ಪತಿ ಸೈಕೋ ವರ್ತನೆ ಆರೋಪ ಕೇಸ್​​ಗೆ ಭರ್ಜರಿ ಟ್ವಿಸ್ಟ್​: ಮಹಿಳೆಯಾಗಿದ್ದು ಮೂರು ಮದುವೆ?

ಪತಿ ಸೈಕೋ ವರ್ತನೆ ಆರೋಪ ಕೇಸ್​​ಗೆ ಭರ್ಜರಿ ಟ್ವಿಸ್ಟ್​: ಮಹಿಳೆಯಾಗಿದ್ದು ಮೂರು ಮದುವೆ?


ಬೆಂಗಳೂರು, ಜನವರಿ 11: ಫೋನ್ ನೋಡಿ ಕ್ರಿಯೆಗೆ ಒತ್ತಾಯ ಮಾಡುವ ಜೊತೆಗೆ ಮನೆಯಲ್ಲಿ ಎಲ್ಲರ ಮುಂದೆ ಬೆತ್ತಲೆಯಾಗಿ ಪತಿಯೇ ದೃಢತಾನೆ. ಅತ್ತೆ ಮಾವನ ಮುಂದೆಯೇ ಬಟ್ಟೆಯಿಲ್ಲದೆ ತಿರುಗಾಡೋದಲ್ಲದೆ, ಜೊತೆಗೆ ಪ್ಯಾಸೇಜ್‌ಗೆ ಕೂಡ ಹೋಗಿ ಅಕ್ಕ ಪಕ್ಕದವರಿಗೂ ಮುಜುಗರ ಉಂಟುಮಾಡಿದ್ದಾನೆ ಎಂದು ಪತ್ನಿ ಆರೋಪಿಸಿದ ಪ್ರಕರಣಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಆರೋಪಿ ಪತಿ ಮಂಜುನಾಥ್ ಪತ್ನಿ ವಿರುದ್ಧವೇ ಬಿಗ್ ಬಾಂಬ್ ಸಿಡಿಸಿದ್ದಾರೆ.

ತನ್ನ ಮೇಲೆ ಸೈಕೋ ವರ್ತನೆ ಮಾಡಿರುವ ಪತ್ನಿ ವಿರುದ್ಧವೇ ಪತಿ ಮಂಜುನಾಥ್ ಗಂಭೀರ ಆರೋಪ ಮಾಡಿದ್ದು, ಹಲವು ಮದುವೆಗಳು ಅವಳಿಗಾಗಿವೆ. ಈಗ ನಾಲ್ಕನೇ ಗಂಡ ಬೇಕಂತೆ. ಶೋಕಿಗೆ ಗಂಡಂದಿರ ಹಣ ಹೀಗೆ ಮಾಡ್ತಿದ್ದಾಳೆ ಎಂದು ದೂರಿದ್ದಾರೆ. ಎರಡನೇ ಗಂಡನ ಜೊತೆ ಜಾಲಿ ಟ್ರಿಪ್, ಶೋಕಿಗೆ ಗಂಡನ ಹಣ ಚಿನ್ನಾಭರಣ ಬಳಸಿಕೊಂಡರು. ಆ ಬಳಿಕ ಮೂರನೇಯವನಾಗಿ ನನಗೆ ಖೆಡ್ಡಾ ತೊಡಿದ್ದಳು. 30 ಲಕ್ಷ ಹಣ, 50 ಗ್ರಾಂ ಚಿನ್ನಾಭರಣ, ಐಪೋನ್, ಐಪ್ಯಾಡ್ ಮತ್ತು ಟ್ಯಾಬ್‌ಗಳನ್ನು ತನ್ನಿಂದ ಪಡೆದಿರೋದಾಗಿ ದೂರುದಾರೆ ಮೇಘಶ್ರೀ ವಿರುದ್ಧವೇ ಮಂಜುನಾಥ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಬೆತ್ತಲೆ ಓಡಾಟ, ಫೋನ್ ನೋಡಿ ಎಲ್ಲಾ ಕ್ರಿಯೆಗೆ ಒತ್ತಾಯ; ಸೈಕೋ ಪತಿ ಕಾಟಕ್ಕೆ ಪತ್ನಿ ಕಂಗಾಲು

ಮೊದಲ ಹಾಗೂ ಎರಡನೇ ಗಂಡನ ವಿರುದ್ಧ ಮೇಘಶ್ರೀ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದಾಳೆ ಎಂದು ಆರೋಪಿಸಿರುವ ಮಂಜುನಾಥ್ ತನ್ನ ವಿರುದ್ಧ ಕಂಪ್ಲೇಂಟ್‌ಗೆ ಹಾಜರಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕೇವಲ ದೇವಾಸ್ಥಾನದಲ್ಲಿ ಹಾರ ಬದಲಿಸಿಕೊಂಡು ಗಂಡ ಎಂದು ಆರೋಪಿಸಿ ಆಕೆ ತನ್ನ ವಿರುದ್ಧ ದೂರು ನೀಡಿದ್ದಾಳೆ. ಆಕೆಗೆ 12 ಲಕ್ಷ ಹಣ ನೀಡಿ ಆಕೆಗೆ ಮನೆ ಲೀಸ್ ಕೊಡಿಸಿದ್ದಾರೆ. ಅವಳ ಅಸಲಿ ಮುಖವಾಡವನ್ನ ಪೊಲೀಸರ ಮುಂದೆ ಬಯಲು ಮಾಡ್ತೀನಿ ಎಂದು ಮಂಜುನಾಥ್ ಹೇಳಿದ್ದಾರೆ.

ಮದುವೆಗೆ ಅಂತಾ ದಾಖಲಾತಿ ಕೇಳಿದಾಗ ಆಕೆ ನೀಡಿಲ್ಲ. ಮನೆಯಲ್ಲಿ ಬಟ್ಟೆ ಬದಲಿಸುವಾಗ ಕದ್ದು ಫೋಟೋ ತೆಗೆದಿದ್ದಾಳೆ. ಆಕೆ ಕೆಲಸಕ್ಕೆ ಸೇರಿದ್ದು ಕೂಡ ಫೇಕ್ ದಾಖಲೆಗಳನ್ನು ನೀಡಿ. ಜೊತೆಗೆ ರೌಡಿಶೀಟರ್‌ನಿಂದ ತನಗೆ ಧಮ್ಕಿ ಕೂಡ ಹಾಕಿದ್ದಾಳೆ ಎಂದು ಆರೋಪಿ ಮಂಜುನಾಥ್ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *