Headlines

Video: ಅಯ್ಯೋ ದೇವ್ರೆ, ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್, ಆಮೇಲೇನಾಯ್ತು ನೋಡಿ

Video: ಅಯ್ಯೋ ದೇವ್ರೆ, ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್, ಆಮೇಲೇನಾಯ್ತು ನೋಡಿ


ಆಸ್ಟ್ರೇಲಿಯಾ, ಡಿಸೆಂಬರ್ 12: ಅಪಾಯಕಾರಿ ಸಾಹಸಗಳಿಗೆ ಕೈ ಹಾಕುವ ಮುನ್ನ ಸಾವಿರ ಬಾರಿ ಆಲೋಚಿಸಬೇಕು. ಸ್ಕೈ ಡೈವಿಂಗ್ ಎಂಬುದು ಕೂಡ ಅಂಥದ್ದೇ ಒಂದು ಸಾಹಸ. ಹಲವು ಮಂದಿ ವಿಮಾನದಿಂದ ಕೆಳಗೆ ಡೈವ್ ಮಾಡಲು ಮುಂದಾಗಿದ್ದರು. ಗಾಳಿಯ ಒತ್ತಡವಿದ್ದ ಪರಿಣಾಮ ಹಾರಲಿಲ್ಲ ಬದಲಾಗಿ ಕೆಳಗೆ ಬಿದ್ದಿದ್ದಾರೆ. ಈ ಸಮಯದಲ್ಲಿ ಹೇಗೋ ಪ್ಯಾರಾಚೂಟ್ ಓಪನ್ ಆಗಿ ವಿಮಾನದ ರೆಕ್ಕೆಯಲ್ಲಿ ಸಿಲುಕಿತ್ತು, ಅದನ್ನು ಹಿಡಿದು ಡೈವರ್ ನೇತಾಡುತ್ತಿತ್ತು. ಬಳಿಕ ಅದು ತುಂಡಾಗಿದೆ ಇನ್ನೇನು ಕೆಳಗೆ ಬಿದ್ದೇ ಬಿಡುತ್ತಾರೆ ಎನ್ನುವಷ್ಟರಲ್ಲಿ ಬ್ಯಾಕಪ್ ಪ್ಯಾರಾಚೂಟರ್ ತೆರೆದುಕೊಂಡಿತ್ತು, ವ್ಯಕ್ತಿ ಯಾವುದೇ ಅಪಾಯವಿಲ್ಲದೆ ಕೆಳಗೆ ಇಳಿದಿದ್ದಾರೆ. ಈ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಸೆಪ್ಟೆಂಬರ್‌ನಲ್ಲಿ ಕರ್ನ್ಸ್‌ನ ದಕ್ಷಿಣದಲ್ಲಿ ನಡೆದ ಪ್ರದರ್ಶನದ ಸಾಹಸದ ಸಮಯದಲ್ಲಿ ಸಂಭವಿಸಿದ ಘಟನೆ ಇದಾಗಿದೆ. 15 ಸಾವಿರ ಅಡಿ ಎತ್ತರದಿಂದ ಅವರು ಕೆಳಗೆ ಹಾರಿದ್ದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *