪೇಟೆ ಆರೋಪಿಗಳ ಬಂಧನಕ್ಕೆ ಬಿಟ್ಟು ದೂರು ನೀಡಿದ ಮಾಹಿತಿ ಲೀಕ್ ಮಾಡುತ್ತಾರೆ. ದೂರು ಕೊಟ್ಟವರ ಮಾಹಿತಿ ಪಡೆದ ಆರೋಪಿಗಳು ಅವರ ಮನೆ ಮೇಲೆ ದಾಳಿ ಮಾಡುತ್ತಾರೆ. ಎಲ್ಲಾ ಕಾನೂನು ಸುವ್ಯವಸ್ಥೆ ಸಂಪೂರ್ಣ ಹೆಡಿಗೆಟ್ಟು ಹೋಗಿದ್ದು, ಪೊಲೀಸ್ ಇಲಾಖೆ ಸತ್ತು ಹೋಗಿದೆ ಎಂದು ಕಿಡಿ ಕಾರಿದ್ದರು. ಜೊತೆಗೆ ಈ ಪ್ರಕರಣವನ್ನು ಜಿಲ್ಲಾ ಪೊಲೀಸ್ ಉಸ್ತುವಾರಿ ವಹಿಸಿಲ್ಲ ಎಂದು ಆರೋಪಿಸಿ ಗೃಹ ಸಚಿವ ಪರಮೇಶ್ವರ್ ಮತ್ತು ಡಿಜಿ ಐಜಿಪಿ ಸಲೀಂ ಮತ್ತು ಅಪರ ಪೊಲೀಸ್ ಮಹಾನಿರ್ದೇಶಕ ಹಿತೇಂದ್ರ ಅವರನ್ನು ಭೇಟಿ ಮಾಡಿ ಘಟನೆ ಕುರಿತು ಚರ್ಚಿಸಿದ್ದಾರೆ. ಆ ಬೆನ್ನಲ್ಲೇ ಶಿವಮೊಗ್ಗಕ್ಕೆ ಆಗಿರುವ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ, ಶಾಸಕ ಚನ್ನಬಸಪ್ಪ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರು ಹರೀಶ್ ಅವರ ಮೇಲೆ ಹಲ್ಲೆ ಪ್ರಕರಣ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 12:32 pm, ಶುಕ್ರ, 21 ನವೆಂಬರ್ 25



Source link

Leave a Reply

Your email address will not be published. Required fields are marked *