ಒನ್ ಸೈಡ್ ಸೆಕ್ಯುಲರಿಸಂ?: ಜೆಮಿಮಾ ಜೊತೆ ಸಾಂತಾ ಟೋಪಿ ಧರಿಸಿದ ಸ್ಮೃತಿಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್!

ಒನ್ ಸೈಡ್ ಸೆಕ್ಯುಲರಿಸಂ?: ಜೆಮಿಮಾ ಜೊತೆ ಸಾಂತಾ ಟೋಪಿ ಧರಿಸಿದ ಸ್ಮೃತಿಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್!

ಒನ್ ಸೈಡ್ ಸೆಕ್ಯುಲರಿಸಂ?: ಜೆಮಿಮಾ ಜೊತೆ ಸಾಂತಾ ಟೋಪಿ ಧರಿಸಿದ ಸ್ಮೃತಿಗೆ ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್!

ಭಾರತೀಯ ಮಹಿಳಾ ಕ್ರಿಕೆಟಿಗರಾದ ಸ್ಮೃತಿ ಮಂಧಾನ ಮತ್ತು ಜೆಮಿಮಾ ರೊಡ್ರಿಗಸ್ ಅವರ ಗಾಢ ಸ್ನೇಹವು ಕ್ರಿಸ್‌ಮಸ್‌ ಆಚರಣೆಯ ಫೋಟೋದಿಂದ ವಿವಾದಕ್ಕೆ ಸಿಲುಕಿದೆ. ಜೆಮಿಮಾ ಆಯೋಜಿಸಿದ್ದ ಪಾರ್ಟಿಯಲ್ಲಿ ಸ್ಮೃತಿ ಭಾಗವಹಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಜೆಮಿಮಾ ರೊಡ್ರಿಗಸ್ ನಡುವಿನ ಗಾಢ ಸ್ನೇಹಕ್ಕೆ ಈಗ ‘ಧರ್ಮ’ ಮತ್ತು ‘ಆಚರಣೆ’ಗಳ ವಿವಾದದ ನೆರಳು ಬಿದ್ದಿದೆ.

ಮೈದಾನದಲ್ಲಿ ಎದುರಾಳಿಗಳನ್ನು ನಡುಗಿಸುವ ಈ ಜೋಡಿ, ಮೈದಾನದ ಹೊರಗೆ ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧಾನ ಮತ್ತು ಜೆಮಿಮಾ ರೊಡ್ರಿಗಸ್ ಕೇವಲ ಸಹೋದ್ಯೋಗಿಗಳಲ್ಲ, ಬದಲಿಗೆ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲುವ ಪ್ರಾಣ ಸ್ನೇಹಿತೆಯರು.

ಇತ್ತೀಚೆಗೆ ಸ್ಮೃತಿ ಮಂಧಾನ ಅವರ ವೈಯಕ್ತಿಕ ಜೀವನದ ಕಷ್ಟದ ಸಮಯದಲ್ಲಿ (ಮದುವೆ ಮಾತುಕತೆ ಮುರಿದುಬಿದ್ದಾಗ), ಜೆಮಿಮಾ ಅವರು ತಮ್ಮ ವಿದೇಶಿ ಲೀಗ್ ಪಂದ್ಯಗಳನ್ನೇ ಕೈಬಿಟ್ಟು ಗೆಳತಿಯ ಸಾಂತ್ವನಕ್ಕೆ ಬಂದಿದ್ದರು. ಆದರೆ ಈ ಗಾಢ ಬಾಂಧವ್ಯಕ್ಕೆ ಈಗ ಕ್ರಿಸ್‌ಮಸ್‌ ಆಚರಣೆಯೊಂದು ವಿವಾದದ ತಿರುವು ನೀಡಿದೆ.

ಶ್ರೀಲಂಕಾ ವಿರುದ್ಧದ ಸರಣಿಗಾಗಿ ಕೇರಳದ ತಿರುವನಂತಪುರಂನಲ್ಲಿರುವ ಭಾರತೀಯ ತಂಡದ ಆಟಗಾರ್ತಿಯರು ಕ್ರಿಸ್‌ಮಸ್‌ ಆಚರಿಸಿದ್ದಾರೆ.

ಜೆಮಿಮಾ ರೊಡ್ರಿಗಸ್ ಏರ್ಪಡಿಸಿದ್ದ ಈ ಪಾರ್ಟಿಯಲ್ಲಿ ಸ್ಮೃತಿ ಮಂಧಾನ ಹಾಗೂ ಅರುಂಧತಿ ರೆಡ್ಡಿ ಸಾಂತಾ ಕ್ಲಾಸ್ ಟೋಪಿ ಧರಿಸಿ ನಗುತ್ತಾ ಸಂಭ್ರಮಿಸಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಟ್ರೋಲಿಗರು ಅಖಾಡಕ್ಕಿಳಿದಿದ್ದಾರೆ.

ಈ ವಿವಾದಕ್ಕೆ ಮುಖ್ಯ ಕಾರಣ ಹಿಂದೂ ದೇವಾಲಯದ ಭೇಟಿ. ಇತ್ತೀಚೆಗೆ ಭಾರತೀಯ ಮಹಿಳಾ ತಂಡವು ಆಂಧ್ರಪ್ರದೇಶದ ಪ್ರಸಿದ್ಧ ಸಿಂಹಾಚಲಂ ದೇವಾಲಯಕ್ಕೆ ಭೇಟಿ ನೀಡಿದಾಗ, ಜೆಮಿಮಾ ರೊಡ್ರಿಗಸ್ ಅಲ್ಲಿ ಕಾಣಿಸಿಕೊಂಡಿರಲಿಲ್ಲ.

ಜೆಮಿಮಾ ಅವರು ತನ್ನ ಧರ್ಮದ ಕಾರಣಕ್ಕೆ ಹಿಂದೂ ದೇವಸ್ಥಾನಗಳಿಂದ ಅಥವಾ ಆಚರಣೆಗಳಿಂದ ದೂರ ಉಳಿಯುತ್ತಾರೆ. ಹಾಗಿದ್ದಾಗ ಸ್ಮೃತಿ ಹಾಗೂ ತಂಡದ ಆಟಗಾರ್ತಿಯರು ಜೆಮಿಮಾ ಅವರ ಕ್ರಿಸ್‌ ಮಸ್‌ ಸಂಭ್ರಮದಲ್ಲಿ ಭಾಗಿಯಾಗಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಆದರೆ ಹಿಂದೂ ಸಂಪ್ರದಾಯಸ್ಥ ಕುಟುಂಬದ ಸ್ಮೃತಿ ಮಂಧಾನ ಮಾತ್ರ ಕ್ರಿಸ್‌ಮಸ್‌ ಟೋಪಿ ಧರಿಸಿ ಸಂಭ್ರಮಿಸುತ್ತಾರೆ. ಸೆಕ್ಯುಲರಿಸಂ ಎಂಬುದು ಕೇವಲ ಹಿಂದೂಗಳಿಗೆ ಮಾತ್ರವೇ?" ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಹಿಂದೂಗಳು ಎಲ್ಲ ಧರ್ಮದ ಹಬ್ಬಗಳನ್ನು ಆಚರಿಸಬೇಕು, ಆದರೆ ಅನ್ಯ ಧರ್ಮೀಯರು ಹಿಂದೂ ಸಂಪ್ರದಾಯಗಳಿಂದ ದೂರವಿರುವುದು ಎಷ್ಟು ಸರಿ ಎಂಬ ಚರ್ಚೆ ಈಗ ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ತೀವ್ರವಾಗಿದೆ.

ಮೈದಾನದ ಹೊರಗಿನ ವೈಯಕ್ತಿಕ ಸ್ನೇಹ ಮತ್ತು ಆಚರಣೆಗಳು ಇದೀಗ ಧರ್ಮದ ಕನ್ನಡಕದಲ್ಲಿ ನೋಡುವಂತಾಗಿದ್ದು, ಸ್ಕೃತಿ ಮತ್ತು ಜೆಮಿಮಾ ಅವರ ಕ್ರಿಸ್‌ಮಸ್‌ ಫೋಟೋ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ.

Source link

Leave a Reply

Your email address will not be published. Required fields are marked *