
ರಾಯಚೂರು, (ಅಕ್ಟೋಬರ್ 21): ಐದು ವರ್ಷದ ಹಿಂದಿನ ಅಂದರೆ 2020 ರ ಪ್ರಕರಣವನ್ನು ರಾಯಚೂರು ನ್ಯಾಯಾಲಯ ಭೇದಿಸಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ನಡೆದ ಸೈಬರ್ ವಂಚನೆ ಪ್ರಕರಣದಲ್ಲಿ ಆರೋಪಿಯಿಂದ ವಶಪಡಿಸಿಕೊಂಡ ಸುಮಾರು 18.29 ಲಕ್ಷ ರೂಪಾಯಿಗಳನ್ನು ಮಂಗಳವಾರ ಸಂಜೆ 6 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ವಂಚನೆಗೊಳಗಾದವರಿಗೆ ಹಿಂದಿರುಗಿಸಲಾಯಿತು. ರಾಯಚೂರು ನಗರದ ವಿದ್ಯಾ ನಿವಾಸಿ ಲಕ್ಷ್ಮೀಕಾಂತ್ ಅವರು 2020ರಲ್ಲಿ ಫೇಸ್ ಬುಕ್ ನಲ್ಲಿ ಟ್ರೆಡ್, MTFS ಜಾಹಿರಾತು ನೋಡಿ, ಹೆಚ್ಚಿನ ಲಾಭದ ಆಸೆಗೆ ಜಾಹೀರಾತಿನಲ್ಲಿದ್ದ ಇಮೇಲ್ ಗೆ ಹಣ ಹೂಡಿಕೆ ಮಾಡಿ ಬಳಿಕ ಮೋಸ ಹೋಗಿದ್ದರು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಹಾಗೂ ಆತನ ಖಾತೆಗಳಿಂದ ಈ ಹಣ ರಿಕವರಿ ಯಶಸ್ವಿಯಾಗಿದೆ. ಹೀಗಾಗಿ ಪೇಸ್ ಬುಕ್ ನಲ್ಲಿ ಬರುವ ಜಾಹಿರಾತು ಬಗ್ಗೆ ಎಸ್ಪಿ ಎಚ್ಚರಿಕೆ ನೀಡಿದೆ.