ಸ್ಮಾರ್ಟ್ಫೋನ್ ನಲ್ಲಿ ಫ್ಲ್ಯಾಶ್ ಲೈಟ್ ಇರುತ್ತೆ. ಈ ಲೈಟನ್ನು ಬಹುತೇಕ ಎಲ್ಲರೂ ಟಾರ್ಚ್ ಆಗಿ ಬಳಕೆ ಮಾಡ್ತಾರೆ. ಆದ್ರೆ ಅದ್ರಿಂದ ಇನ್ನೂ ಸಾಕಷ್ಟು ಪ್ರಯೋಜನ ಇದೆ. ಸ್ಮಾರ್ಟ್ ಫೋನ್ ನಲ್ಲಿರುವ ಟಾರ್ಚ್ ನಿಮ್ಮ ಜೀವ ಉಳಿಸುವ ಕೆಲ್ಸ ಮಾಡುತ್ತೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ.

ಬಿಕ್ಕಟ್ಟಿನ ಟೈಂನಲ್ಲಿ ನಿಮ್ಮ ಫೋನ್ನಲ್ಲಿರುವ, ನೀವು ಪ್ರಯೋಜನಕ್ಕೆ ಬರೋದಿಲ್ಲ ಅಂದ್ಕೊಂಡಿರುವ ಸಣ್ಣ ಫ್ಲ್ಯಾಶ್ಲೈಟ್ ನಿಮ್ಮ ಜೀವ ಉಳಿಸಬಹುದು. ನೀವು SOS ಎಮರ್ಜೆನ್ಸಿ ಸಿಗ್ನಲ್ ಕಳುಹಿಸಲು ಇದನ್ನು ಬಳಸಬಹುದು. ಈ ವಿಧಾನ ಮೋರ್ಸ್ ಕೋಡ್ ಮಾದರಿಯಲ್ಲಿ ಬೆಳಗುತ್ತೆ. ನೀವು ಎಲ್ಲಾದ್ರೂ ಸಿಕ್ಕಿಬಿದ್ದಾಗ, ಜನರ ಕಣ್ಣಿಗೆ ನೀವು ಕಾಣಿಸ್ತಿಲ್ಲ ಎಂದಾಗ ಇದನ್ನು ಬಳಸಬಹುದು. SOS ಕೋಡ್ ಮಾದರಿಯಲ್ಲಿ ನಿಮ್ಮ ಫ್ಲ್ಯಾಶ್ ಲೈಟ್ ಆನ್ ಮಾಡಿ, ಬೇರೆಯವರನ್ನು ಸಹಾಯಕ್ಕೆ ಕರೆಯಬಹುದು.

ಸ್ಮಾರ್ಟ್ಫೋನ್ ನಲ್ಲಿರವ ಫ್ಲ್ಯಾಶ್ ಲೈಟ್ ನಿಂದ ನಿಮ್ಮ ಹೃದಯದ ಬಡಿತವನ್ನು ನೀವು ಚೆಕ್ ಮಾಡಬಹುದು. ಸ್ಮಾರ್ಟ್ವಾಚ್ ನಿಮ್ಮ ಹಾರ್ಟ್ ರೇಟ್ ಚೆಕ್ ಮಾಡಿದಂತೆ ಫ್ಲ್ಯಾಶ್ ಲೈಟ್ ಕೆಲ್ಸ ಮಾಡುತ್ತೆ. ಪ್ಲೇ ಸ್ಟೋರ್ನಲ್ಲಿ ಹಲವು ಅಪ್ಲಿಕೇಶನ್ಗಳು ಲಭ್ಯವಿದೆ. ಸ್ಯಾಮ್ಸಂಗ್ನಂತಹ ಬ್ರ್ಯಾಂಡ್ಗಳು ತಮ್ಮ ಫೋನ್ಗಳಲ್ಲಿ ಇದೇ ರೀತಿಯ ಫೀಚರ್ ನೀಡುತ್ತವೆ. ಅಲ್ಲಿ ನೀವು ನಿಮ್ಮ ಬೆರಳನ್ನು ಫ್ಲ್ಯಾಶ್ಲೈಟ್ನಲ್ಲಿ ಇರಿಸಬೇಕು. ಅದು ನಿಮ್ಮ ಹಾರ್ಟ್ ರೇಟ್ ಎಷ್ಟಿದೆ ಎಂಬ ಮಾಹಿತಿ ನೀಡುತ್ತದೆ.

ಕತ್ತಲಲ್ಲಿ ಹೊರಗೆ ಹೋಗ್ಬೇಕು ಅಂದಾಗ ನಾವು ಫ್ಲ್ಯಾಶ್ ಲೈಟ್ ಆನ್ ಮಾಡ್ತೇವೆ. ನೀವು ಈ ಫ್ಲ್ಯಾಶ್ ಲೈಟ್ ಓದಲು ಬಳಸಬಹುದು. ಅತಿ ಸಣ್ಣ ಅಕ್ಷರವನ್ನು ಇದ್ರ ಸಹಾಯದಿಂದ ಓದಬಹುದು. ಫೋನ್ನ ಕ್ಯಾಮೆರಾ ತುಂಬಾ ಹತ್ತಿರವಿರುವ ಯಾವುದನ್ನಾದರೂ ಕೇಂದ್ರೀಕರಿಸಿದಾಗ, ಅದಕ್ಕೆ ಸರಿಯಾಗಿ ಬೆಳಕು ಬಿದ್ದಿಲ್ಲ ಅಂದ್ರೆ ಅದು ಸ್ಪಷ್ಟವಾಗಿ ಕಾಣೋದಿಲ್ಲ. ನೀವು ಈ ಟೈಂನಲ್ಲಿ ಫ್ಲ್ಯಾಶ್ ಲೈಟ್ ಆನ್ ಮಾಡಿದ್ರೆ ಸೂಕ್ಷ್ಮ ವಸ್ತುಗಳು ದೊಡ್ಡದಾಗಿ ಕಾಣುತ್ವೆ. ಭೂತಗನ್ನಡಿಯಂತೆ ಇದನ್ನು ನೀವು ಬಳಸಬಹುದು.

ಆಫೀಸ್ ನಲ್ಲಿ ಇಲ್ಲ ಮನೆಯಲ್ಲಿ ಫೋನ್ ಸೈಲೆಂಟ್ ಮಾಡಿರ್ತೇವೆ. ಫೋನ್ ಎಲ್ಲಿದೆ ಅನ್ನೋದೇ ಕೆಲವರಿಗೆ ಮರೆತಿರುತ್ತದೆ. ಇಂಥ ಟೈಂನಲ್ಲಿ ಫೋನ್ ಬಂದ್ರೆ ನಮಗೆ ಫೋನ್ ಬಂದಿದ್ದು ತಿಳಿಯೋದಿಲ್ಲ. ಆಫೀಸ್ ನಲ್ಲಿ ಫೋನ್ ಸೈಲೆಂಟ್ ಆಗಿರಬೇಕು ಎಂಬ ಖಂಡಿಷನ್ ಇದ್ರೆ ನೀವು ಫ್ಲ್ಯಾಶ್ಲೈಟ್ ಬಳಸಬಹುದು. ನೀವು ಫ್ಲ್ಯಾಶ್ ಲೈಟನ್ನು ಅಲರ್ಟ್ ರೀತಿಯಲ್ಲಿ ಬಳಸಬೇಕು. ಯಾವುದೇ ಫೋನ್ ಬಂದ್ರೆ ಇಲ್ಲ ಮೆಸ್ಸೇಜ್ ಬಂದಾಗ ಪ್ಲ್ಯಾಶ್ ಲೈಟ್ ಆನ್ ಆಗುತ್ತದೆ. ಕೆಲ ಫೋನ್ ಗಳಿಗೆ ಫೋನ್ ನಲ್ಲಿಯೇ ಈ ಫೀಚರ್ ನೀಡಲಾಗಿದೆ. ಮತ್ತೆ ಕೆಲ ಫೋನ್ ಗಳಿಗೆ ಅಪ್ಲಿಕೇಷನ್ ಅಗತ್ಯವಿರುತ್ತದೆ. ನಿಮ್ಮ ಫೋನ್ ನಲ್ಲಿ ಈ ಸೌಲಭ್ಯವಿದ್ರೆ ಆರಾಮವಾಗಿ ಬಳಸಬಹುದು.

Source link
ಫೋನ್ ಟಾರ್ಚ್ ಜೀವವನ್ನೇ ಉಳಿಸಬಹುದಂತೆ, ಒಂದೆರಡಲ್ಲ ಇದರ ಉಪಯೋಗ