16

Image Credit : Instagram: Shwetha Chengappa
ಶ್ವೇತಾ ಚೆಂಗಪ್ಪ
ಕನ್ನಡ ಕಿರುತೆರೆಗೆ ನಟಿಯಾಗಿ ಎಂಟ್ರಿಕೊಟ್ಟು, ಬಳಿಕ ನಿರೂಪಕಿಯಾಗಿ ಮೋಡಿ ಮಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಮನರಂಜನೆ ನೀಡುತ್ತಿರುವ ನಟಿ ಶ್ವೇತಾ ಚೆಂಗಪ್ಪ. ಇದೀಗ ವಿಶೇಷ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
26
Image Credit : Instagram: Shwetha Chengappa
ಸ್ಪೆಷಲ್ ಫೋಟೋಸ್
ಹೌದು, ಶ್ವೇತಾ ಕೆಲ ದಿನಗಳ ಹಿಂದೆ ತಮ್ಮ ಇನ್’ಸ್ಟಾಗ್ರಾಂನಲ್ಲಿ ಗಂಡನ ಜೊತೆಗಿನ ಮುದ್ದಾದ ಅನ್ನೋದಕ್ಕಿಂತ ರೊಮ್ಯಾಂಟಿಕ್ ಬೀಚ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದು ವಿಶೇಷ ದಿನದ ಸಲುವಾಗಿ ಜೋಡಿ ಹಂಚಿಕೊಂಡ ವಿಶೇಷ ಫೋಟೊ ಆಗಿದೆ.
36
Image Credit : Instagram: Shwetha Chengappa
ಗಂಡನಿಗೆ ಪ್ರೀತಿಯ ವಿಶಸ್
ಕಡಲು,ಸೂರ್ಯ ಹಾಗೂ ನನ್ನ ಕಿರಣಾ…”ಡಿಸೆಂಬರ್ 4″ ನೆನಪಿಟ್ಟುಕೊಳ್ಳಲು ಮತ್ತು ಆಚರಿಸಲು ಬಹಳ ವಿಶೇಷವಾದ ದಿನ ಎಂದು ನಟಿ ಕ್ಯಾಪ್ಶನ್ ಹಾಕಿದ್ದಾರೆ. ಕಾಮೆಂಟ್ ಸೆಕ್ಷನ್ ನಲ್ಲಿ ಜನ ಎಂಗೇಜ್ ಮೆಂಟ್ ಆನಿವರ್ಸರಿಯ ಶುಭಾಶಯಗಳು ಎಂದಿದ್ದಾರೆ.
46
Image Credit : Instagram: Shwetha Chengappa
ಕಪ್ಪು ಉಡುಗೆಯಲಿ ಶ್ವೇತಾ
ಕೂರ್ಗಿನ ಬ್ಯೂಟಿ ಶ್ವೇತಾ ಚೆಂಗಪ್ಪ ಕಪ್ಪು ಬಣ್ಣದ ಟಾಪ್ ಮತ್ತು ಪ್ಯಾಂಟ್ ಧರಿಸಿದ್ದು, ತುಂಬಾನೆ ಸುಂದರವಾಗಿ, ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಗಂಡನ ಕೈಹಿಡಿದು, ಕಣ್ಣಲ್ಲಿ ಕಣ್ಣಿಟ್ಟು ನೋಡುವ, ನೀರಿನ ಅಲೆಗಳ ಜೊತೆ ಆಡುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
56
Image Credit : Instagram: Shwetha Chengappa
ನಮ್ಮ ಕಾದಂಬರೀನಾ?
ಇನ್ನು ಕಾಮೆಂಟ್ ನಲ್ಲಿ ಒಬ್ಬರು ಅಭಿಮಾನಿ ಶ್ವೇತಾ ಅವರ ಉಡುಪನ್ನು ನೋಡಿ, ಇವರು ನಮ್ಮ ಕಾದಂಬರೀನಾ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಹಲವು ಜನರು ಮುದ್ದಾದ ಜೋಡಿಗಳು, ಯಾವುದೇ ದೃಷ್ಟಿ ಬೀಳದೇ ಇರಲಿ ಎಂದು ಹಾರೈಸಿದ್ದಾರೆ.
66
Image Credit : Instagram: Shwetha Chengappa
ಶ್ವೇತಾ ಚೆಂಗಪ್ಪ ಮದುವೆ
ಶ್ವೇತಾ ಚೆಂಗಪ್ಪ ಅವರು ಕಿರಣ್ ಅಪ್ಪಚ್ಚು ಎನ್ನುವ ಕೊಡಗಿನವರನ್ನೆ ಪ್ರೀತಿಸಿ ಮದುವೆಯಾದರು. ಕಿರಣ್ ಅವರು ಡಿಜಿಟಲ್ ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗಳಿಗೆ ಜಿಯಾನ್ ಎನ್ನುವ ಏಳು ವರ್ಷದ ಮುದ್ದಾದ ಮಗ ಕೂಡ ಇದ್ದಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.