100 ಕೋಟಿ ರೂಪಾಯಿ ಬಜೆಟ್​​ನಲ್ಲಿ ಸಿದ್ಧವಾಯ್ತು ‘45’ ಸಿನಿಮಾ?

100 ಕೋಟಿ ರೂಪಾಯಿ ಬಜೆಟ್​​ನಲ್ಲಿ ಸಿದ್ಧವಾಯ್ತು ‘45’ ಸಿನಿಮಾ?


ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಕನ್ನಡದ ’45’ ಚಿತ್ರ (45 ಚಲನಚಿತ್ರ) ಕೂಡ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಉಪೇಂದ್ರ, ಶಿವರಾಜ್ ಕುಮಾರ್, ರಾಜ್ ಬಿ. ಶೆಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಅರ್ಜುನ್ ಜನ್ಯ (ಅರ್ಜುನ್ ಜನ್ಯ) ಅವರ ಮೊದಲ ನಿರ್ದೇಶನದ ಸಿನಿಮಾ ಎಂಬುದು ವಿಶೇಷ. ದೊಡ್ಡ ಬಜೆಟ್ ನಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 25 ರಂದು ಕ್ರಿಸ್ಮಸ್ ಪ್ರಯುಕ್ತ ಬಿಡುಗಡೆ ಆಗಲಿರುವ ಈ ಚಿತ್ರದ ಬಜೆಟ್ ಬರೋಬ್ಬರಿ 100 ಕೋಟಿ ರೂಪಾಯಿಗಳು.

ತುಂಬಾ ಅದ್ದೂರಿಯಾಗಿ ’45’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಬಿಡುಗಡೆ ಆಗಿರುವ ಆಫ್ರೋ ಟಪ್ಪಾಂಗ್ ಹಾಡು ಎಲ್ಲರಿಗೂ ಇಷ್ಟವಾಗಿದೆ. ರಾಜ್ ಬಿ. ಶೆಟ್ಟಿ, ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅವರ ಕಾಂಬಿನೇಷನ್ ಆದ್ದರಿಂದ ಹೈಪ್ ಜೋರಾಗಿದೆ. ಕಥೆಯ ಮೇಲೆ ’45’ ತಂಡಕ್ಕೆ ಸಖತ್ ಭರವಸೆ ಇದೆ ಚಿತ್ರದ. ಅದಕ್ಕೆ ತಕ್ಕಂತೆಯೇ ಬಜೆಟ್ ಸುರಿಯಲಾಗಿದೆ.

‘ನಿರ್ಮಾಪಕ ರಮೇಶ್ ಅವರು ಸಂಪೂರ್ಣ ಸಹಕಾರದೊಂದಿಗೆ. ಯಾವುದೇ ರಾಜಿ ಇಲ್ಲದೇ ಸಿನಿಮಾ ಮಾಡಿದ್ದೇವೆ. ಹೆಚ್ಚು ಸಮಯ ನೀಡಿ ಸಿಜಿ ಕೆಲಸ ಮಾಡಿದ್ದಾರೆ’ ಎಂದು ಅರ್ಜುನ್ ಜನ್ಯ ಅವರು ಹೇಳಿದ್ದಾರೆ. ಇಡೀ ಸಿನಿಮಾದಲ್ಲಿ ಶೇಕಡ 45 ಭಾಗ ಗ್ರಾಫಿಕ್ಸ್ ಇರಲಿದೆ. ಈ ಎಲ್ಲ ಕಾರಣಗಳಿಂದಾಗಿ ’45’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಇದೆ.

’45’ ಸಿನಿಮಾಗೆ ಒಟ್ಟು ಎಷ್ಟು ಖರ್ಚಾಗಿದೆ ಎಂಬುದು ಚಿತ್ರತಂಡದವರು ಅಧಿಕೃತವಾಗಿ ಹೇಳಿಲ್ಲ. ಆದರೆ ಅಂದಾಜು 100 ಕೋಟಿ ರೂಪಾಯಿ ಎನ್ನುತ್ತಿವೆ ಮೂಲಗಳು. ಈ ಮೊದಲು ಬಜೆಟ್ ಬಗ್ಗೆ ರಮೇಶ್ ರೆಡ್ಡಿ ಅವರಿಗೆ ಪ್ರಶ್ನೆ ಎದುರಾಗಿತ್ತು. ‘ಸಿನಿಮಾಗೆ ನಾವು ಎಷ್ಟು ಬಜೆಟ್ ಹಾಕಿದ್ದೇವೆ ನೀವೇ ಸಿನಿಮಾ ನೋಡಿ ಹೇಳಬೇಕು. ಕಥೆಗೆ ಎಷ್ಟು ಬೇಕೋ ಅಷ್ಟು ಖರ್ಚಾಗಿದೆ. ಇದರಲ್ಲಿ ಯೂನಿವರ್ಸಲ್ ಸಬ್ಜೆಕ್ಟ್ ಇದೆ’ ಎಂದು ಈ ಮೊದಲು ನಡೆದ ಸುದ್ದಿಗೋಷ್ಟಿಯಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಹೂವಿನ ಬಾಣದಂತೆ: ನಿತ್ಯಶ್ರೀ ರೀತಿಯೇ ವೇದಿಕೆಯಲ್ಲಿ ಹಾಡಿದ ಅರ್ಜುನ್ ಜನ್ಯ

ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡುವುದರ ಜೊತೆಗೆ ಸಂಗೀತ ಸಂಯೋಜಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ. ಉಪೇಂದ್ರ ಮತ್ತು ಶಿವಣ್ಣ ಅವರದ್ದು ಹಿಟ್ ಕಾಂಬಿನೇಷನ್. ಅವರ ಜೊತೆಗೆ ’45’ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಕೂಡ ಸೇರ್ಪಡೆ ಆಗಿರುವ ಅಭಿಮಾನಿಗಳು ಈ ಸಿನಿಮಾವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *