
ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹೂಜಾ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಸೋನಂ ಎರಡನೇ ಬಾರಿಗೆ ತಾಯಿ ಆಗಿದ್ದಾರೆ. ಅವರಿಗೆ ಗಂಡು ಮಗು ಜನಿಸಿದೆ. ಮಾರ್ಚ್ 29 ರಂದು ಮಗು ಜನಿಸಿದೆ. ಈ ಬಗ್ಗೆ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೋನಂ ಕಪೂರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಸೋನಂ ಕುಟುಂಬ ಮತ್ತಷ್ಟು ವಿಸ್ತೃತವಾಗಿದೆ.
ಸೋನಂ ಕಪೂರ್ ಅವರು ಇನ್ಸ್ಟಾಗ್ರಾಮ್ ಅಲ್ಲಿ ಈ ಬಗ್ಗೆ ಮಾಹಿತಿ ಇದೆ. ‘ನಮ್ಮ ಕುಟುಂಬ ಹಿರಿದಾಗಿದೆ. ಅವನ ಆಗಮನದಿಂದ ನಮ್ಮ ಹೃದಯದಲ್ಲಿ ಸಂತಸ ಹೆಚ್ಚಿದೆ. ವಾಯು ತನ್ನ ಚಿಕ್ಕ ಸಹೋದರನನ್ನು ಸ್ವಾಗತಿಸಲು ಖುಷಿಯಾಗಿದ್ದಾನೆ. ನಮ್ಮ ಮನೆಯ ಸಂತೋಷ ಹೆಚ್ಚಿದೆ. ಈಗ ಕುಟುಂಬ ನಾಲ್ಕು ಜನರಿಗೆ ಬಡ್ತಿ ಪಡೆದಿದೆ. ಹೊಸ ಅಧ್ಯಾಯವನ್ನು ಪ್ರಾರಂಭಿಸಲು ನಾವು ಕೃತಜ್ಞರಾಗಿರುತ್ತೇವೆ. ಪ್ರೀತಿಯಿಂದ, ಸೋನಮ್, ಆನಂದ್ ಮತ್ತು ವಾಯು’ ಎಂದು ಅವರು ಬರೆದುಕೊಂಡಿದ್ದಾರೆ.
ಸೋನಂ ಕಪೂರ್ ಅವರಿಗೆ ಅನೇಕ ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. ‘ಸೋನಾ ಹಾಗೂ ಆನಂದ್ ಗೆ ಅಭಿನಂದನೆ’ ಎಂದು ಕರೀನಾ ಕಪೂರ್ ಕಮೆಂಟ್ ಮಾಡಿದ್ದಾರೆ. ಹುಮಾ ಖುರೇಷಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹಾರ್ಟ್ ಎಮೋಜಿ ಹಾಕಿದ್ದಾರೆ.
ಇದನ್ನೂ ಓದಿ: ಎರಡನೇ ಬಾರಿಗೆತಾಯಿ ಆಗ್ತಿದ್ದಾರೆ ಸೋನಂ ಕಪೂರ್; ಸೀಮಂತ ಶಾಸ್ತ್ರದ ಫೋಟೋ ವೈರಲ್
2025ರ ನವೆಂಬರ್ ಅಲ್ಲಿ ಸೋನಂ ಕಪೂರ್ ಅವರು ಪ್ರೆಗ್ನೆನ್ಸಿ ಬಗ್ಗೆ ಘೋಷಣೆ ಮಾಡಿದರು. ‘ತಾಯಿ’ ಎಂದು ಅವರು ಕ್ಯಾಪ್ಶನ್ ನೀಡಿದ್ದರು. 2018ರಲ್ಲಿ ಆನಂದ್ ಜೊತೆ ಸೋನಂ ಕಪೂರ್ ವಿವಾಹ. 2022ರಲ್ಲಿ ಗಂಡು ಮಗು ಜನಿಸಿತು. ಇದಕ್ಕೆ ‘ವಾಯು’ ಎಂದು ಹೆಸರು ಇಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.