
ಸೋನಲ್ ಮೊಂತೆರೋ ಹಾಗೂ ತರುಣ್ ಸುಧೀರ್ ಅವರು ಹೊಸ ಮನೆಗೆ ಪ್ರವೇಶಿಸಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ. ಇಡೀ ಮನೆ ತುಂಬಾ ಸುಂದರವಾಗಿದೆ. ಆ ಸಂದರ್ಭದ ಫೋಟೋಗಳು ಇಲ್ಲಿವೆ.

ಅಪಾರ್ಟ್‌ಮೆಂಟ್ ಒಂದರಲ್ಲಿ ಮನೆಯನ್ನು ಖರೀದಿಸಿದೆ ಈ ಜೋಡಿ. ಪೂಜೆ ಮಾಡುವ ಮೂಲಕ ಮನೆಯನ್ನು ಪ್ರವೇಶಿಸಿದರು. ಹೊಸ ಮನೆ ಖರೀದಿಸಿದ ದಂಪತಿಗೆ ಎಲ್ಲರೂ ಶುಭ ಕೋರುತ್ತಾ ಇದ್ದಾರೆ.

ಇಡೀ ಮನೆಯಲ್ಲಿ ಒಬ್ಬರ ಫೋಟೋ ಹೈಲೈಟ್ ಆಗಿದೆ. ಅದುವೇ ತರುಣ್ ತಂದೆ ಸುಧೀರ್. ಅವರ ಫೋಟೋವನ್ನು ಮನೆಯ ಹಾಲ್‌ನಲ್ಲಿ ದೊಡ್ಡದಾಗಿ ಹಾಕಲಾಗಿದೆ. ಈ ಫೋಟೋಗೆ ದಂಪತಿ ಪೂಜೆ ಮಾಡಿದ್ದಾರೆ.

ತರುಣ್ ಅವರಿಗೆ ತಂದೆಯ ಮೇಲೆ ಅಪಾರ ಪ್ರೀತಿ. ಸುಧೀರ್ ಅವರು ಹಲವು ವರ್ಷಗಳ ಕಾಲ ವಿಲನ್ ಆಗಿ ಮಿಂಚಿದ್ದರು. ಈ ಕಾರಣದಿಂದ ಸುಧೀರ್ ಫೋಟೋವನ್ನು ಮನೆಯಲ್ಲಿ ದೊಡ್ಡದಾಗಿ ಹಾಕಲಾಗಿದೆ.

ಪೂಜಾ ವಿಧಿ ವಿಧಾನಗಳನ್ನು ಸೋನಲ್ ಮತ್ತು ತರುಣ್ ಅವರು ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಸೋನಲ್ ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಕೂಡ ಆಗಮಿಸಿ ದಂಪತಿಗೆ ಶುಭಕೋರಿದ್ದಾರೆ.

ಹೊಸ ಮನೆ ಪ್ರವೇಶಿಸುವಾಗ ಹಾಲುಕ್ಕಿಸೋ ಸಂಪ್ರದಾಯ ಇದೆ. ಸೋನಲ್ ಕೂಡ ಇದನ್ನು ಪಾಲಿಸಿದ್ದಾರೆ. ಅವರು ಮದುವೆ ಬಳಿಕ ಹಿಂದೂ ಧರ್ಮವನ್ನು ಪಾಲಿಸುತ್ತಾ ಇದ್ದಾರೆ. ಹಿಂದೂ ಸಂಪ್ರದಾಯಗಳನ್ನು ಇಷ್ಟಪಟ್ಟು ಅನುಸರಿಸಲಾಗುತ್ತಿದೆ.

ತರುಣ್ ಕುಟುಂಬಕ್ಕೆ ಶರಣ್ ಎಂದರೆ ಅಚ್ಚುಮೆಚ್ಚು. ಇಬ್ಬರೂ ಒಳ್ಳೆಯ ಗೆಳೆಯರು. ಹೀಗಾಗಿ, ಗೆಳೆಯನ ಹೊಸ ಮನೆಯ ಪ್ರವೇಶಕ್ಕೆ ಶರಣ್ ಆಗಮಿಸಿ ವಿಶ್ ಮಾಡಿದ್ದಾರೆ. ಶ್ರುತಿ ಹಾಗೂ ಅವರ ಕುಟುಂಬ ಕೂಡ ಹಾಜರಿತ್ತು.
ರಂದು ಪ್ರಕಟಿಸಲಾಗಿದೆ – 8:50 am, ಶುಕ್ರ, 2 ಜನವರಿ 26