ಶ್ರಾವಣಿ ಸುಬ್ರಹ್ಮಣ್ಯ: ಶಿಕ್ಷಣ ಸಚಿವರಿಗೆ ಈ ವಯಸ್ಸಲ್ಲಿ ಶುರುವಾಯ್ತು ಕುಚುಕುಚು: ಮನೆಯವ್ರ ಕೈಗೆ ಸಿಕ್ಕಿಬಿದ್ರು

ಶ್ರಾವಣಿ ಸುಬ್ರಹ್ಮಣ್ಯ: ಶಿಕ್ಷಣ ಸಚಿವರಿಗೆ ಈ ವಯಸ್ಸಲ್ಲಿ ಶುರುವಾಯ್ತು ಕುಚುಕುಚು: ಮನೆಯವ್ರ ಕೈಗೆ ಸಿಕ್ಕಿಬಿದ್ರು

ಶ್ರಾವಣಿ ಸುಬ್ರಹ್ಮಣ್ಯ: ಶಿಕ್ಷಣ ಸಚಿವರಿಗೆ ಈ ವಯಸ್ಸಲ್ಲಿ ಶುರುವಾಯ್ತು ಕುಚುಕುಚು: ಮನೆಯವ್ರ ಕೈಗೆ ಸಿಕ್ಕಿಬಿದ್ರು

ಕನ್ನಡದ ಜನಪ್ರಿಯ ಧಾರಾವಾಹಿಗಳಾದ ‘ಶ್ರಾವಣಿ-ಸುಬ್ರಹ್ಮಣ್ಯ’, ‘ಅಮೃತಧಾರೆ’, ಮತ್ತು ‘ಭಾಗ್ಯಲಕ್ಷ್ಮಿ’ ಮಧ್ಯವಯಸ್ಸಿನ ಪ್ರೇಮಕಥೆಗಳನ್ನು ಪ್ರದರ್ಶಿಸುತ್ತಿವೆ. ಈ ಕಥೆಗಳು ಸಮಾಜದ ಕಟ್ಟುಪಾಡುಗಳನ್ನು ಮೀರಿ, ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬ ಸಂದೇಶವನ್ನು ಸಾರುತ್ತಿದೆ.

ವಯಸ್ಸು ಎನ್ನೋದು ಒಂದು ಸಂಖ್ಯೆ ಮಾತ್ರ. ಮನಸ್ಸು ಇದ್ದರೆ ಯಾವ ವಯಸ್ಸಿನಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವ ಮಾತಿದೆ. ಅದೇ ರೀತಿ ಪ್ರೀತಿಗೂ ವಯಸ್ಸು ಮುಖ್ಯವಲ್ಲ, ಮನಸ್ಸು ಮುಖ್ಯ ಎನ್ನಲಾಗುತ್ತದೆ. ಒಂಟಿ ಜೀವನದಲ್ಲಿ ಬೇಸತ್ತಾಗ, ತನ್ನವರು ಎನ್ನುವ ಒಂದು ಆಸರೆ ಬೇಕು ಎಂದು ಯಾವ ವಯಸ್ಸಿನಲ್ಲಾದರೂ ಎನ್ನಿಸುವುದು ಉಂಟು. ಆದರೆ ಕುಟುಂಬ, ಮನೆ, ಮಕ್ಕಳು, ಸಮಾಜ ಎಂದೆಲ್ಲಾ ಅಂಜಿ ತಮ್ಮ ಆಸೆಗಳನ್ನು ಹುದುಗಿಸಿಟ್ಟುಕೊಂಡವರು ಅದೆಷ್ಟೋ ಮಂದಿ. ಆದರೆ ಈ ಎಲ್ಲಾ ಬಂಧಗಳನ್ನು ಮೀರಿ ಯಾವ ವಯಸ್ಸಿನಲ್ಲಾದರೂ ಮನಸ್ಸು ಮಾಡಿದರೆ ಲವ್​ ಮಾಡೋದು ತಪ್ಪಲ್ಲ ಎನ್ನುವುದನ್ನು ಕೆಲವು ಸೀರಿಯಲ್​ಗಳು ತೋರಿಸಿಕೊಡುತ್ತಿವೆ.

ಇದೀಗ ಶ್ರಾವಣಿ- ಸುಬ್ರಹ್ಮಣ್ಯ (Shravani Subramanya Serial) ಸೀರಿಯಲ್​ನಲ್ಲಿ, ಶಿಕ್ಷಣ ಸಚಿವ ವೀರುಗೆ ಲವ್​ ಶುರುವಾಗಿದೆ. ಆತನ ಆರೋಗ್ಯವನ್ನು ನೋಡಿಕೊಳ್ಳಲು ಮಾರುವೇಷದಲ್ಲಿ ಬಂದಿದ್ದ ಪತ್ನಿ ನಂದಿನಿಯನ್ನೇ ವೀರು ಲವ್​ ಮಾಡ್ತಿದ್ದಾನೆ. ಆದರೆ ಸೀರಿಯಲ್​ನಲ್ಲಿ ಕೆಲವೊಮ್ಮೆ ವಿಚಿತ್ರ ಎನ್ನಿಸುವುದು ಉಂಟು. ಅದರಂತೆ ಇಲ್ಲಿಯೂ ವೀರುಗೆ ಅವಳು ತನ್ನ ಪತ್ನಿ ಎನ್ನುವುದು ತಿಳಿದಿಲ್ಲ. ಅವಳು ತನ್ನನ್ನು ತಾನು ಜಾನಕಿ ಎಂದು ಪರಿಚಯಿಸಿಕೊಂಡಿದ್ದಾಳೆ.

ಇದೀಗ ಜಾನಕಿ ತೋರುವ ಪ್ರೀತಿಗೆ ವೀರು ಫಿದಾ ಆಗಿದ್ದಾನೆ. ಅವಳ ಮೇಲೆ ಲವ್​ ಶುರುವಾಗಿದೆ. ಅವಳಿನ್ನೂ ಮಾಸ್ಕ್​ ವುಮೆನ್​ ಆಗಿಯೇ ಇದ್ದಾಳೆ. ವೀರು ತನ್ನ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದು, ತನ್ನ ಪತಿಯನ್ನೇ ಮತ್ತೆ ಸೇರುವ ಖುಷಿಯಲ್ಲಿ ಇದ್ದಾಳೆ ನಂದಿನಿ. ಈಕೆಯೇ ನಂದಿನಿ ಎಂದು ತಿಳಿದರೆ ಇನ್ನೇನು ಆಗುತ್ತದೆಯೋ ಮುಂದೆ ಸೀರಿಯಲ್​​ನಲ್ಲಿ ನೋಡಬೇಕಿದೆ ಅಷ್ಟೇ. ಒಟ್ಟಿನಲ್ಲಿ ಪ್ರೀತಿಗೆ ವಯಸ್ಸಲ್ಲ, ಮನಸ್ಸು ಮುಖ್ಯ ಎನ್ನೋದನ್ನು ತೋರಿಸಿದ್ದಾನೆ ವೀರು. ಆದರೆ ಈತನ ನಡವಳಿಕೆ ಮನೆಯವರಿಗೆ ಅನುಮಾನ ತರಿಸಿದೆ.

ಇದಾಗಲೇ ಅಮೃತಧಾರೆಯಲ್ಲಿ ಮಧ್ಯವಯಸ್ಸಿನ ಲವ್​ ಸ್ಟೋರಿ ತೋರಿಸಲಾಗಿದೆ. ಆದರೆ ಈ ಸೀರಿಯಲ್​ನಲ್ಲಿ ಇಬ್ಬರಿಗೂ ಮದುವೆಯಾಗಿರಲಿಲ್ಲ. ಆದ್ದರಿಂದ ಇದು ಸ್ವಲ್ಪ ಡಿಫರೆಂಟ್​ ಕಥೆ. ಮಧ್ಯ ವಯಸ್ಸಿನವರಾದರೂ ಮದುವೆಯಾದರೆ ಸುಂದರ ಸಂಸಾರ ಮಾಡಲು ಸಾಧ್ಯ ಎನ್ನುವ ಒಳ್ಳೆಯ ಸಂದೇಶವನ್ನು ಈ ಸೀರಿಯಲ್​ ಕೊಡುತ್ತಿದೆ.

ಶ್ರೀಮಸ್ತು ಶುಭಮಸ್ತು ಸೀರಿಯಲ್​ನಲ್ಲಿ ತುಳಸಿ ಮತ್ತು ಮಾಧವ ಅವರ ಮದುವೆಯ ಬಗ್ಗೆ ತೋರಿಸಲಾಗಿತ್ತು. ಇದಕ್ಕೆ ಪರ- ವಿರೋಧ ನಿಲುವು ವ್ಯಕ್ತವಾಗಿತ್ತು. ಈ ವಯಸ್ಸಿನಲ್ಲಿ ಒಂಟಿತನ ಕಾಡುವಾಗ ಮದುವೆಯಾಗುವುದು ತಪ್ಪೇನಲ್ಲ, ಒಂದು ಜೀವದ ಆಸರೆ ಬೇಕು ಎನ್ನಿಸಿದಾಗ, ಹೀಗೆ ಮಾಡುವುದು ತಪ್ಪಲ್ಲ ಎಂದು ಹಲವರು ವಾದಿಸಿದ್ದರೆ, ಈ ವಯಸ್ಸಿನಲ್ಲಿ ಮಕ್ಕಳು, ಮೊಮ್ಮಕ್ಕಳನ್ನು ಆಡಿಸಿಕೊಂಡು ಇರಬೇಕಾದ್ರೆ ಮದುವೆಯೆಲ್ಲಾ ಯಾಕೆ ಎನ್ನುವ ವಿರೋಧವೂ ವ್ಯಕ್ತವಾಗಿತ್ತು. ಅದಾದ ಬಳಿಕ ತುಳಸಿ ಪ್ರೆಗ್ನೆಂಟ್​ ಆದಾಗಲಂತೂ ಇನ್ನಿಲ್ಲದ ಟೀಕೆಗಳು ಬಂದಿದ್ದವು.

ಆ ಬಳಿಕ, ಕಲರ್ಸ್​ ಕನ್ನಡದ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಇಬ್ಬರು ಮಕ್ಕಳ ಅಮ್ಮ ಭಾಗ್ಯ, ಆದಿಯನ್ನು ಇಷ್ಟಪಟ್ಟಾಗ ಇದರ ವಿರುದ್ಧ ದೊಡ್ಡ ಆಂದೋಲನವೇ ನಡೆದು ಹೋಗಿದೆ ಸೋಷಿಯಲ್​ ಮೀಡಿಯಾದಲ್ಲಿ. ಅದರಲ್ಲಿ ಹಲವರ ಮನಸ್ಥಿತಿ ಹೇಗಿದೆ ಎಂದರೆ, ಭಾಗ್ಯಳ ಅಮ್ಮ ಸುನಂದಾ ರೀತಿ. ಗಂಡ ಎಷ್ಟೇ ಕೆಟ್ಟವನಾದರೂ, ಎಷ್ಟೇ ಅನಾಚಾರ ಮಾಡಿದರೂ, ಪತ್ನಿ ಮಕ್ಕಳನ್ನು ಬಿಟ್ಟು ಇನ್ನೊಬ್ಬಳ ಹಿಂದೆ ಹೋದರೂ, ಪತ್ನಿಯಾದವಳು ಮಾತ್ರ ಆತನನ್ನು ಕ್ಷಮಿಸಬೇಕು. ಅವಳಿಗೆ ಬದುಕುವ ಹಕ್ಕೂ ಇಲ್ಲ, ಬೇರೊಬ್ಬನನ್ನು ಪ್ರೀತಿ ಮಾಡುವ ಅಧಿಕಾರವೂ ಇಲ್ಲ ಎನ್ನುವ ಮನಸ್ಥಿತಿಯ ಕಮೆಂಟ್ಸ್​ಗಳು ಸಾಕಷ್ಟು ಬರುತ್ತಿವೆ. ಆದರೆ ಭಾಗ್ಯ ಅನುಭವಿಸಿರುವ ಹಿಂಸೆಯನ್ನು ಪ್ರತಿನಿತ್ಯ ಟಿವಿಯಲ್ಲಿ ನೋಡುವ ಇನ್ನು ಕೆಲವರು ಭಾಗ್ಯ ಮತ್ತು ಆದಿ ಮದುವೆಯಾಗಬೇಕು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಮಧ್ಯ ವಯಸ್ಸಿನ ಪ್ರೀತಿಯ ಬಗ್ಗೆ ವಿಭಿನ್ನ ವಿಚಾರಧಾರೆಗಳ ಮನಸ್ಸುಗಳು ಹೇಗಿವೆ ಎನ್ನುವುದು ಈ ಸೀರಿಯಲ್​ ಮೂಲಕ ತಿಳಿಯುತ್ತಿದೆ.

Source link

Leave a Reply

Your email address will not be published. Required fields are marked *