Headlines

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ? | Smriti Mandhana And Rashmika Mandannas Engagement Cancelled Name Matter Suc

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ? | Smriti Mandhana And Rashmika Mandannas Engagement Cancelled Name Matter Suc


18

ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್

Image Credit : Instagram

ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್

ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ಮುಂದೂಡಲ್ಪಟ್ಟಿತು. ಕೊನೆಗೆ, ಪಲಾಶ್ ಮುಚ್ಚಲ್ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ವದಂತಿಗಳು ಹರಿದಾಡಿತು. ಮುಖ್ಯವಾಗಿ, ಪಲಾಶ್ ಮುಚ್ಚಲ್ ಒಬ್ಬ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಅವರು ಮಂಧನಾಗೆ ಮೋಸ ಮಾಡಿದ್ದಾರೆ ಎಂದು ಹೇಳಲಾದ ಕೆಲವು ಖಾಸಗಿ ಚಾಟಿಂಗ್ ಸ್ಕ್ರೀನ್‌ಶಾಟ್‌ಗಳು ನೆಟ್‌ನಲ್ಲಿ ವೈರಲ್ ಆದವು. ಈ ಚಾಟ್‌ಗಳ ಆಧಾರದ ಮೇಲೆ ಪಲಾಶ್ ಸ್ಮೃತಿಗೆ (Smriti Mandhana)ಮೋಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು.

28

ಬೀಗ ಜಡಿದಿದ್ದರು!

Image Credit : Instagram

ಬೀಗ ಜಡಿದಿದ್ದರು!

ಇದರ ನಡುವೆಯೇ, ನಮ್ಮ ಜೋಡಿ ಚೆನ್ನಾಗಿದೆ ಎಂದು ಮಾತನಾಡುವವರ ಬಾಯಿಗೆ ಬೀಗ ಜಡಿದಂತೆ ಕಾಣಿಸಿಕೊಂಡಿತು ಜೋಡಿ. ತಮ್ಮ ಇನ್​ಸ್ಟಾಗ್ರಾಮ್​ಗೆ ದೃಷ್ಟಿಬೊಟ್ಟು ಇಡುವ ಮೂಲಕ, ತಮ್ಮ ಸಂಬಂಧಕ್ಕೆ ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಪ್ಪ ಎನ್ನುವ ರೀತಿಯಲ್ಲಿ ಪೋಸ್ಟ್​ ಹಂಚಿಕೊಂಡರು. ಆದ್ದರಿಂದ ಇವರ ಬಗ್ಗೆ ಮಾತನಾಡಿದವರೆಲ್ಲಾ ಈಗ ಸುಸ್ತಾದರು!

38

ಹಣೆಬರಹವೇ ಇಷ್ಟು

Image Credit : instagram/smriti_mandhana

ಹಣೆಬರಹವೇ ಇಷ್ಟು

ಕೊನೆಗೆ ವಿಚಿತ್ರ ಎನ್ನುವಂತೆ, ಈ ಸಂಬಂಧ ಮುರಿದು ಬಿದ್ದ ಬಗ್ಗೆ ಸಾರ್ವಜನಿಕಗೊಳಿಸಿದರು ಸ್ಮೃತಿ ಮಂಧಾನ. ಈ ಸೆಲೆಬ್ರಿಟಿಗಳ ಹಣೆಬರಹವೇ ಇಷ್ಟು. ನಾಳೆ ಮತ್ತೆ ಒಂದಾಗಿರುವುದಾಗಿ ಪೋಸ್ಟ್​ ಹಾಕಿದ್ರೂ ಹಾಕಿದ್ರೇ ಎಂದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆಗಳೂ ಕೇಳಿ ಬರುತ್ತಿವೆ.

48

ಬ್ಯಾಟಿಂಗ್ ಅಭ್ಯಾಸ

Image Credit : Instagram

ಬ್ಯಾಟಿಂಗ್ ಅಭ್ಯಾಸ

ಅದೇನೇ ಇದ್ದರೂ, ಸದ್ಯ ಸ್ಮೃತಿ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

58

ರಶ್ಮಿಕಾ ಸ್ಟೋರಿ

Image Credit : Instagram

ರಶ್ಮಿಕಾ ಸ್ಟೋರಿ

ಇದು ಸ್ಮೃತಿ ಸ್ಟೋರಿಯಾದರೆ, ಅತ್ತ ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ (Rashmika Mandanna) ಈಗ ಎಂಗೇಜ್​ ಆಗಿರುವುದು ನಿಜವೋ ಹೌದೋ ಅಲ್ಲವೋ ಎನ್ನುವ ವಿಚಿತ್ರ ಪೋಸ್ಟ್​ಗಳನ್ನು ಹಾಕಿ ಫ್ಯಾನ್ಸ್​ ತಲೆಗೆ ಹುಳು ಬಿಡುತ್ತಲೇ ಇದ್ದಾರೆ.

68

ರಕ್ಷಿತ್​ ಶೆಟ್ಟಿ ಜೊತೆ ಎಂಗೇಜ್​

Image Credit : Instagram

ರಕ್ಷಿತ್​ ಶೆಟ್ಟಿ ಜೊತೆ ಎಂಗೇಜ್​

ಆದರೆ, ಇದಕ್ಕೂ ಮುನ್ನ ಅವರು ಸ್ಯಾಂಡಲ್​ವುಡ್​ ನಟ ರಕ್ಷಿತ್ ಶೆಟ್ಟಿ (Rakshit Shetty) ಎಂಗೇಜ್​ಮೆಂಟ್​ ಆಗಿದ್ದರು. ಆದರೆ, ಅದು ಮುರಿದು ಬಿದ್ದಿತ್ತು. ಆದರೂ ಅದರ ಬಗ್ಗೆ ಆಗಾಗ ಚರ್ಚೆ ಆಗ್ತಿರುತ್ತೆ. ಕನ್ನಡಿಗರು, ರಶ್ಮಿಕಾ, ರಕ್ಷಿತ್ ಶೆಟ್ಟಿಗೆ ಮೋಸ ಮಾಡಿದ್ದಾರೆ ಎನ್ನುವ ಆರೋಪ ಮಾಡ್ತಾ ಬಂದಿದ್ದಾರೆ. ಅದರ ಬಗ್ಗೆ ರಕ್ಷಿತ್ ಶೆಟ್ಟಿಯಾಗ್ಲಿ, ರಶ್ಮಿಕಾ ಮಂದಣ್ಣ ಆಗ್ಲಿ ಇವರೆಗೆ ಮಾತನಾಡಿಲ್ಲ. ಆದ್ರೀಗ ರಶ್ಮಿಕಾ, ದಿ ಗರ್ಲ್ ಫ್ರೆಂಡ್ ಸಕ್ಸಸ್ ಮೀಟ್ ನಲ್ಲಿ ತಮ್ಮ ಹಳೆ ದಿನಗಳನ್ನು ಮೆಲುಕು ಹಾಕಿದ್ದಾರೆ. ರಶ್ಮಿಕಾ ಮಂದಣ್ಣ ಮಾತನ್ನು ರಕ್ಷಿತ್ ಶೆಟ್ಟಿ ಜೊತೆ ಲಿಂಕ್ ಮಾಡಲಾಗಿದೆ.

78

ರಶ್ಮಿಕಾ ಭಾವುಕ

Image Credit : Instagram/@rashmika_mandanna

ರಶ್ಮಿಕಾ ಭಾವುಕ

ದಿ ಗರ್ಲ್ ಫ್ರೆಂಡ್ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾ ಮಂದಣ್ಣ ಭಾವುಕರಾಗಿದ್ರು. ಇದೇ ವೇಳೆ ತಮ್ಮ ಹಳೆ ದಿನಗಳನ್ನು ಸಿನಿಮಾಕ್ಕೆ ಲಿಂಕ್ ಮಾಡಿದ್ದರು. script ನೋಡ್ದಾಗ ಈ ಕಥೆ ಎಲ್ಲೋ ಕೇಳಿದ್ದೇನೆ ಅಂತ ಭಾಸವಾಗಿತ್ತು. ನನ್ನ ಇಡೀ ಜೀವನದಲ್ಲಿ ನಡೆದ ಘಟನೆಯನ್ನೇ ಈ ಸಿನಿಮಾ ಹೊಂದಿದೆ. ಎಲ್ಲದೂ ನಂದೇ ತಪ್ಪು ಅಂತ ನಾನು ಆಗ ಅಂದ್ಕೊಂಡಿದ್ದೆ. ಆಗ ನನಗೆ ಯಾರೂ ಸಲಹೆ ನೀಡೋರು ಇರಲಿಲ್ಲ ಎಂದಿದ್ದರು.

88

ಮಂದಣ್ಣ ಮತ್ತು ಮಂಧಾನ

Image Credit : Instagram

ಮಂದಣ್ಣ ಮತ್ತು ಮಂಧಾನ

ಇದೀಗ ಸ್ಮೃತಿ ಮಂಧಾನ ಮತ್ತು ರಶ್ಮಿಕಾ ಮಂದಣ್ಣ ಅವರ ಹೆಸರಿನ ಜೊತೆ ಥಳಕು ಹಾಕಲಾಗುತ್ತದೆ. ಮಂದಣ್ಣ ಮತ್ತು ಮಂಧಾನ ನಡುವೆ ಏನಪ್ಪಾ ಇದೆ ಹೋಲಿಕೆ, ಏನಪ್ಪಾ ಇದೆ ಗ್ರಹಚಾರ ಎನ್ನುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.



Source link

Leave a Reply

Your email address will not be published. Required fields are marked *