ಸುಚಿತ್ರಾಳ ಮೊಬೈಲ್ ರಹಸ್ಯ ಬಯಲು, ಈಕೆ ಸಂಪರ್ಕದಲ್ಲಿದ್ದವರಿಗೆ ಎಸ್ಪಿ ಮಹತ್ವದ ಕರೆ

ಸುಚಿತ್ರಾಳ ಮೊಬೈಲ್ ರಹಸ್ಯ ಬಯಲು, ಈಕೆ ಸಂಪರ್ಕದಲ್ಲಿದ್ದವರಿಗೆ ಎಸ್ಪಿ ಮಹತ್ವದ ಕರೆ


ಕಾರವಾರ, (ಫೆಬ್ರವರಿ 06): ಕಲರ್ ಫುಲ್ ರೀಲ್ಸ್ ಸಂಸಾರದಿಂದ ದೂರವಾಗಿ ನೌಟಂಕಿ ಆಡುತ್ತಿದ್ದ ಕಲಾಕರ್ ಸುಚಿತ್ರಾ (ಸುಚಿತ್ರಾ) ಕಥೆಗಳೇ ಬೆಚ್ಚಿ ಬೀಳಿಸುವಂತಿವೆ. ಗಂಡ, ಮಕ್ಕಳಿಗಿಂತ ಜ್ಯೋತಿಷಿ ಕಮಲಾಕರ್ ನೇ (ಕಮಲಾಕರ್ ಭಟ್ ಗುರೂಜಿ) ಹೆಚ್ಚು ಅಂತಿದ್ದವಳಿಗೆ ಒಬ್ಬಿಬ್ಬರ ಸಹವಾಸ ಇರಲಿಲ್ವಂತೆ. ಸುಚಿತ್ರಾ ಮೊಬೈಲ್ ಇಣಕಿದ ಪೊಲೀಸರಿಗೆ ಆಕೆ ಸಂಪರ್ಕ ಕ್ರಾಂತಿಯೇ ಅನಾವರಣ ಆಗಿವೆ. ಹೌದು.. ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಜೈಲುಪಾಲಾದ ರೀಲ್ಸ್ ರಾಣಿ ಸುಚಿತ್ರ ಕರಾಳ ಕಥೆಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿರುವ ಪೊಲೀಸರು ಐನಾತಿಯ ಮೊಬೈಲ್ ಪರಿಶೀಲನೆ ನಡೆಸಿದ್ದು, ಪತಿ ಮಹೇಶ್ ನಾಯಕ್ ಮಾಹಿತಿಯಿಂದ ಬೆಚ್ಚಿ ಬೀಳಿಸುವ ಸಂಗತಿಗಳು ಬಯಲಾಗಿವೆ. ಸುಚಿತ್ರಾಗೆ ಹಲವು ಯುವಕರ ಸಂಪರ್ಕ ಇರುವುದು ಮೊಬೈಲ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಉತ್ತರ ಕನ್ನಡ, ಶಿವಮೊಗ್ಗ, ಕಲಬುರಗಿ ಭಾಗದ ಯುವಕರು ಈಕೆ ಜತೆ ಚಾಟ್ ನಲ್ಲಿದ್ದಾರೆ ಎನ್ನುವ ಸಂಗತಿ ಬಯಲಾಗಿದೆ.

ಸಂಪರ್ಕದಲ್ಲಿದ್ದ ಹುಡುಗರು ಆತಂಕ

ರಾಣಿ ಸುಚಿತ್ರಾಳ ಮತ್ತಷ್ಟು ಕರ್ಮಕಾಂಡಗಳು ಬಯಲಾಗುತ್ತಿವೆ. ಕೇವಲ ಜ್ಯೋತಿಷಿ ಕಮಲಾಕರ್ ಭಟ್ ಬೇರೆ ಬೇರೆ ಯುವಕರೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂಬ ಸ್ಫೋಟಕ ಮಾಹಿತಿ ಬಯಲಿಗೆ ಬಂದಿದೆ. ಸುಚಿತ್ರಾಳ ಮೊಬೈಲ್ ಪರಿಶೀಲನೆ ವೇಳೆ ಕಲಬುರಗಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕೆಲ ಹುಡುಗರ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಸುಚಿತ್ರಾಳ ಪತಿ,ಮಗಳು ಬಾಯಿ ಬಿಡುತ್ತಿದ್ದಾರೆ ಯುವಕರು ದಂಗಾಗಿದ್ದಾರೆ. ಇನ್ಸ್ಟಾ ಅಕೌಂಟ್ ಡಿಲಿಟ್ ಮಾಡಿದ್ರೆ ಇನ್ನೂ ಕೆಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಹುಡುಗರ ಜೊತೆ ಇವಳು ನಿತ್ಯ ಸಂಪರ್ಕದಲ್ಲಿ ಇದ್ದಳು ಎಂದು, ಸುಚಿತ್ರಾಳ ಪತಿ ಹತ್ತಾರು ಆರೋಪಗಳನ್ನ ಮಾಡಿದ್ದ. ಈ ಬೆನ್ನಲ್ಲೇ ತಮ್ಮ ಬಂಡವಾಳ ಬಯಲಾಗುತ್ತಾ ಎಂಬ ಆತಂಕದಲ್ಲಿ, ಸಂಪರ್ಕದಲ್ಲಿದ್ದ ಹುಡುಗರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ಜ್ಯೋತಿಷಿಕರ್ ಭಟ್, ಸುಚಿತ್ರಾಳ ಸ್ಫೋಟಕ ಆಡಿಯೋ ವೈರಲ್: ಅಸಲಿ ಮುಖ ಬಯಲು

ಯಾರಿಗಾದ್ರೂ ಮೋಸ ಮಾಡಿದ್ರೆ ದೂರು ಕೊಡಬಹುದು

ಇನ್ನು ಈ ಬಗ್ಗೆ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ದೀಪನ್ ಮಾತನಾಡಿದ್ದು, ಅವರಗುಪ್ಪ ಗ್ರಾಮದಲ್ಲಿ ವಸಂತ್ ನಾಯಕ್ ಹತ್ಯೆ ಪ್ರಕರಣದ ಆರೋಪಿ ಸುಚಿತ್ರಾ ಜಾಲತಾಣ ಬೇರೆ ಹುಡುಗರ ಜೊತೆಗೆ ಸಂಪರ್ಕ ಇದ್ದಳೆಂದು ಪತಿ ಹೇಳಿದ್ದಾರೆ. ಹೀಗಾಗಿ ಸುಚಿತ್ರಾಳ ಸಾಮಾಜಿಕ ಜಾಲತಾಣಗಳ ಖಾತೆ, ಮೊಬೈಲ್ ಪರಿಶೀಲನೆ ಮಾಡಬಹುದಾಗಿದೆ. . ಸುಚಿತ್ರಾ ಯಾರಿಗಾದರೂ ಮೋಸ ಮಾಡಿದ್ರೆ ದೂರು ಕೊಡಬಹುದು. ದೂರು ಕೊಟ್ಟವರಿಗೆ ಯಾವುದೇ ಸಮಸ್ಯೆ ಆಗಲ್ಲ. ದೂರು ಹಿನ್ನೆಲೆಯಲ್ಲಿ ಸುಚಿತ್ರ ವಿರುದ್ಧ ತನಿಖೆಗೆ ನಿರ್ಧರಿಸಲಾಗಿದೆ. ಆದರೆ. ಈವರೆಗೂ ಮೋಸ ಹೋದವರು ಯಾರೂ ದೂರು ಕೊಟ್ಟಿಲ್ಲ ಎಂದು ಹೇಳಿದರು.

ಇಬ್ಬರು ಪೊಲೀಸ್ ಸಿಬ್ಬಂದಿ ವರ್ಗಾವಣೆ

ವಸಂತ್ ನಾಯ್ಕ ಹತ್ಯೆಗೆ ಪೊಲೀಸರ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ದೀಪನ್, ವೈಫಲ್ಯದ ಮಾಹಿತಿ ಸಿದ್ದಾಪುರ ಠಾಣೆಯ ಇಬ್ಬರನ್ನ ವರ್ಗಾವಣೆ ಮಾಡಲಾಗಿದೆ. ಎಸ್ ಐ ಗಣಪತಿ ಭಟ್ ಹಾಗೂ ಹೆಡ್ಕಾನ್ಸ್ ಟೇಬಲ್ ಚಂದ್ರಶೇಖರ್ ನನ್ನ ಹಳಿಯಾಳ ಉಪವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ನೋಡಿ: ಜ್ಯೋತಿಷಿ ಜತೆ ಚಕ್ಕಂದ: ಹೆಂಡ್ತಿ ಸುಚಿತ್ರಾಳ ಮತ್ತಷ್ಟು ಕಾಮಪುರಾಣ ಬಿಚ್ಚಿಟ್ಟ ಪತಿ

ಸದ್ಯ ಎಸ್ ಸಿದ್ದಾಪುರ ಮೂಲದ ಜ್ಯೋತಿಷಿ ಕಮಲಾಕರ ಭಟ್ ಎರಡು ಮಕ್ಕಳ ತಾಯಿಯ ಸಂಗಡಿಗರು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರು. ಆದರೆ ಇತ್ತಿಚ್ಚಿಗೆ ಹಣ, ಆಸ್ತಿ ಮತ್ತು ಹೆಚ್ಚು ಪ್ರಚಾರ ಪಡೆದಿದ್ದ ಜ್ಯೋತಿಷಿ ವಿವಾಹಿತ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪ. ಪ್ರಾರಂಭದಲ್ಲಿ ಸತ್ಯನಾ ಎಂಬ ಪ್ರಶ್ನೆ ಮೂಡಿತ್ತು. ಒಂದೊಂದು ಫೋಟೋ ರಿಲೀಸ್ ಆಗುತ್ತಿರುವ ಬೆನ್ನಲ್ಲೇ ಆರೋಪ ಸತ್ಯ ಇರಬಹುದು ಎನ್ನಲಾಯ್ತು… ಇಂದು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರ ಮಾತನಾಡಿದ್ದಾರೆ ಎನ್ನಲಾದ ರಾಸಲೀಲೆಯ ಒಂದೊಂದು ಪದ ಪುಂಜವು ಕೇಳುವವರಿಗೆ ಅಸಹ್ಯ ಮೂಡಿಸುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *