ಟಿ20 ಗೆದ್ದ ಬಳಿಕ ಟೀಮ್ ಇಂಡಿಯಾವನ್ನು ಅಭಿನಂದಿಸಿ ಶುಭಮನ್ ಗಿಲ್ (ಶುಬ್ಮನ್ ಗಿಲ್) ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಭಾರತ ತಂಡದ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್ ಇರಲಿಲ್ಲ.
ಇದರಲ್ಲೇ ಶುಭಮನ್ ಗಿಲ್ ಸಂಜು ಸ್ಯಾಮ್ಸನ್ ಅವರ ಫೋಟೋದಿಂದ ಎಡಿಟ್ ಮಾಡಿ ಎಂದು ಅಭಿಮಾನಿಗಳು ಆರೋಪಿಸಿದ್ದರು. ಇದಕ್ಕೆ ಸಾಕ್ಷಿಯಾಗಿ ಮತ್ತೊಂದು ಪೋಟೋವನ್ನು ಹಂಚಿಕೊಂಡಿದ್ದರು.
ಈ ಫೋಟೋದಲ್ಲಿ ಸಂಜು ಸ್ಯಾಮ್ಸನ್ ಜಸ್ಪ್ರೀತ್ ಬುಮ್ರಾ ಅವರ ಹಿಂಬದಿಯಲ್ಲಿ ನಿಂತಿರುವುದು ಕಾಣುತ್ತಿದೆ. ಹೀಗಾಗಿಯೇ ಶುಭಮನ್ ಗಿಲ್ ಉದ್ದೇಶಪೂರ್ವಕವಾಗಿಯೇ ಸಂಜು ಸ್ಯಾಮ್ಸನ್ ಅವರ ಫೋಟೋವನ್ನು ಎಡಿಟ್ ಮಾಡಿ ಹಂಚಿಕೊಂಡಿದ್ದಾರೆ ಆರೋಪಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಫ್ಯಾಕ್ಟ್-ಚೆಕ್ ಮಾಡಿದಾಗ ಗಿಲ್ ಹಂಚಿಕೊಂಡದ್ದು ಮತ್ತು ಅಭಿಮಾನಿಗಳು ಹೋಲಿಸುತ್ತಿದ್ದದ್ದು ಎರಡು ಬೇರೆ ಬೇರೆ ಫೋಟೋಗಳು. ಇವುಗಳನ್ನು ಕೆಲವು ಸೆಕೆಂಡುಗಳ ಅಂತರದಲ್ಲಿ ತೆಗೆಯಲಾಗಿದೆ. ಅಂದರೆ ಶುಭ್ಮನ್ ಗಿಲ್ ಹಂಚಿಕೊಂಡ ಫೋಟೋದಲ್ಲಿ ಸ್ಯಾಮ್ಸನ್ ಕಾಣಿಸುತ್ತಿಲ್ಲ ಎಂಬುದೇ ನಿಜ. ಇದೇ ಫೋಟೋವನ್ನು ಬಿಸಿ ಕೂಡಿಸಿದೆ.
ಅಷ್ಟೇ ಅಲ್ಲದೆ ಶುಭಮನ್ ಗಿಲ್ ಹಂಚಿಕೊಂಡ ಅದೇ ಫೋಟೋವನ್ನು ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ನಿರ್ದಿಷ್ಟ ಫ್ರೇಮ್ನಲ್ಲಿ ಸ್ಯಾಮ್ಸನ್ ಅವರ ಸ್ಥಾನವು ಕ್ಯಾಮೆರಾಕ್ಕೆ ಸರಿಯಾಗಿ ಕಾಣಿಸುತ್ತದೆ.
ಇದಾಗ್ಯೂ ಶುಭಮನ್ ಗಿಲ್ ವಿರುದ್ಧ ಇಂತಹ ಆರೋಪ ಮೂಡಿಬರಲು ಮುಖ್ಯ ಕಾರಣ, ಇಬ್ಬರ ನಡುವಣ ಪೈಪೋಟಿ. ಟೀಮ್ ಇಂಡಿಯಾದ ಆರಂಭಿಕ ಸ್ಥಾನಕ್ಕಾಗಿ ಶುಭಮನ್ ಗಿಲ್ ಹಾಗೂ ಸಂಜು ಸ್ಯಾಮ್ಸನ್ ನಡುವೆ ಪೈಪೋಟಿಯಿದ್ದು, ಹೀಗಾಗಿ ಈ ಫೋಟೋ ಹಂಚಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗಿದೆ.





