ಹುಬ್ಬಳ್ಳಿ, ಫೆಬ್ರವರಿ 09: ಸಿದ್ದಾರೂಢ ಮಠಕ್ಕೆ ಗಾಯಕ ಸೋನು ನಿಗಮಕ್ಕೆ ಭೇಟಿ ನೀಡಿದ್ದು, ಸಿದ್ದಾರೂಢರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿದ್ದಾರೂಢರ ಗದ್ದುಗೆ ಬಳಿ ಸೋನು ನಿಗಮ್ 10 ನಿಮಿಷ ಧ್ಯಾನ ಕೂಡ ಮಾಡಿದ್ದು, ಗಾಯಕನಿಗೆ ಮಠದ ಟ್ರಸ್ಟ್‌ನಿಂದ ಸಿದ್ದಾರೂಢರ ಮೂರ್ತಿ ಅವರನ್ನು ಗೌರವಿಸಲಾಗಿದೆ. ಸಂಗೀತ ಕಾರ್ಯಕ್ರಮವೊಂದರ ನಿಮಿತ್ತ ಅವರು ನಿನ್ನೆ ಹುಬ್ಬಳ್ಳಿಗೆ ಬಂದಿದ್ದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.