Headlines

ಮಹೇಶನ ಬುಲೆಟ್ ನೋಡಿ 17 ವರ್ಷಕ್ಕೆ ಗರ್ಭಿಣಿಯಾಗಿದ್ದ ಸುಚಿತ್ರಾ; ಪತಿ ಊರು ಬಿಡ್ತಿದ್ದಂತೆ ಪಾತರಗಿತ್ತಿಯಾದ ಪತ್ನಿ!

ಮಹೇಶನ ಬುಲೆಟ್ ನೋಡಿ 17 ವರ್ಷಕ್ಕೆ ಗರ್ಭಿಣಿಯಾಗಿದ್ದ ಸುಚಿತ್ರಾ; ಪತಿ ಊರು ಬಿಡ್ತಿದ್ದಂತೆ ಪಾತರಗಿತ್ತಿಯಾದ ಪತ್ನಿ!

ಮಹೇಶನ ಬುಲೆಟ್ ನೋಡಿ 17 ವರ್ಷಕ್ಕೆ ಗರ್ಭಿಣಿಯಾಗಿದ್ದ ಸುಚಿತ್ರಾ; ಪತಿ ಊರು ಬಿಡ್ತಿದ್ದಂತೆ ಪಾತರಗಿತ್ತಿಯಾದ ಪತ್ನಿ!
ಸಿದ್ದಾಪುರದ ವಸಂತ ನಾಯ್ಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಚಿತ್ರಾಳ ಕರಾಳ ಹಿನ್ನೆಲೆ ಬಯಲಾಗಿದೆ. ಹದಿಹರೆಯದಲ್ಲೇ ಐಷಾರಾಮಿ ಜೀವನದ ಆಸೆಗಾಗಿ ದಾರಿ ತಪ್ಪಿದ್ದ ಈಕೆ, ಹಲವರೊಂದಿಗೆ ಸಂಬಂಧ ಬೆಳೆಸಿಕೊಂಡು ಅಂತಿಮವಾಗಿ ಜ್ಯೋತಿಷಿ ಕಮಲಾಕರ ಭಟ್ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದಳು.
ಉತ್ತರ ಕನ್ನಡ (ಫೆ.09): ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ವಸಂತ ನಾಯ್ಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಚಿತ್ರಾಳ ಕರಾಳ ಇತಿಹಾಸ ಒಂದೊಂದಾಗಿ ಹೊರಬರುತ್ತಿದೆ. ಜ್ಯೋತಿಷಿ ಕಮಲಾಕರ ಭಟ್ ಜೊತೆ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದ ಈಕೆಯ ಬಣ್ಣದ ಬದುಕಿನ ಹಿಂದಿನ ಕಥೆಗಳು ಸಿನಿಮಾ ಕಥೆಯನ್ನೇ ಮೀರಿಸುವಂತಿದ್ದು, ಹದಿಹರೆಯದಲ್ಲೇ ದಾರಿ ತಪ್ಪಿದ್ದ ಈಕೆ, ಐಷಾರಾಮಿ ಜೀವನ ಮತ್ತು ಹಣದಾಸೆಗಾಗಿ ಹಲವರೊಂದಿಗೆ ಸಂಪರ್ಕ ಹೊಂದಿದ್ದಳು ಎಂಬ ಸ್ಫೋಟಕ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಆರೋಪಿ ಸುಚಿತ್ರಾಳ ಮೂಲ ಹೆಸರು ಸುರೇಖಾ. ಅವರಗುಪ್ಪಾ ಜಾತ್ರೆಯಲ್ಲಿ ಮಹೇಶ್ ಜಟ್ಯಾ ನಾಯ್ಕ್ ಪರಿಚಯವಾಗಿದ್ದಾಗ ಆಕೆಯ ಹೆಸರು ಸುರೇಖಾ ಎಂದೇ ಇತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಸುಮಾರು 5 ವರ್ಷಗಳ ಕಾಲ ಇಬ್ಬರೂ ಪ್ರೀತಿಸಿದ್ದರು. ವಿಶೇಷವೆಂದರೆ, ಸುಚಿತ್ರಾ ಅಪ್ರಾಪ್ತ ವಯಸ್ಸಿನಲ್ಲೇ ಅಂದರೆ 17ನೇ ವಯಸ್ಸಿಗೆ ಮಹೇಶ್‌ನಿಂದ ಗರ್ಭವತಿಯಾಗಿದ್ದಳು. 18 ವರ್ಷ ತುಂಬಲು ಇನ್ನು 3-4 ತಿಂಗಳು ಬಾಕಿ ಇರುವಾಗಲೇ ಮನೆಯವರ ವಿರೋಧದ ನಡುವೆಯೂ ಮಹೇಶ್ ಜೊತೆ ಓಡಿಹೋಗಿ ಮದುವೆಯಾಗಿದ್ದಳು. ಮದುವೆಯಾದ ನಾಲ್ಕೇ ತಿಂಗಳಿಗೆ ಈಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮದುವೆಯಾದ ನಂತರ ಈಕೆ ತನ್ನ ಹೆಸರನ್ನು ‘ಸುಚಿತ್ರಾ’ ಎಂದು ಬದಲಾಯಿಸಿಕೊಂಡಿದ್ದಳು.

ಆರಂಭದ 2-3 ವರ್ಷ ಊರಿನಲ್ಲೇ ಇದ್ದ ಮಹೇಶ್, ನಂತರ ಜೀವನ ನಿರ್ವಹಣೆಗಾಗಿ ಬೆಂಗಳೂರಿನ ಹೋಟೆಲ್ ಕೆಲಸಕ್ಕೆ ಸೇರಿದ್ದರು. ಗಂಡ ಊರು ಬಿಟ್ಟಿದ್ದೇ ತಡ, ಸುಚಿತ್ರಾ ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸಿದ್ದಳು. ಮದುವೆಯಾದ 3 ವರ್ಷದ ನಂತರ ಶಿವಮೊಗ್ಗದ ಸೊರಬ ತಾಲೂಕಿನ ಸೀಳಗಿ ಮೂಲದ ಪ್ರಕಾಶ್ ಎಂಬಾತನ ಜತೆ ಅನೈತಿಕ ಸಂಬಂಧ ಬೆಳೆಸಿದ್ದಳು. ಪ್ರಕಾಶ್ ಆಗಾಗ ಸುಚಿತ್ರಾ ಮನೆಗೆ ಬಂದು ಹೋಗುತ್ತಿದ್ದ. ಈ ವಿಚಾರವಾಗಿ ಗಂಡ-ಹೆಂಡಿರ ನಡುವೆ ಭಾರೀ ಜಗಳವಾಗಿತ್ತು. ‘ನಿನಗೆ ಇಂತಹ ಚಟಗಳಿದ್ದರೆ ನನಗೆ ಮತ್ತು ನನ್ನ ಮಕ್ಕಳಿಗೆ ಡಿವೋರ್ಸ್ ಕೊಟ್ಟು ಹೋಗು’ ಎಂದು ಮಹೇಶ್ ಎಚ್ಚರಿಸಿದ್ದರೂ ಆಕೆ ಜಗ್ಗಿರಲಿಲ್ಲ.

ಸುಚಿತ್ರಾಗೆ ಐಷಾರಾಮಿ ಬದುಕು ಮತ್ತು ಬೈಕ್‌ಗಳೆಂದರೆ ಎಲ್ಲಿಲ್ಲದ ಮೋಹ. ಫೇಸ್‌ಬುಕ್‌ನಲ್ಲಿ ಯಾರಾದರೂ ಬುಲೆಟ್ ಬೈಕ್ (Bullet Bike) ಜೊತೆ ಫೋಟೋ ಹಾಕಿದರೆ ಸಾಕು, ಅವರನ್ನು ಸಂಪರ್ಕಿಸಿ ಚಕ್ಕಂದ ಆಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ಪ್ರಕಾಶ್ ನಂತರ ಗುಲ್ಬರ್ಗಾದ ಜಮೀನ್ದಾರ ಶರಣಬಸಪ್ಪ ಎಂಬಾತನ ಜೊತೆ ಸುಮಾರು 3 ವರ್ಷಗಳ ಕಾಲ ‘ಲವ್ವಿ-ಡವ್ವಿ’ ನಡೆಸಿದ್ದಳು. ಈಕೆಯ ಈ ಎಲ್ಲಾ ಅಕ್ರಮ ಸಂಬಂಧಗಳ ಬಗ್ಗೆ ಗೊತ್ತಿದ್ದರೂ, ಪತಿ ಮಹೇಶ್ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದರು.

ಸುಚಿತ್ರಾಳ ವರ್ತನೆ ಊರಿನವರಿಗೂ ತಲೆನೋವಾಗಿತ್ತು. ಗಂಡ ಕೊಡಿಸಿದ ಸ್ಕೂಟಿಯಲ್ಲಿ ರಸ್ತೆಯಲ್ಲಿ ಹೋಗುವಾಗ ಯಾರಾದರೂ ಅಡ್ಡ ಬಂದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು. ಗಂಡನ ಜೊತೆ ಬೈಕ್‌ನಲ್ಲಿ ಹೋಗುವಾಗಲೂ, ಎದುರಿಗೆ ಬಂದವರಿಗೆ ಗಂಡ ಬೈಯದಿದ್ದರೆ, ‘ನೀನ್ಯಾಕೆ ಅವರಿಗೆ ಬೈಯ್ಯಲಿಲ್ಲ’ ಎಂದು ನಡುರಸ್ತೆಯಲ್ಲೇ ಗಂಡನ ಜತೆ ಜಗಳವಾಡುತ್ತಿದ್ದ ‘ಗಂಡುಬೀರಿ’ ಇವಳಾಗಿದ್ದಳು. ಆಸ್ತಿ ವಿಚಾರವಾಗಿಯೂ ಗಲಾಟೆ ಮಾಡಿ, ಮಾವನಿಂದ ಗಂಡನಿಗೆ 50 ಸೆಂಟ್ಸ್ ಮತ್ತು ಮೃತ ವಸಂತ ನಾಯ್ಕ್ ಗೆ 50 ಸೆಂಟ್ಸ್ ಆಸ್ತಿ ಭಾಗ ಮಾಡಿಸಿಕೊಂಡಿದ್ದಳು.

ಅಂತಿಮವಾಗಿ, ಕಳೆದ 6 ತಿಂಗಳ ಹಿಂದೆ ಗಂಡನನ್ನು ಬಿಟ್ಟು ಜ್ಯೋತಿಷಿ ಕಮಲಾಕರ ಭಟ್ ಜೊತೆ ಸೇರಿಕೊಂಡಿದ್ದ ಸುಚಿತ್ರಾ, ಹಣ ಗಳಿಸುವ ತಂತ್ರವಾಗಿ ಸಂಬಂಧಗಳನ್ನು ಬಳಸಿಕೊಳ್ಳುತ್ತಿದ್ದಳು. ಇದೀಗ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಈಕೆಯ ರಂಗಿನಾಟಕ್ಕೆ ತೆರೆ ಬಿದ್ದಂತಾಗಿದೆ.

Source link

Leave a Reply

Your email address will not be published. Required fields are marked *