
ದಾವಣಗೆರೆ, (ಫೆಬ್ರವರಿ 09): ಪರಿಶಿಷ್ಟ ಜಾತಿ(ಎಸ್‌ಟಿ) ಹಾಗೂ ಪರಿಶಿಷ್ಟ ಪಂಗಡ (ಎಸ್‌ಸಿ) ಸಮುದಾಯದವರಿಗೆ ಈವರೆಗೆ ಭೂಮಿ ನೀಡಲಾಗುವುದು. ಇದೀಗ ಸೈಟ್ ಸಹ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ಜಾತ್ರೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಎಸ್‌ಸಿ ಎಸ್‌ಎಸ್‌ಟಿ ಸಮುದಾಯದವರಿಗೆ ವಿಶೇಷ ಅನುದಾನ ನೀಡಿದ್ದು, ಭೂಮಿ ಖರೀದಿ ಮಾಡಿ ನಿವೇಶನ ನೀಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಬೇಕಾಗಿದೆ. ಒಂದು ವೇಳೆ ಸಿಎಂ ಅನುಮೋದನೆ ಕೊಟ್ಟರೆ ಸಮುದಾಯದ ಜನರಿಗೆ 30 40 ಸೈಟ್ ನೀಡಲಾಗುವುದು ಎಂದು ಘೋಷಿಸಲಾಯಿತು.