Headlines

ಶಿವಮೊಗ್ಗ ಉಳವಿ ಗ್ರಾಮದಲ್ಲಿ ಅನಿಷ್ಟ ಪದ್ಧತಿ: ರಸ್ತೆ ಕಾಮಗಾರಿ ಕಳಪೆ ಎಂದು ದೂರು ನೀಡಿದ ಗ್ರಾಮಸ್ಥರಿಗೆ 5 ವರ್ಷದಿಂದ ಬಹಿಷ್ಕಾರ

ಶಿವಮೊಗ್ಗ ಉಳವಿ ಗ್ರಾಮದಲ್ಲಿ ಅನಿಷ್ಟ ಪದ್ಧತಿ: ರಸ್ತೆ ಕಾಮಗಾರಿ ಕಳಪೆ ಎಂದು ದೂರು ನೀಡಿದ ಗ್ರಾಮಸ್ಥರಿಗೆ 5 ವರ್ಷದಿಂದ ಬಹಿಷ್ಕಾರ


ಸಾಮಾಜಿಕ ಬಹಿಷ್ಕಾರ ಪ್ರಕರಣಚಿತ್ರದ ಕ್ರೆಡಿಟ್ ಮೂಲ: tv9

ಶಿವಮೊಗ್ಗ, ಫೆಬ್ರವರಿ 13: ಇದು ನಾಗರೀಕ ಸಮಾಜವೇ ತಲೆ ತಗ್ಗಿಸುವ ವಿಚಾರ. ಮನೆಯನ್ನೆಲ್ಲಾ ಕಿತ್ತು ಬಿಸಾಡಿದ್ದಾರೆ. ಯಾವ ಕಾರ್ಯಕ್ರಮಕ್ಕೂ ಹೋಗಲಿಲ್ಲ. ಯಾರ ಬಳಿಯೂ ಕೆಲಸಕ್ಕೆ ಹೋಗ್ತಿಲ್ಲ. ಇದಕ್ಕೆ ಕಾರಣವೇ ಸಾಮಾಜಿಕ ಬಹಿಷ್ಕಾರ. ಹಳ್ಳಿ ರಾಜಕೀಯ ದಿಲ್ಲಿಯನ್ನೂ ಮೀರಿಸುತ್ತೆ ಎನ್ನುತ್ತಾರೆ. ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ ಶಿವಮೊಗ್ಗ (ಶಿವಮೊಗ್ಗ) ಜಿಲ್ಲೆ. ಇಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟದಿಂದ ಕುಟುಂಬಗಳು ಬೀದಿಗೆ ಬಿದ್ದಿವೆ. ಸೊರಬ ತಾಲೂಕಿನ ಅರಣ್ಯಭಾಗದಲ್ಲಿರುವ ಉಳವಿ ಗ್ರಾಮದಲ್ಲಿ ಮೂರು ಬಾರಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಅದು ಕಳಪೆಯಾಗಿದೆ ಎಂದು ಚಂದ್ರಪ್ಪ ಎಂಬವರು ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿ, 25 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಬಗ್ಗೆ ಸೊರಬ ತಹಶೀಲ್ದಾರ್ ಸೇರಿದಂತೆ ವೈದ್ಯರು, ಸಮಾಜ ಕಲ್ಯಾಣ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಇದು ಒಬ್ಬಿಬ್ಬರ ಕಥೆಯಲ್ಲ. ಗ್ರಾಮದಲ್ಲಿ ಬಹಿಷ್ಕಾರ ಮಾಡಿರುವುದು ಗ್ರಾಮ ಸಮಿತಿ. ಗ್ರಾಮ ಸಮಿತಿಯ ತೀರ್ಮಾನ ಒಪ್ಪದಿದ್ರೆ, ಬಹಿಷ್ಕಾರ ಹಾಕುತ್ತಾರೆ. ಬಹಿಷ್ಕಾರ ಹಾಕಿದ ಕುಟುಂಬದ ಜೊತೆ ಮಾತನಾಡಿದವರಿಗೆ 5 ಸಾವಿರ ದಂಡ ವಿಧಿಸುತ್ತಾರೆ. ಈ ಹಿನ್ನಲೆಯಲ್ಲಿ ಬಹಿಷ್ಕಾರ ಹಾಕಿದ ಕುಟುಂಬದ ಗ್ರಾಮಸ್ಥರು ಭಯದಿಂದ ದೂರ ಇರುತ್ತಾರೆ.

ಮಾಜಿ ಸಿಎಂ ದಿ. ಎಸ್ ಬಂಗಾರಪ್ಪ ಮತ್ತು ಹಾಲಿ ಶಿಕ್ಷಣ ಸಚಿವ ಮಧುಪ್ಪರ ತವರೂರಿನಲ್ಲೇ ಈ ರೀತಿ ಅನ್ಯಾಯ ನಡೆದಿದೆ. ಸೊರಬ ತಾಲೂಕಿನ ಗುಡವಿ, ದೂಗುರು, ಮಳಲಿ ಗದ್ದೆ, ಕುದುರೆ ಗಣಿ, ಚಿಮ್ಮನೂರು, ಉಳವಿ ಗ್ರಾಮದಲ್ಲಿ ಈ ಅನಿಷ್ಟ ಪದ್ಧತಿಗೆ ಜನ ಹೈರಾಣಾಗಿದ್ದಾರೆ.

ಗ್ರಾಮ ಸಭೆಗಳಲ್ಲಿನ ಸಮಸ್ಯೆಗಳ ಬಗ್ಗೆ ಪ್ರಶ್ನಿಸಲಾಗಿದೆ!

ಗ್ರಾಮ ಸಭೆಗಳ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರೆ, ಅಂತಹ ಕುಟುಂಬಗಳಿಗೆ ಗುರಿಯಾಗುವುದಿಲ್ಲ. ಜೀವನ ನಿರ್ವಹಣೆಗೆ ಅಂಗಡಿಗಳಲ್ಲಿ ಧವಸ-ಧಾನ್ಯ ನೀಡುತ್ತಿಲ್ಲ. ಶಾಲಾ-ಕಾಲೇಜಿಗೆ ತೆರಳಲು ಆಟೋಗಳಲ್ಲಿ ಪ್ರವೇಶ ನೀಡುತ್ತಿಲ್ಲ. ಕೂಡಲೇ ಗ್ರಾಮ ಸಮಿತಿ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಬಹಿಷ್ಕಾರಕ್ಕೆ ಮುಕ್ತಿ ಹಾಡಬೇಕಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *