ಹೆಚ್.ಕೆ. ಪಾಟೀಲ್ ಕುಟುಂಬಕ್ಕೆ ಹಿನ್ನಡೆ
ಹುಬ್ಬಳ್ಳಿ, ಡಿಸೆಂಬರ್ 11: ಜಾಗದ ವಿಚಾರವಾಗಿ ಕರ್ನಾಟಕದ ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಅವರ ವಿರುದ್ಧವೇ ಹೋರಾಡಿ ಅಗತ್ಯನಲ್ಲಿ ಅಕ್ಕ-ತಂಗಿ ಗೆದ್ದಿದ್ದಾರೆ. ಹುಬ್ಬಳ್ಳಿ ನಗರದ ಪಿಂಟೋ ಸರ್ಕಲ್ ಬಳಿಯ 15 ಗುಂಟೆ ಜಾಗವನ್ನು ಕಬಳಿಸಲಾಗಿದೆ ಎಂದು ಆರೋಪಿಸಿ ಸಹೋದರಿಯರಾದ ಹುಬ್ಬಳ್ಳಿ ನಗರ ಸಾವಕ್ಕ ಸುಳ್ಳದ, ಧಾರವಾಡದ ಜಕ್ಕವ್ವ ಕೋರ್ಟ್ ಮೊರೆ ಹೋಗಿದ್ದರು. ಹೆಚ್.ಕೆ. ಪಾಟೀಲ್ ಕುಟುಂಬದ ಆಸ್ತಿ ಬಿಟ್ಟುಕೊಡಲಿಲ್ಲ ಎಂದು ಆರೋಪಿಸಿದ್ದರು. ಈ ಬಗ್ಗೆ ಸುಪ್ರೀಂ ಕೋರ್ಟ್ ದ್ವೀಸದಸ್ಯ ಪೀಠ ಡಿಸೆಂಬರ್ 9 ರಂದು ಆದೇಶ ನೀಡಿದ್ದು, 15 ಗುಂಟೆ ಜಾಗ ಸಾವಕ್ಕ ಮತ್ತು ಜಕ್ಕವ್ವ ಸಹೋದರಿಯರಿಗೆ ಸೇರಿದ್ದು.
ಪ್ರಕರಣ ಏನು?
ಸಾವಕ್ಕ, ಜಕ್ಕವ್ವ ತಂದೆ ಮರಿತ ಅಮರಶೆಟ್ಟಿ 1894 ರಲ್ಲಿ ಇಂಡಿಯನ್ ಕಾಟನ್ ಕಂಪನಿಗೆ 5 ಉಚಿತ ಜಾಗವನ್ನು 10 ವರ್ಷಗಳ ಕಾಲ ಲೀಸ್‌ಗೆ ನೀಡಿದ್ದರು. ಬಳಿಕ 1941ರಲ್ಲಿ ಸಿದ್ದಲಿಂಗಪ್ಪ ಬುಳ್ಳಾ ಅನ್ನೋರು ಇಂಡಿಯನ್ ಕಾಟನ್ ಕಂಪನಿಯಿಂದ ಲೀಸ್ ಹೋಲ್ಡ್ ರೈಟ್ಸ್ ಖರೀದಿಸಿದ್ದರು. ಅದಾದಮೇಲೆ 1964ರಲ್ಲಿ ಬುಲ್ಲಾರಿಂದ ಹೆಚ್. ಕೆ. ಪಾಟೀಲ್ ರ ತಂದೆ ಕೆ. ಹೆಚ್. ಪಾಟೀಲರು ಆ ಮೇಲಿಂದ 15 ಗುಂಟೆ ಜಾಗವನ್ನು ಸಬ್ ಲೀಸ್ ಗೆ ಪಡೆದಿದ್ದರು. ಬಳಿಕ ಲೀಸ್‌ಗೆ ಪಡೆದ ಜಾಗವನ್ನು ಬುಲ್ಲಾ ಕುಟುಂಬ ಮತ್ತು ಹೆಚ್. ಕೆ. ಪಾಟೀಲ್ ಕುಟುಂಬ ಬಿಟ್ಟುಕೊಡದ ಕಾರಣ ಸಹೋದರಿಯರು ಕೋರ್ಟ್ ಮೊರೆ ಹೋಗಿದ್ದರು. 2024ರಲ್ಲಿ ಸಾವಕ್ಕ ಮತ್ತು ಜಕ್ಕವ್ವ ಪರ ಆದೇಶವಾಗಿತ್ತು.
ಇದನ್ನೂ ಓದಿ: NWKRTC ಗೆ ಬಾರದ 940 ಕೋಟಿ ಶಕ್ತಿ ಯೋಜನೆ ಹಣ; ಸಂಕಷ್ಟದಲ್ಲಿ ನಿಗಮ
ಕೋರ್ಟ್ ತನ್ನ ಆದೇಶದ ಮೂಲ ಬಾಡಿಗೆದಾರ ಬುಳ್ಳಾ ಜಾಗದ ಕಾರಣ, ಅವನ ಕುಟುಂಬ ಕಬ್ಜಾ ಮಾಡಿದ ಜಾಗವನ್ನು ಮಾಲಿಕರಿಗೆ ಬಿಟ್ಟುಕೊಟ್ಟಿತು. ಆದರೆ ಹೆಚ್. ಕೆ. ಪಾಟೀಲ್ ಕುಟುಂಬ ಮಾತ್ರ ಇದಕ್ಕೆ ತಕರಾರು ತೆಗೆದ ಕಾರಣ ಸಹೋದರಿಯರು ಮತ್ತೆ ಮನವಿ ಮೆಟ್ಟಿಲೇರಿದ್ದರು. ಇದೀಗ ಈ ಕಾನೂನು ಹೋರಾಟದಲ್ಲಿಯೂ ಸಾವಕ್ಕ ಮತ್ತು ಜಕ್ಕವ್ವ ಸಹೋದರಿಯರಿಗೆ ಜಯವಾಗಿದೆ. ಇವರ ಆದೇಶದಿಂದ ಸಂತಸಗೊಂಡಿರುವ, 135 ವರ್ಷಗಳ ನಂತರ ನಮ್ಮ ಆಸ್ತಿ ನಮಗೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 2:44 pm, ಗುರು, 11 ಡಿಸೆಂಬರ್ 25