Headlines

ಖಮೇನಿ ಸಾವಿನ ಬಗ್ಗೆ ಮೌನ: ಕೇಂದ್ರ ಸರ್ಕಾರದ ನಡೆ ವಿರುದ್ಧ ಸೋನಿಯಾ ಗಾಂಧಿ ಆಕ್ರೋಶ | Silence On Khamenei Death Sonia Gandhi Expresses Anger Over Central Government Decision

ನಾಲ್ಕು ಬಾರಿ ಖಮೇನಿ ಭಾರತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ.

ಸರ್ಕಾರಿ ಮೂಲಗಳ ಪ್ರಕಾರ, ಭಾರತದೊಂದಿಗಿನ ಖಮೇನಿ ಅವರ ಬಾಂಧವ್ಯ ಅಂತಹ ಚೆನ್ನಾಗಿಯೇನು ಇರಲಿಲ್ಲ, 2017ರಿಂದ 2024 ರವರೆಗೆ, ಅವರು ನಾಲ್ಕು ಬಾರಿ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದರು, ಇದರಿಂದಾಗಿ ಪ್ರತಿ ಬಾರಿಯೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇರಾನಿನ ರಾಯಭಾರಿಗಳಿಗೆ ಸಮನ್ಸ್ ಜಾರಿ ಮಾಡಿತು. 2017 ರಲ್ಲಿ ಅವರು ಪಾಕಿಸ್ತಾನವನ್ನು ಪ್ರತಿಧ್ವನಿಸುತ್ತಾ ದಮನಿತ ಕಾಶ್ಮೀರಿಗಳಿಗಾಗಿ ಮುಸ್ಲಿಮರನ್ನು ಒಟ್ಟುಗೂಡಿಸಿದರು. 2019 ರಲ್ಲಿ 370 ನೇ ವಿಧಿ ರದ್ದತಿಯ ನಂತರ, ಅವರು “ನ್ಯಾಯಯುತ ನೀತಿ ಜಾರಿಗೆ ಒತ್ತಾಯಿಸಿದರು. 2020 ರ ದೆಹಲಿ ಗಲಭೆಯ ಸಮಯದಲ್ಲಿ, ಅವರು ಉಗ್ರಗಾಮಿ ಹಿಂದೂಗಳಿಂದ ಮುಸ್ಲಿಮರ ಹತ್ಯಾಕಾಂಡ ಎಂದು ಟ್ವಿಟ್ ಮಾಡಿದ್ದರು, #IndianMuslimsInDanger ಎಂದ ಹ್ಯಾಷ್‌ಟ್ಯಾಗ ಬಳಸಿದ್ದರು. ಆದರೆ ಅದೇ ಸಮಯದಲ್ಲಿ ಪಾಕಿಸ್ತಾನದಲ್ಲಿ ಸಂಕಷ್ಟಕ್ಕಿಡಾಗಿರುವ ಹಿಂದೂಗಳ ಬಗ್ಗೆ ಅವರು ಧ್ವನಿ ಎತ್ತಲೇ ಇಲ್ಲ. ಇರಾನ್‌ನ ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಸ್ಲಿಂ ವಿರೋಧಿ ಎಂದು ಟೀಕಿಸಿತು. ಸೆಪ್ಟೆಂಬರ್ 2024 ರಲ್ಲಿ, ಅವರು ಟ್ವೀಟ್‌ನಲ್ಲಿ ಭಾರತವನ್ನು ಗಾಜಾ ಮತ್ತು ಮ್ಯಾನ್ಮಾರ್‌ನೊಂದಿಗೆ ಹೋಲಿಸಿದರು.

ಈಗ ಇರಾನ್ ನಾಯಕನ ಸಾವಿನ ಬಗ್ಗೆ ಭಾರತದ ಸರ್ಕಾರ ಸಂತಾಪ ಸೂಚಿಸುತ್ತಿಲ್ಲ ಎಂದು ಬೇಸರಿಸುತ್ತಿರುವ ವಿರೋಧ ಪಕ್ಷವು(ಯುಪಿಎ)ಯೂ 2005, 2006, 2009 ಹೀಗೆ ಮೂರು ಬಾರಿ ಇರಾನ್ ವಿರುದ್ಧ ಮತ ಚಲಾಯಿಸಿದೆ ಎಂಬುದನ್ನು ಸರ್ಕಾರಿ ದಾಖಲೆಗಳು ತಿಳಿಸುತ್ತವೆ. 1 ಲಕ್ಷ ಕೋಟಿ ರೂ. ಎಲ್‌ಎನ್‌ಜಿ ಒಪ್ಪಂದ ರದ್ದು ಮಾಡುವುದಾಗಿ ಇರಾನ್ ಬೆದರಿಕೆಯ ನಡುವೆಯೂ ಯುಎಸ್ ಪರಮಾಣು ಒಪ್ಪಂದದ ಮಾತುಕತೆಯ ಸಮಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಇರಾನ್ ವಿರುದ್ಧ ಮೂರು ಬಾರಿ ಮತ ಚಲಾಯಿಸಿದೆ ಎಂದು ಸರ್ಕಾರಿ ದಾಖಲೆಗಳು ಸೂಚಿಸಿವೆ.

ಇದನ್ನೂ ಓದಿ: ನಿಮ್ಮ ವಾಹನವೂ ಕದ್ದೋಗಿದ್ಯಾ?: ರಾಮನಗರದಲ್ಲಿ ಖದೀಮರ ಸೆರೆ: 15ಕ್ಕೂ ಹೆಚ್ಚು ವಾಹನಗಳ ಜಪ್ತಿ

Source link

Leave a Reply

Your email address will not be published. Required fields are marked *