ಸುಖಾಂತ್ಯವಾಯ್ತು ‘ಜನ ನಾಯಗನ್’ ವಿವಾದ, ‘ಪರಾಶಕ್ತಿ’ ಕತೆ ಏನಾಯ್ತು?

ಸುಖಾಂತ್ಯವಾಯ್ತು ‘ಜನ ನಾಯಗನ್’ ವಿವಾದ, ‘ಪರಾಶಕ್ತಿ’ ಕತೆ ಏನಾಯ್ತು?


ತಮಿಳು ಸಿನಿಮಾಗಳಿಗೆ ಸೆನ್ಸಾರ್ (ಸೆನ್ಸಾರ್) ಸಮಸ್ಯೆ ಕಾಡುತ್ತಿದೆ. ಇಂದು (ಜನವರಿ 09) ಬಿಡುಗಡೆ ಆಗಬೇಕಿದ್ದ ‘ಜನ ನಾಯಕನ್’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿತ್ತು. ಇದೇ ಕಾರಣಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ ನಿರ್ಮಾಪಕರು ‘ಯು/ಎ’ ಪ್ರಮಾಣ ಪತ್ರ ಪಡೆಯಲು ಯಶಸ್ವಿ ಆಗಿದ್ದಾರೆ. ನಾಳೆ (ಜನವರಿ 10) ಬಿಡುಗಡೆ ಆಗಲಿರುವ ಮತ್ತೊಂದು ರಾಜಕೀಯ ಥ್ರಿಲ್ಲರ್ ಸಿನಿಮಾ ‘ಪರಾಶಕ್ತಿ’ ಸಿನಿಮಾಕ್ಕೂ ಸಹ ಸಿಬಿಎಫ್ ಸಿ ಪ್ರಮಾಣ ಪತ್ರ ಕುರಿತಂತೆ ಸಮಸ್ಯೆ ಎದುರಾಗಿತ್ತು.

ಸುಧಾ ಕೊಂಗರ ನಿರ್ದೇಶಿಸಿ, ಶಿವಕಾರ್ತಿಕೇಯನ್ ಮತ್ತು ಶ್ರೀಲೀಲಾ ನಟಿಸಿದ್ದ ‘ಪರಾಶಕ್ತಿ’ ಸಿನಿಮಾಕ್ಕೆ ತಮಿಳುನಾಡಿ ಎಫ್‌ಸಿ ಸಮಿತಿ ಬರೋಬ್ಬರಿ 23 ಕಟ್‌ಗಳನ್ನು ಸೂಚಿಸಿತ್ತು. ಇದನ್ನು ನಿರ್ದೇಶಕಿ ಸುಧಾ ಕೊಂಗರ ವಿರೋಧಿಸಿದ್ದರು. ಸೆನ್ಸಾರ್ ಮಂಡಳಿ ಹೇಳಿರುವ ದೃಶ್ಯಗಳಿಗೆ ಕತ್ತರಿ ಹಾಕಿದರೆ ಸಿನಿಮಾದ ವಿಷಯ ಗೌಣವಾಗುತ್ತದೆ ಎಂದು ವಾದಿಸಿದ್ದರು. ಬಳಿಕ ಸಿನಿಮಾವನ್ನು ಮುಂಬೈನ ರಿವ್ಯೂ ಕಾಮಿಟಿಗೆ ಕಳಿಸಿದ್ದರು. ಇಂದು (ಜನವರಿ 09) ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ಕೊಡುಗೆ.

‘ಪರಾಶಕ್ತಿ’ ಸಿನಿಮಾ ತಮಿಳುನಾಡಿನ ಹಿಂದಿ ವಿರೋಧಿ ಚಳವಳಿಯ ಕುರಿತಾದ ಕಥೆಯನ್ನು ಒಳಗೊಂಡಿದೆ. ಇದೇ ಕಾರಣಕ್ಕೆ ಸಹಜವಾಗಿಯೇ ಕೇಂದ್ರ ಸರ್ಕಾರದ ವಿರುದ್ಧ ಕೆಲವರು ಸಂಭಾಷಣೆಗಳು ಸಹ ಇವೆ, ಈ ಸಿನಿಮಾ ಭಾಷಾವಾರು ದ್ವೇಷಕ್ಕೆ ಕಾರಣ ಆಗಬಹುದೆಂದು ತಮಿಳುನಾಡು ಸಿಬಿಎಫ್ ಸಿ ಹಲವು ದೃಶ್ಯಗಳಿಗೆ ಕಟ್ ಸೂಚಿಸಿತ್ತು. ಆದರೆ ಚಿತ್ರತಂಡ ಇದನ್ನು ವಿರೋಧಿಸಿತ್ತು. ಇದೇ ಕಾರಣಕ್ಕೆ ‘ಜನ ನಾಯಕ’ ರೀತಿ ‘ಪರಾಶಕ್ತಿ’ ಸಿನಿಮಾದ ಬಿಡುಗಡೆ ಸಹ ಇಕ್ಕಟ್ಟಿಗೆ ಸಿಲುಕಿತ್ತು. ಇದೀಗ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ದೊರೆತಿದ್ದು, ಸಿನಿಮಾ ನಿಗದಿಯಂತೆ ನಾಳೆ ಅಂದರೆ ಜನವರಿ 10 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ:’ಜನ ನಾಯಕನ್’ ಎದುರು ‘ಪರಾಶಕ್ತಿ’ ಬಿಡುಗಡೆ ರಾಜಕೀಯ ಪ್ರೇರಿತವೇ? ಸಿಕ್ತು ಸ್ಪಷ್ಟನೆ

ಇದೇ ದಿನ ನ್ಯಾಯಾಲಯದ ಮೂಲಕ ‘ಜನ ನಾಯಕನ್’ ಸಿನಿಮಾಕ್ಕೂ ‘ಯು/ಎ’ ಪ್ರಮಾಣ ಪತ್ರ ದೊರೆತಿದೆ. ಆದರೆ ಸಿನಿಮಾದ ಬಿಡುಗಡೆಯನ್ನು ಘೋಷಣೆ ಮಾಡಲಾಗಿಲ್ಲ. ಒಂದೊಮ್ಮೆ ‘ಜನ ನಾಯಕನ್’ ಸಿನಿಮಾ ಬಿಡುಗಡೆ ತಡವಾದರೆ ಅದು ‘ಪರಾಶಕ್ತಿ’ ಸಿನಿಮಾಕ್ಕೆ ಒಳಿತೇ ಆಗಲಿದೆ. ‘ಪರಾಶಕ್ತಿ’ ಸಿನಿಮಾವು ತಮಿಳು ಜನರು ಹಿಂದಿ ಭಾಷಾ ಹೇರಿಕೆ ವಿರುದ್ಧ ಮಾಡಿದ ಹೋರಾಟದ ಕಥೆಯನ್ನು ಒಳಗೊಂಡಿದೆ. ನಾಯಕ ಶಿವಕಾರ್ತಿಕೇಯನ್ ಕ್ರಾಂತಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಲೀಲಾ, ಹಿಂದಿ ಶಿಕ್ಷಕಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಜಯಂ ರವಿ ವಿಲನ್ ಪಾತ್ರದಲ್ಲಿ ನಟಿಸಿರುವುದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *