
‘ಜಾದೂ ಹೈ ನಶಾ ಹೈ’ ಹಾಡಿಗೆ ನಾನು ಅನ್‌ಫಿಟ್ ಅಂದುಕೊಂಡಿದ್ದೆ!
ಬಾಲಿವುಡ್‌ನ ಗಾಯನ ಲೋಕದ ‘ಮೆಲೊಡಿ ಕ್ವೀನ್’ ಎಂದೇ ಖ್ಯಾತರಾಗಿರುವ ಶ್ರೇಯಾ ಘೋಷಾಲ್ (Shreya Ghoshal) ಅವರ ಧ್ವನಿಗೆ ಮನಸೋಲದವರೇ ಇಲ್ಲ. ಸಂಜಯ್ ಲೀಲಾ ಬನ್ಸಾಲಿ ಅವರ ‘ದೇವದಾಸ್’ ಚಿತ್ರದ ಮೂಲಕ ಸಿನಿಲೋಕಕ್ಕೆ ಪಾದಾರ್ಪಣೆ ಮಾಡಿದ ಶ್ರೇಯಾ, ಮೊದಲ ಚಿತ್ರದಲ್ಲೇ ಐದು ಹಾಡುಗಳನ್ನು ಹಾಡಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಆದರೆ, ನಮಗೆಲ್ಲಾ ಒಂದು ವಿಷಯ ಆಶ್ಚರ್ಯ ತರಬಹುದು; ಅಂತಹ ಅದ್ಭುತ ಆರಂಭದ ನಂತರವೂ ಶ್ರೇಯಾ ಅವರಿಗೆ ಅವಕಾಶಗಳಿಗಾಗಿ ಕಾಯಬೇಕಾದ ಪರಿಸ್ಥಿತಿ ಬಂದಿತ್ತು!