ಸುಜಾತಾ ಭಟ್​ ತಪ್ಪೊಪ್ಪಿಗೆ: ಅನನ್ಯಾ ಭಟ್​ ನಾಪತ್ತೆ ಕೇಸ್​ ತನಿಖೆ ಅಂತ್ಯಗೊಳಿಸಿದ SIT

ಸುಜಾತಾ ಭಟ್​ ತಪ್ಪೊಪ್ಪಿಗೆ: ಅನನ್ಯಾ ಭಟ್​ ನಾಪತ್ತೆ ಕೇಸ್​ ತನಿಖೆ ಅಂತ್ಯಗೊಳಿಸಿದ SIT


ಮಂಗಳೂರು, ಅಕ್ಟೋಬರ್ 31: ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಅನನ್ಯ ಭಟ್ ನಾಪತ್ತೆ ಪ್ರಕರಣದ ತನಿಖೆಯನ್ನ ಎಸ್ ಐಟಿ ಅಂತ್ಯಗೊಳಿಸಿದೆ. ಮಗಳು ಧರ್ಮಸ್ಥಳದಲ್ಲಿ ಕಾಣೆ ಆಗಿದ್ದಾಳೆ ಎಂದು ಸುಜಾತಾ ಭಟ್ ದೂರು ನೀಡಿದ್ದರು. ಆದರೆ ತನಿಖೆ ವೇಳೆ ತಾನು ಸುಳ್ಳು ದೂರು ನೀಡಿದ್ದಾಗಿ ಅವರು ತಪ್ಪೊಪ್ಪಿಕೊಂಡಿರುವ ಹಿನ್ನಲೆಯಲ್ಲಿ ತನಿಖೆ ಅಂತ್ಯಗೊಂಡಿದೆ. ಪ್ರಕರಣ ಸಂಬಂಧ ಸುಜಾತಾ ಭಟ್ ಅವರ ದೂರು ಅರ್ಜಿ ವಿಲೇ ಮಾಡಲಾಗಿರುತ್ತೆಂದು ಎಸ್ ಐಟಿ ಅಧಿಕಾರಿಗಳು ಹಿಂಬರಹ ನೀಡಿದ್ದಾರೆ.

ಪ್ರಕರಣ ಏನಾಗಿತ್ತು?

ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಹೆಣ ಹೂಳಲಾಗಿದೆ ಎಂದು ಅನಾಮಧೇಯ ವ್ಯಕ್ತಿಯೋರ್ವ ಮಾಡಿದ ಆರೋಪ ದೇಶಾದ್ಯಂತ ಬಿರುಗಾಳಿ ಎಬ್ಬಿಸಿತ್ತು. ಈ ಸಂದರ್ಭದಲ್ಲಿ ಸುಜಾತಾ ಭಟ್ ಎಂಬವರು ತನ್ನ ಮಗಳು ಧರ್ಮಸ್ಥಳದಲ್ಲಿ ಕಾಣೆ ಆಗಿದ್ದಾಳೆ ಎಂದು ದೂರು ನೀಡಿದ್ದರು. 2003ರಲ್ಲಿ ಮಣಿಪಾಲದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಾಗ ತನ್ನ ಮಗಳು ನಾಪತ್ತೆಯಾಗಿದ್ದ ಆಕೆಯನ್ನು ಧರ್ಮಸ್ಥಳದಲ್ಲಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಪ್ರಕರಣ ಗಂಭೀರವಾದ ಕಾರಣ, ಇದರ ತನಿಖೆಯನ್ನ ಎಸ್ಐಟಿಗೆ ಸರ್ಕಾರ ಹಸ್ತಾಂತರಿಸಿತು.

ಇದನ್ನೂ: ಓದಿ ಧರ್ಮಸ್ಥಳದಲ್ಲಿ ಅನನ್ಯ ಭಟ್ ನಾಪತ್ತೆ ಕೇಸ್ ಗೆ ದೊಡ್ಡ ಟ್ವಿಸ್ಟ್: ಸುಜಾತಾ ಭಟ್ ಗೆ ಮಕ್ಕಳೇ ಇರಲಿಲ್ಲ!

ದಿನಕ್ಕೊಂದು ಕತೆ ಹೇಳಿದ್ದ ಸುಜಾತಾ ಭಟ್

ತನಿಖೆ ವೇಳೆ ಸುಜಾತಾ ಭಟ್ ದಿನಕ್ಕೊಂದು ಕತೆ ಹೇಳಿದ್ದು, ಯಾರದ್ದೋ ಫೋಟೋ ತೋರಿಸಿ ಇವಳೇ ನನ್ನ ಮಗಳು ಅನನ್ಯ ಭಟ್ ಎಂದು ಆರಂಭದಲ್ಲಿ ಹೇಳಿದ್ದರು. ಆದರೆ ಅದು ಅವರ ಮಗಳ ಫೋಟೋವಲ್ಲ, ಬದಲಾಗಿ ವಾಸಂತಿ ಎಂಬವರ ಫೋಟೋ ಎಂಬ ವಿಷಯ ರಿವೀಲ್ ಆಗುತ್ತಿದೆ. ಆ ಬಳಿಕ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದ ಸುಜಾತಾ ಭಟ್ ಆಕೆ ತನ್ನ ಸ್ನೇಹಿತರು ಎಂದು ಹೇಳಿಕೊಂಡಿದ್ದರು. ಸೋಮೇಶ್ವರದ ಅರವಿಂದ್ ಮತ್ತು ವಿಮಲಾ ದಂಪತಿ ಮಗಳು ಎಂದು ತಿಳಿಸಿದ್ದರು.

ಅಂತಿಮವಾಗಿ ತಾವು ಹೇಳಿದ್ದು ಸುಳ್ಳು ಎಂದು ಒಪ್ಪಿಕೊಂಡ ಸುಜಾತಾ ಭಟ್ , ಧರ್ಮಸ್ಥಳ ಪ್ರಕರಣದ ಸಂಬಂಧ ಬುರುಡೆ ಗ್ಯಾಂಗ್ ಜೊತೆಯಲ್ಲಿದ್ದಕ್ಕೆ ತೀವ್ರ ಪಶ್ಚಾತ್ತಾಪವಿದೆ . ಯಾರದ್ದೋ ಮಾತು ಕೇಳಿ ತಮ್ಮ ಜೀವನ ಹಾಳು ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಈ ಬಗ್ಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಬಳಿ ಕ್ಷಮೆಯಾಚಿಸುತ್ತೇನೆ. ಈ ವಿಚಾರದಲ್ಲಿ ತಮ್ಮೊಂದಿಗೆ ಇದ್ದ ಮಹೇಶ್ ಶೆಟ್ಟಿ ಮತ್ತು ಮಟ್ಟಣ್ಣವರ್ ಸೇರಿದಂತೆ ಯಾರೂ ಈಗ ತಮ್ಮ ಸಂಪರ್ಕದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ವೈಯಕ್ತಿಕ ಜೀವನದ ಮೇಲೆ ಇದು ಪರಿಣಾಮ ಬೀರಿದ್ದು, ತಮ್ಮ ಪಾಡಿಗೆ ತಾವು ಬದುಕಲು ಬಯಸುವುದಾಗಿ ತಿಳಿಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 2:21 pm, ಶುಕ್ರ, 31 ಅಕ್ಟೋಬರ್ 25



Source link

Leave a Reply

Your email address will not be published. Required fields are marked *