ಉದ್ಯಮಿ ಸಿಜೆ ರಾಯ್ ಸಾವಿನ ನಿಗೂಢ ಕಾರಣಕ್ಕೆ ಶೀಘ್ರ ತೆರೆ, ಅಂತಿಮ ಹಂತದತ್ತ ಎಸ್ಐಟಿ ತನಿಖೆ, ವರದಿ ಸಲ್ಲಿಕೆಗೆ ಸಿದ್ಧತೆ | Sit Probe Into Businessman Cj Roy Death Nears Completion Report To Be Submitted Soon

ಎಸ್ಐಟಿ ತಂಡ ಇದೀಗ ಅಂತಿಮ ಹಂತದ ತನಿಖೆಯನ್ನು ಪೂರ್ಣಗೊಳಿಸಿದ್ದು, ವರದಿಗೆ ಷರಾ ಬರೆಯುವ ಕಾರ್ಯದಲ್ಲಿದೆ. ಈ ವರದಿ ಸಲ್ಲಿಕೆಯಾದ ಬಳಿಕವೇ ಸಿ ಜೆ ರಾಯ್ ಸಾವಿನ ಹಿಂದಿನ ನಿಜವಾದ ಕಾರಣಗಳು ಬಹಿರಂಗವಾಗುವ ಸಾಧ್ಯತೆ ಇದೆ. ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಈ ಪ್ರಕರಣದ ಮೇಲೆ ಎಲ್ಲರ ಕಣ್ಣೂ ಎಸ್ಐಟಿ ವರದಿಯತ್ತ ನೆಟ್ಟಿದೆ.

ರಿಚ್ಮಂಡ್‌ ಟೌನ್‌ ಸಮೀಪದ, ಹೊಸೂರು ರಸ್ತೆಯಲ್ಲಿರುವ ತಮ್ಮ ಒಡೆತನದ ಕಾನ್ಫಿಡೆಂಟ್ ಗ್ರೂಪ್ ಕಂಪನಿಯ ಪ್ರಧಾನ ಕಚೇರಿಯಲ್ಲಿ ರಾಯ್ ಸಾವಿಗೆ ಶರಣಾಗಿದ್ದರು. ಈ ಕಚೇರಿಯಲ್ಲೇ ರಾಯ್ ಅವರು ಸ್ವಅಕ್ಷರದಲ್ಲಿ ಬರೆದಿದ್ದಾರೆ ಎನ್ನಲಾದ ಕೆಲ ಪತ್ರಗಳು ಸಿಕ್ಕಿವೆ. ಇವುಗಳು ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದ್ದು, ಆ ಪತ್ರಗಳಲ್ಲಿ ಉಲ್ಲೇಖಿತ ವಿವರಗಳನ್ನಾಧರಿಸಿ ಸಾವಿಗೆ ಕಾರಣಗಳ ಶೋಧನೆಗೆ ಎಸ್ಐಟಿ ಪ್ರಯತ್ನಿಸಿದೆ ಎಂದು ಮೂಲಗಳು ಹೇಳಿವೆ.

Source link

Leave a Reply

Your email address will not be published. Required fields are marked *