ಸಿಎಂ ಸಿದ್ದರಾಮಯ್ಯ ಸಿಕ್ಕಾಪಟ್ಟೆ ಸಾಲ ಮಾಡಿ ಕನ್ನಡಿಗರ ಪಾಲಿಗೆ ಸಾಲರಾಮಯ್ಯ ಆಗಿದ್ದಾರೆ: ಜೆಡಿಎಸ್ ವ್ಯಂಗ್ಯ

ಸಿಎಂ ಸಿದ್ದರಾಮಯ್ಯ ಸಿಕ್ಕಾಪಟ್ಟೆ ಸಾಲ ಮಾಡಿ ಕನ್ನಡಿಗರ ಪಾಲಿಗೆ ಸಾಲರಾಮಯ್ಯ ಆಗಿದ್ದಾರೆ: ಜೆಡಿಎಸ್ ವ್ಯಂಗ್ಯ


ಬೆಂಗಳೂರು, ಮಾ.3: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 2025-26ರ ಆಯವ್ಯಯದ ಮೇಲೆ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ರಾಜ್ಯದ ಸಾಲದ ಪ್ರಮಾಣವು ಅಪಾಯಕಾರಿ ಆಸ್ತಿ ತಲುಪಲಿದೆ, ಮುಂದಿನ ವರ್ಷದ ಅಂತ್ಯಕ್ಕೆ ಕರ್ನಾಟಕದ ಒಟ್ಟು ಸಾಲ 7,64,655 ಕೋಟಿ ರೂಪಾಯಿ ದಾಟ ಎಂಬ ಅಂಕಿಅಂಶಗಳು ಆತಂಕ ಮೂಡಿಸಿವೆ. 2025-26ರ ಅಂತ್ಯಕ್ಕೆ ಈ ಸಾಲದ ಪರಿಣಾಮ ಜನರ ಮೇಲೆ ಬೀಳಲಿದೆ. ಪ್ರಸಕ್ತ ಆರ್ಥಿಕ ವರ್ಷವೊಂದರಲ್ಲೇ ಸರ್ಕಾರ ಸುಮಾರು 1.16 ಲಕ್ಷ ಕೋಟಿ ರೂ. ಸಾಲ ಪಡೆದಿದೆ ಎಂದು ಜೆಡಿಎಸ್ ಎಕ್ಸ್ ನಲ್ಲಿ ಬರೆದುಕೊಂಡಿದೆ.

ವಾರ್ಷಿಕವಾಗಿ ಸುಮಾರು 50,000 ಕೋಟಿ ರೂ. ಕೇವಲ ಹಣವನ್ನು ಸಾಲದ ಬಡ್ಡಿ ಪಾವತಿಗಾಗಿಯೇ ಮೀಸಲಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆಯನ್ನು ಉಂಟುಮಾಡಬಹುದು. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 50,000 ರಿಂದ 60,000 ಕೋಟಿ ರೂ. ಅಗತ್ಯವಿದ್ದು, ಇದನ್ನು ಸರಿದೂಗಿಸಲು ಸರ್ಕಾರ ಸಾಲದ ಮೊರೆ ಹೋಗುತ್ತಿದೆ ಎಂದು ಹೇಳಿದೆ.

ಜೆಡಿಎಸ್ ಹಂಚಿಕೊಂಡ ಪೋಸ್ಟ್ ಏನಿದೆ ?

ಗ್ಯಾರಂಟಿಯಿಂದ ರಾಜ್ಯವನ್ನು ದಿವಾಳಿ ಎಬ್ಬಿಸಿರುವ ಸ್ವಯಂ ಘೋಷಿತ ಆರ್ಥಿಕ ತಜ್ಞ @siddaramaiah, ಕರ್ನಾಟಕದ ಜನರ ತಲೆಯ ಮೇಲೆ ಮತ್ತೊಂದು ಸಾಲದ ಹೊರೆ ಹೊರಿಸುವ ಬಜೆಟ್ ಮಂಡಿಸಲು ರೆಡಿಯಾಗಿದೆ. 2025-26 ರ ಅಂತ್ಯಕ್ಕೆ ಕರ್ನಾಟಕ ರಾಜ್ಯದ ಒಟ್ಟು ಸಾಲ 7,64,655 ಕೋಟಿ ರೂ. ದಾಟಲಿದೆ. ವಾರ್ಷಿಕ 50,000 ಕೋಟಿ ರೂ. ಶೇಕಡ ಬಡ್ಡಿ ದರ, ಆದಾಯ ಹಾಗೂ ಖರ್ಚಿನ ನಡುವಿನ ಅಂತರ @INCKarnataka ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.16 ಲಕ್ಷ ಕೋಟಿ ರೂ. ಸಾಲ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಕ್ಕಾಪಟ್ಟೆ ಸಾಲ ಮಾಡಿ ಕನ್ನಡಿಗರ ಪಾಲಿಗೆ ಸಾಲರಾಮಯ್ಯ ಆಗಿದ್ದಾರೆ.

ಇದನ್ನೂ ಓದಿ: ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ಡಿಸಿಎಂ ನಡೆ

ಜೆಡಿಎಸ್ ಪೋಸ್ಟ್;

ತೆರಿಗೆ ಸಂಗ್ರಹದ ಗುರಿ ತಲುಪಿದರೂ, ಬದ್ಧ ವೆಚ್ಚಗಳು (ಸಂಬಳ, ಪಿಂಚಣಿ, ಬಡ್ಡಿ) ಮತ್ತು ಗ್ಯಾರಂಟಿ ವೆಚ್ಚಗಳ ನಡುವಿನ ಸಮತೋಲನ ಕಾಪಾಡುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.16 ಲಕ್ಷ ಕೋಟಿ ರೂ. ಎಂದು ಹೇಳಿದರು. ಈ ಮೂಲಕ ಸಾಲ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಕ್ಕಾಪಟ್ಟೆ ಸಾಲ ಮಾಡಿ ಕನ್ನಡಿಗರ ಪಾಲಿಗೆ ಸಾಲರಾಮಯ್ಯ ಆಗಿದ್ದಾರೆ ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ರಾಜ್ಯದ ಸಾಲವು ಜಿಎಸ್‌ಡಿಪಿ (ಜಿಎಸ್‌ಡಿಪಿ) ಮಿತಿಯಲ್ಲಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *