
ಬಾಗಲಕೋಟೆ (ಮಾರ್ಚ್ 23): ದಾವಣಗೆರೆ ದಕ್ಷಿಣ (ದಾವಣಗೆರೆ ದಕ್ಷಿಣ ಉಪಚುನಾವಣೆ) ಹಾಗೂ ಬಾಗಲಕೋಟೆ (ಬಾಗಲಕೋಟ) ಉಪ ಕಾಂಗ್ರೆಸ್ ಅಧಿಕೃತ ಟಿಕೆಟ್ ಘೋಷಣೆಯಾಗಿದೆ. ಸಮರ್ಥ್ ಶಾಮನೂರು, ಉಮೇಶ್ ಮೇಟಿಯನ್ನು ಅಭ್ಯರ್ಥಿ ಎಂದು ಎಐಸಿಸಿ ಪ್ರಕಟಣೆ ಹೊರಡಿಸಿದೆ, ಇಂದು (ಮಾರ್ಚ್ 23) ಸಮರ್ಥ್ ಹಾಗೂ ಉಮೇಶ್ ಮೇಟಿ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಕಾಂಗ್ರೆಸ್ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಟಿಕೆಟ್ ನೀಡಲಾಗಿದೆ. ಶಾಮನೂರು ಶಿವಶಂಕರಪ್ಪ ನಿಧನದಿಂದಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಅವರ ಮೊಮ್ಮಗ ಸಮರ್ಥ್ಗೆ ನೀಡಲಾಗಿದ್ದು, ಇತ್ತ ಎಚ್ವೈ ಮೇಟಿ ನಿಧನದಿಂದ ಬಾಗಲಕೋಟೆ ಉಪಚುನಾವಣೆಗೆ ಅವರ ಪುತ್ರ ಉಮೇಶ್ ಅವರಿಗೆ ಮಣೆ ಹಾಕಲಾಗಿದೆ. ಇನ್ನು ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಿರುವ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.