Silli Lalli Kannada Serial Govinda Real Name: ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಕಾಂಪೌಂಡರ್ ಗೋವಿಂದನ ಪಾತ್ರದಲ್ಲಿ ನಕ್ಕು ನಗಿಸಿದ್ದ ಸಂಗಪ್ಪ ಉಪಾಸೆ ಅವರು ಇಂದು ಸರ್ಕಾರಿ ಕೆಲಸದಲ್ಲಿದ್ದಾರೆ. ಸಿನಿಮಾದಲ್ಲಿ ಇವರಿಗೆ ಸಂಗಮೇಶ್ ಎಂದು ಕರೆಯಲಾಗುವುದಂತೆ.

ಸಂಗಪ್ಪ ಉಪಾಸೆ, ಎಂಎ ಪಿಎಚ್‌ಡಿ ಓದಿದ್ದಾರೆ. ಇಂದು ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೆಎಎಸ್ ಅಧಿಕಾರಿ ಆಗಿ ಕೆಲಸ ಮಾಡುತ್ತಿದ್ದಾರೆ.

ಸಂಗಪ್ಪ ಅವರು ಬಿಜಾಪುರ ಮೂಲದವರು, ಹಳ್ಳಿಯಲ್ಲಿ ದನ ಕಾಯುತ್ತಿದ್ದರಂತೆ. ಇವರ ತಂದೆ-ತಾಯಿಗೆ ಶಿಕ್ಷಣ ಗೊತ್ತಿಲ್ಲ. ಇವರ ರೈತರು.

ಹೈಸ್ಕೂಲ್ ಓದುವಾಗ ಹತ್ತರಿಂದ ಹನ್ನೆರಡು ಕಿಮೀ ನಡೆಯಬೇಕಿತ್ತು, ಊಟಕ್ಕೆ ಗತಿ ಇರಲಿಲ್ಲ, ಜಮೀನು ಇದ್ದರೂ ಬರಡು ಭೂಮಿ, ನೀರಾವರಿ ಇರಲಿಲ್ಲ. ಆಮೇಲೆ ಸಾಲ ಮಾಡಿ, ಜಮೀನು ಮಾರಿಕೊಂಡಿದ್ದರು.

ಸಂಗಪ್ಪ ಅವರು ಹದಿನೈದು ಇಲಾಖೆಗೆ 26 ಬಾರಿ ವರ್ಗಾವಣೆ ಕೂಡ ಆಗಿದ್ದಾರಂತೆ. ಈಗ ಕೆಎಎಸ್ ಅಧಿಕಾರಿಯಾಗಿದ್ದರೂ ಕೂಡ, ಸಂಗಪ್ಪ ಅವರು ಬರವಣಿಗೆಯಲ್ಲಿ, ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ.

Source link
ಇಂದು ದಕ್ಷ KAS ಅಧಿಕಾರಿಯಾಗಿರೋ 'ಸಿಲ್ಲಿ ಲಲ್ಲಿ' ಧಾರಾವಾಹಿ ಗೋವಿಂದ ಪಾತ್ರಧಾರಿ! 25 ಸಲ ವರ್ಗಾವಣೆ ಆಯ್ತು!