Headlines

ಚುಮುಚುಮು ಚಳಿಯಲಿ ನವಜೋಡಿ… ವಯನಾಡಿನಲ್ಲಿ ಪತಿ ಜೊತೆ ಗಾಯಕಿ ಸುಹಾನ

ಚುಮುಚುಮು ಚಳಿಯಲಿ ನವಜೋಡಿ… ವಯನಾಡಿನಲ್ಲಿ ಪತಿ ಜೊತೆ ಗಾಯಕಿ ಸುಹಾನ

ಚುಮುಚುಮು ಚಳಿಯಲಿ ನವಜೋಡಿ… ವಯನಾಡಿನಲ್ಲಿ ಪತಿ ಜೊತೆ ಗಾಯಕಿ ಸುಹಾನ

Singer Suhana Syed: ‘ಸರಿಗಮಪ ಸೀಸನ್ 13′ ರ ಮೂಲಕ ಜನಪ್ರಿಯತೆ ಪಡೆದ ಗಾಯಕಿ ಸುಹಾನ ಸೈಯದ್ ಇತ್ತೀಚೆಗೆ ತಮ್ಮ ಬಹುಕಾಲದ ಗೆಳೆಯ ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ನವಜೋಡಿ ವಯನಾಡಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ.

‘ಸರಿಗಮಪ ಸೀಸನ್ 13′ ರ ಮೂಲಕ ಜನಪ್ರಿಯತೆ ಪಡೆದ ಗಾಯಕಿ ಸುಹಾನಾ ಸೈಯದ್ ಅವರು ಇತ್ತೀಚೆಗೆ ತಮ್ಮ ಬಹು ಕಾಲದ ಗೆಳೆಯ ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆ ಕುವೆಂಪುರವರ ಮಂತ್ರ ಮಾಂಗಲ್ಯ ವಿಧಾನದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸುದ್ದಿಯಾಗಿದ್ದರು.

’ಪ್ರೀತಿ ವಿಶ್ವದ ಭಾಷೆ. ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ. ದೇವರ ವಿರಚಿತ. ಶ್ರ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಜೊತೆಯಾಗಲಿರುವ ಸುಹಾನ ಮತ್ತು ನಿತಿನ್. ನಮ್ಮ ನಡೆ ವಿಶ್ವಮಾನವತ್ವದೆಡೆ ಸಹೃದಯಿಗಳೇ, ಬನ್ನಿ, ಹರಸಿ, ಆಶೀರ್ವದಿಸಿ’ ಎನ್ನುತ್ತಾ ಕೊಪ್ಪಳದಲ್ಲಿ ಸರಳವಾಗಿ ಕುವೆಂಪುರವರ ಮಂತ್ರ ಮಾಂಗಲ್ಯ ಆಶಯದಂತೆ ಮದುವೆಯಾಗಿದ್ದರು.

ಸುಹಾನ ಮತ್ತು ನಿತಿನ್ ಅವರದ್ದು ಹದಿನಾರು ವರ್ಷಗಳ ಪ್ರೀತಿಯಾಗಿದ್ದು, ಈ ಜೋಡಿ ಸರಳವಾದ ಕಾರ್ಯಕ್ರಮವೊಂದರಲ್ಲಿ ಅಕ್ಟೋಬರ್ 17ರಂದು ಅಂತರ್ ಧರ್ಮೀಯ ವಿವಾಹವಾಗಿದ್ದರು. ಇದೀಗ ಈ ಜೋಡಿ ವಯನಾಡಿಗೆ ತೆರಳಿದ್ದು, ಅಲ್ಲಿ ಚುಮು ಚುಮು ಚಳಿಯ ಮಧ್ಯೆ ಏಕಾಂತದ ಸಮಯ ಕಳೆಯುತ್ತಿದ್ದಾರೆ.

ಕೇರಳದ ಸುಂದರವಾದ ತಾಣವಾಗಿರುವ ವಯನಾಡಿಗೆ ಈ ಜೋಡಿ ತೆರಳಿದ್ದು, ಅಲ್ಲಿನ ಸುಂದರ ಪ್ರಕೃತಿಯ ನಡುವೆ ತೆಗೆಸಿಕೊಂಡಂತಹ ಕಪಲ್ಸ್ ಫೋಟೊಗಳನ್ನು ಸುಹಾನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು Love, calm, and a view we didn’t want to leave ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಸುಹಾನ ಶೇರ್ ಮಾಡಿರುವಂತಹ ಫೋಟೊಗಳಲ್ಲಿ ನವ ಜೋಡಿ, ಕೈ ಕೈಹಿಡಿದು, ವಯನಾಡಿನ ಸುಂದರ ತಾಣಗಳನ್ನು ಎಕ್ಸ್ ಪ್ಲೋರ್ ಮಾಡುವ, ಪ್ರಕೃತಿಯ ಹಿನ್ನೆಲೆಯಲ್ಲಿ ಕಾಫಿ ಸಿಪ್ ಮಾಡುತ್ತಿರುವ ಹಾಗೂ ತುಂಟತನ, ತರಲೆ ಮಾಡುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಅಭಿಮಾನಿಗಳು ಈ ಜೋಡಿಯ ಫೋಟೊಗಳಿಗೆ ಪ್ರೀತಿಯ ಮಳೆ ಸುರಿಸಿದ್ದು, ರಬ್ ನೇ ಬನಾದಿ ಜೋಡಿ, ಇಬ್ಬರ ಜೋಡಿ ಯಾವಾಗ್ಲೂ ಹೀಗೆ ಖುಷಿ ಖುಷಿಯಾಗಿರಲಿ, ಇಬ್ಬರ ಮೇಲೆ ಯಾವ ದೃಷ್ಟಿಯೂ ಬೀಳದೇ ಇರಲಿ ಎಂದು ಹಾರೈಸಿದ್ದಾರೆ.

ಸುಹಾನಾ ಸೈಯದ್ ಅವರು ಮದುವೆಯಾಗಿರುವ ನಿತಿನ್ ಶಿವಾಂಶ್ ಅವರು ವೃತ್ತಿಯಲ್ಲಿ ರಂಗಭೂಮಿ ಕಲಾವಿದರು. ಅವರು ಪ್ರಸಿದ್ಧ ರಂಗ ತರಬೇತಿ ಕೇಂದ್ರವಾದ ನೀನಾಸಂನಲ್ಲಿ ತರಬೇತಿ ಪಡೆದಿದ್ದಾರೆ. ಇಬ್ಬರ ನಡುವಿನ 16 ವರ್ಷಗಳ ಗೆಳೆತನವಿದ್ದು, ಇದೀಗ ಸತಿಪತಿಗಳಾಗಿದ್ದಾರೆ.

ಸುಹಾನ ಮತ್ತು ನಿತಿನ್ ಬೇರೆ ಬೇರೆ ಧರ್ಮದವರಾಗಿರುವುದರಿಂದ ಇಬ್ಬರ ಪ್ರೀತಿಗೆ ಎರಡೂ ಮನೆಯವರು ಒಪ್ಪಿಗೆ ನೀಡಲಿ, ಮನೆಯವರ ಸಮ್ಮುಖದಲ್ಲಿ ಮದುವೆಯಾಗಲಿ ಎಂದು ಪ್ರತಿ ಬಾರಿ ಮಂತ್ರಾಲಯಕ್ಕೆ ಬಂದಾಗ ಕಣ್ಣೀರಿಟ್ಟು ಬೇಡಿಕೊಳ್ಳುತ್ತಿದ್ದಂತೆ, ಹಾಗಾಗಿ ಮದುವೆಯಾದ ಕೆಲವೇ ದಿನಗಳಲ್ಲಿ ಈ ಜೋಡಿ ರಾಯನ ಆಶೀರ್ವಾದವನ್ನು ಜೊತೆಯಾಗಿ ಪಡೆದು ಬಂದಿದ್ದರು.

Source link

Leave a Reply

Your email address will not be published. Required fields are marked *