ಬೆಂಗಳೂರು, (ಜನವರಿ 29): ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಅವರಿಗೆ ಅವಾಚ್ಯ ಶಬ್ಧಗಳಿಂದ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡನ ಬಂಧನವಾಗಿದ್ದು, ಸದ್ಯ ಪೊಲೀಸರು, ರಾಜೀವ್ ಗೌಡನನ್ನು ವಶಕ್ಕೆ ಪಡೆದಿರುವ ಸ್ಥಳ ಮಹಜರು ಸ್ಥಳದಲ್ಲಿದ್ದಾರೆ. ಆದರೆ, ಇತ್ತ ರಾಜೀವ್ ಗೌಡನ ಪತ್ನಿ ಸಹನಾ ಅವರು ವಿಧಾನಸೌಧದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಹೌದು..ಇಂದು (ಜನವರಿ 29) ವಿಧಾನಸಭೆ ಮೊಗಸಾಲೆಯಲ್ಲಿ ಕುಳಿತಿದ್ದಾರೆ. ರಾಜೀವ್ ಗೌಡ ಬಂಧನ ಬೆನ್ನಲ್ಲೇ ಪತ್ನಿ ಸಹನಾ ವಿಧಾನಸೌಧದಲ್ಲಿ ಪ್ರತ್ಯಕ್ಷರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.