ಹನಿ ಹನಿ ನೀರು ಸೇರಿಯೇ ಸಮುದ್ರ ಆಗೋದು ಅಂತಾರೆ. ಸಣ್ಣ ಸಣ್ಣ ಹೂಡಿಕೆಗಳೇ ದೊಡ್ಡ ಹಣಕಾಸು ಭದ್ರತೆ ತರುವುದು. ಆದರೆ, ಸಣ್ಣ ಎಂದರೆ ಎಷ್ಟು ಸಣ್ಣ ಎಂಬುದು ಮುಖ್ಯ. ತೀರಾ ಸಣ್ಣ ಹೂಡಿಕೆಯನ್ನು (ಹೂಡಿಕೆ ಮೊತ್ತ) ಇದ್ದರೆ ಎರಡು ರೀತಿಯ ತೊಡಕು ಇರುತ್ತದೆ. ಒಂದು, ರಿಟರ್ನ್ ಸಿಗುವ ಮೊತ್ತ ನಿಮಗೆ ಕಡಿಮೆ ಇರುತ್ತದೆ. ಇನ್ನೊಂದು, ದೀರ್ಘಾವಧಿ ಹೂಡಿಕೆಯ ಉತ್ಸಾಹವೂ ಕುಂದುತ್ತದೆ.
ಉದಾಹರಣೆಗೆ, ನೀವು ತಿಂಗಳಿಗೆ 5,000 ರೂ. ಒಮ್ಮೆ ನಿಮ್ಮ ಹೂಡಿಕೆ 60,000 ರೂ ಆಗುತ್ತದೆ. ಆ ಫಂಡ್ ಶೇ. 12ರ ದರದಲ್ಲಿ ಲಾಭ ಕೊಟ್ಟರೆ 7,200 ರೂ. ನೀವು ವರ್ಷ ಎಸ್ ಐಪಿ ಮುಂದುವರಿಸಿದರೂ ಅದರಿಂದ ಸಿಗುವ ರಿಟರ್ನ್ ನಿಮಗೆ ದೊಡ್ಡ ಖುಷಿ ತರುವುದಿಲ್ಲ. ಶೇಕಡಾವಾರು ಲೆಕ್ಕದಲ್ಲಿ ಓಕೆ, ಆದರೆ, ಪ್ರಮಾಣದಲ್ಲಿ ನಿಮಗೆ ತೃಪ್ತಿಕರ ಮೊತ್ತ ಸಿಗುವುದಿಲ್ಲ. ಹೀಗಾಗಿ, ನೀವು ಎಸ್ ಐಪಿಯನ್ನೇ ನಿಲ್ಲಿಸಿಬಿಡುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಗಮನಿಸಿ…! ಕೆಲಸ ಬಿಟ್ಟು 3 ವರ್ಷಕ್ಕೆ ಐಪಿಎಫ್ ಅಕೌಂಟ್ಗೆ ಬಡ್ಡಿ ಸಿಗಲ್ಲ ಅನ್ನೋದು ನಿಜ ಅಲ್ಲ; ಇಲ್ಲಿದೆ ಸತ್ಯಾಂಶ
ಹೂಡಿಕೆ ಮೊತ್ತ ದೊಡ್ಡದಾಗುತ್ತಾ ಹೋಗಬೇಕು..
ಹೂಡಿಕೆಯ ಮೂಲ ಗುಣಗಳಲ್ಲಿ ಹೂಡಿಕೆ ಮೊತ್ತ, ಅವಧಿ ಮತ್ತು ಲಾಭ ಈ ಮೂರೂ ಕೂಡ ಮುಖ್ಯ. ಈ ಮೂರೂ ಅಂಶಗಳು ಅಧಿಕವಾಗಿ ಶ್ರೀಮಂತಿಕೆ ಹೇಳದೇ ಕೇಳದೇ ಬಂದುಬಿಡುತ್ತದೆ.
ನೀವು 5,000 ಎಸ್ ಐಪಿಯಿಂದಲೇ ಹೂಡಿಕೆ ಆರಂಭಿಸಬಹುದು. ಆದರೆ, ವರ್ಷಗಳು ಕಳೆದಂತೆ ಆ ಹೂಡಿಕೆ ಅಷ್ಟಕ್ಕೇ ಸೀಮಿತವಾಗಬಾರದು. ನಿಮ್ಮ ಆದಾಯ ಹೆಚ್ಚಿದಂತೆ ಹೂಡಿಕೆಯ ಮೊತ್ತವೂ ಹೆಚ್ಚುತ್ತಾ ಹೋಗಬೇಕು. 5,000 ರೂ ಎಸ್ ಐಪಿಯಿಂದ ಹೂಡಿಕೆಯು 20 ವರ್ಷದಲ್ಲಿ 50,000 ರೂ ಎಸ್ ಐಪಿಗಳಾಗಿ ಹೆಚ್ಚಾಗಬೇಕು. ಹೀಗೆ ಮಾಡಲು ನೀವು ಸ್ಟೆಪ್ಯಾಪ್ ತಂತ್ರವನ್ನು ಅನುಸರಿಸಬಹುದು. ನಿಮ್ಮ ಆದಾಯದ ಪ್ರತೀ ವರ್ಷ ಹೆಚ್ಚಿದಂತೆ ಹೂಡಿಕೆಯ ಮೊತ್ತವನ್ನೂ ಹೆಚ್ಚಿಸುತ್ತಾ ಹೋಗುವುದೇ ಸ್ಟೆಪಪ್ ತಂತ್ರ.
5,000 ರೂ ಎಸ್ಐಪಿಯಿಂದ ಪ್ರಾರಂಭಿಸಿ ವರ್ಷಕ್ಕೆ ಶೇ. 10ರಷ್ಟು ಸ್ಟೆಪಪ್ ಮಾಡುತ್ತಾ, ಅಂದರೆ ಶೇ. 10ರಷ್ಟು ಹೂಡಿಕೆ ಹೆಚ್ಚಿಸುತ್ತಾ 20 ವರ್ಷ ಹೂಡಿಕೆ ಮುಂದುವರಿಸುವಲ್ಲಿ ಗಮನಾರ್ಹವಾದ ರಿಟರ್ನ್ ನಿಮಗೆ ಸಿಗುತ್ತದೆ. ಸ್ಟೆಪ್ಯಾಪ್ ಇಲ್ಲದೆ 5,000 ರೂ ಎಸ್ ಐಪಿ 20 ವರ್ಷಕ್ಕೆ ಎಷ್ಟು ರಿಟರ್ನ್ ಕೊಡುತ್ತೆ, ಮತ್ತು ಸ್ಟೆಪಪ್ ಇರುವ ಎಸ್ ಐಪಿ ಎಷ್ಟು ರಿಟರ್ನ್ ಕೊಡುತ್ತದೆ ಎಂದು ಹೋಲಿಸಿ ನೋಡಬಹುದು.
ಇದನ್ನೂ ಓದಿ: ಈ ಎಸ್ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ?
20 ವರ್ಷಗಳಿಗೆ ವಾರ್ಷಿಕ ಶೇ. 12 ಸಿಎಜಿಆರ್ನಲ್ಲಿ ಬೆಳೆಯುವ ಫಂಡ್ನಲ್ಲಿ 5,000 ರೂ ಎಸ್ಐಪಿ ಮಾಡಿದರೆ ಸುಮಾರು 50 ಲಕ್ಷ ರೂ ಸಂಪತ್ತು ಸೃಷ್ಟಿಯಾಗುತ್ತದೆ. ಅದೇ ನೀವು ವಾರ್ಷಿಕವಾಗಿ ಶೇ 10 ಸ್ಟೆಪಪ್ಪಿ ಮಾಡಿದರೆ ನಿಮ್ಮ ಸಂಪತ್ತು 1.15 ಕೋಟಿಯಾಗಿರುತ್ತದೆ. ಇದಕ್ಕೆ ಕಾರಣ ಹೂಡಿಕೆಯಲ್ಲಿನ ವ್ಯತ್ಯಾಸ.
5,000 ರೂ ಎಸ್ಐಪಿ ಮೂಲಕ 20 ವರ್ಷದಿಂದ ನೀವು 12 ಲಕ್ಷ ರೂ ಹೂಡಿಕೆ ಮಾಡುತ್ತೀರಿ. ಅದೇ ಹಂತಹಂತವಾಗಿ ನಿಮ್ಮ ಹೂಡಿಕೆಯು 34 ಲಕ್ಷ ರೂ. ಹೀಗಾಗಿ, ನಿಮ್ಮ ಹೂಡಿಕೆಗೆ ಬಹಳ ಒಳ್ಳೆಯ ರಿಟರ್ನ್ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ