Headlines

ಸೋನು ನಿಗಂರ ಮತ್ತೊಂದು ಬಣ್ಣ ಬಯಲು: ವಿವಾದಿತ ಸಿಂಗರ್​ಗೆ ಮೈ ಚಳಿ ಬಿಡಿಸಿದ್ದ ಜೋಗಿ ಪ್ರೇಮ್​! | Sonu Nigam Kannada Controversy Jogi Prem Story Gvd

ಸೋನು ನಿಗಂರ ಮತ್ತೊಂದು ಬಣ್ಣ ಬಯಲು: ವಿವಾದಿತ ಸಿಂಗರ್​ಗೆ ಮೈ ಚಳಿ ಬಿಡಿಸಿದ್ದ ಜೋಗಿ ಪ್ರೇಮ್​! | Sonu Nigam Kannada Controversy Jogi Prem Story Gvd


ಸೋನು ನಿಗಂ.. ಈಗ ಸ್ಯಾಂಡಲ್​ವುಡ್​​​ನಲ್ಲಿ ವಿವಾದಿತ ಸಿಂಗರ್​.. ಸೋನು ನಿಗಂ ವಾಯ್ಸ್​ಗೆ ಕೋಟ್ಯಾನು ಕೋಟಿ ಫಾಲೋವರ್ಸ್​ ಇದ್ದಾರೆ. ಕನ್ನಡದಲ್ಲಿ ಹಲವು ಹಿಟ್​ ಆಲ್ಬಂಗಳನ್ನ ಸೋನು ನಿಗಂ ಕೊಟ್ಟಿದ್ದಾರೆ. ಆದ್ರೆ ಇತ್ತೀಚೆಗೆ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿ ಸೋನು ನಿಗಂ ಕನ್ನಡ ಚಿತ್ರರಂಗದಿಂದಲೇ ಬ್ಯಾನ್ ಆಗಿದ್ರು. ಇದೀಗ ಈ ಸ್ಟಾರ್ ಸಿಂಗರ್​​​​ಗೆ ನಿರ್ದೇಶಕ ಜೋಗಿ ಪ್ರೇಮ್ ವೃತ್ತಿ ಧರ್ಮದ ಪಾಠ ಮಾಡಿರೋ ಸ್ಟೋರಿಯೊಂದು ಹೊರ ಬಂದಿದೆ. ಈ ಘಟನೆಯನ್ನ ಸ್ವತಹ ಪ್ರೇಮ್​ ಹೇಳಿಕೊಂಡಿದ್ದಾರೆ..  ಸ್ಯಾಂಡಲ್​ವುಡ್​ನಲ್ಲಿ ಸೋನು ನಿಗಂ ಈಗ ಹಾಟ್ ಟಾಪಿಕ್​.. ಜಮ್ಮು ಕಾಶ್ಮೀರದ ಪಹಲ್ಗಾಮ್​ ದಾಳಿಗೆ ಕನ್ನಡ ಕನ್ನಡ ಎಂದಿದ್ದೇ ಕಾರಣ ಅನ್ನೋ ಮೂಲಕ ದೊಡ್ಡ ವಿವಾದದ ಬೆಂಕಿ ಹಚ್ಚಿದ್ದ ಈ ಸ್ಟಾರ್ ಸಿಂಗರ್​​ ಕೊನೆಗೆ ಕನ್ನಡ ಚಿತ್ರರಂಗದಿಂದಲೇ ಬ್ಯಾನ್ ಆಗಿದ್ರು.

ಈ ಬ್ಯಾನ್ ಹಸಿಗೆ ಅಂಡು ಸುಟ್ಟ ಬೆಂಕಿನಂತಾಗಿದ್ದ ಸೋನುನಿಗಂ ಕೊನೆಗೆ ವಿಧಿ ಇಲ್ಲದೇ ಕನ್ನಡಿಗರ ಕ್ಷಮೆಯನ್ನೂ ಹೇಳಿದ್ರು. ಆದ್ರೆ ಈಗ ಸೋನು ನಿಗಂರ ಮತ್ತೊಂದು ನಿಜ ಬಣ್ಣ ಬಯಲಾಗಿದೆ. ಸೋನು ನಿಗಂ ಇಲ್ಲಿಯವರೆಗೂ 900ಕ್ಕು ಹೆಚ್ಚು ಹಾಡುಗಳನ್ನ ಹಾಡಿದ್ದಾರೆ. ಸೋನು ನಿಗಂ ಅತಿ ಹೆಚ್ಚು ಸಾಂಗ್ ಹಾಡಿರೋದು ಕನ್ನಡದಲ್ಲೇ. ಕನ್ನಡಿಗರು ಸೋನು ನಿಗಮ್​ರನ್ನ ಬೆಳೆಸಿ ಮೆರೆಸಿದ್ದಾರೆ. ಆದ್ರೆ ಕನ್ನಡದ ಬಗ್ಗೆ ವಿವಾದಿತ ಹೇಳಿಕೆ ಕೊಟ್ಟು ಕನ್ನಡದ ವಿರೋಧಿ ಆಗಿದ್ದ ಸೋನು ನಿಗಂರ ಮತ್ತೊಂದು ನಿಜ ಬಣ್ಣ ಈಗ ಬಯಲಾಗಿದೆ. ಅದನ್ನ ಬಯಲು ಮಾಡಿರೋದು ಸ್ಟಾರ್ ಡೈರೆಕ್ಟರ್​​ ಜೋಗಿ ಪ್ರೇಮ್. ಮೈ ತುಂಬಾ ಅಹಂಕಾರವನ್ನೇ ತುಂಬಿಕೊಂಡಿರೋ ಸೋನು ನಿಗಂಗೆ ನಿರ್ದೇಶಕ ಜೋಗಿ ಪ್ರೇಮ್ ಮೈ ಚಳಿ ಬಿಡಿಸಿದ್ರಂತೆ. ನಿರ್ದೇಶಕ ಜೋಗಿ ಪ್ರೇಮ್​ ಸಿನಿಮಾಗಳ ಹಾಡನ್ನ ಸೋನು ನಿಗಂ ಹಾಡಿದ್ದಾರೆ.

ಏಕ್​ ಲವ್ ಯಾ ಸಿನಿಮಾಕ್ಕಾಗಿ ಸೋನು ನಿಗಮ್ ಒಂದು ಹಾಡು ಹಾಡಿದ್ದಾರೆ. ಅದರ ರೆಕಾರ್ಡಿಂಗ್ಗೆ ಹೋದಾಗ ಏನಾಗಿತ್ತು ಎಂದು ಪ್ರೇಮ್ ಹೇಳಿದ್ದಾರೆ. “ಪ್ರೇಮ್ ಹಾಗು ಅರ್ಜುನ್ ಜನ್ಯಾ ಮುಂಬೈಗೆ ಹೋಗಿ ಸೋನು ಸಿಗಮ್ ಅವರಿಂದ ಹಾಡು ಹಾಡಿಸಬೇಕಿತ್ತು. ಸಂಜೆ 6 ಗಂಟೆಗೆ ಬರೋಕೆ ಹೇಳಿದ್ರು. ಅವ್ರು ಇರಲಿಲ್ಲ. ಸ್ಟುಡಿಯೋದಲ್ಲಿ ಅವ್ರ ಆಪ್ತರು ಸಾಂಗ್ ಟ್ರ್ಯಾಕ್ ಕೇಳಿದ್ರು. ಸರ್ ಬರೋದು ಸ್ವಲ್ಪ ತಡವಾಗುತ್ತೆ 7 ಗಂಟೆ ಆಗಬಹುದು ಅಂದ್ರು. ಬಳಿಕ ಸೋನು ನಿಗಂಗಾಗಿ ಕಾದಿದ್ದ ಪ್ರೇಮ್​​ ಹಾಗು ಅರ್ಜುನ್​ ಜನ್ಯಾಗೆ ಆ ದಿನ ಸಾಂಗ್ ಹಾಡೋಕೆ ನಿರಾಕರಿಸಿದ್ರಂತೆ ಸೋನು ನಿಗಂ. ಇದಕ್ಕೆ ಪ್ರೇಮ್ ಬಾಯಿಗೆ ಬಂದಂತೆ ಬೈದಿದ್ರಂತೆ. ಸೋನು ನಿಗಂ ಹಿಂದಿ ವಾಲ.. ಆದ್ರೆ ಕನ್ನಡದಲ್ಲೇ ಅತಿ ಹೆಚ್ಚು ಸಾಂಗ್ ಹಾಡಿದ್ದಾರೆ. ಹೀಗಾಗಿ ಅಂದು ಈ ಕಾಂಟ್ರವರ್ಸಿ ಸಿಂಗರ್ ದೌಲತ್ತಿಗೆ ಸಿಟ್ಟಾಗಿದ್ದ ಪ್ರೇಮ್ ಕನ್ನಡ, ಹಿಂದಿ, ಮಲಯಾಳಂ ಭಾಷೆಯಲ್ಲೆಲ್ಲಾ ಬೈದಿದ್ರಂತೆ.

ನನ್ನ ಹಾಡು, ನಮ್ಮ ಸಂಗೀತ ನಿರ್ದೇಶಕರಿಗೆ ಗೌರವ ಕೊಡುವುದನ್ನು ಕಲಿ ಎಂದಿದ್ರಂತೆ. ಅದಾದ ಬಳಿಕ ಸೋನು ನಿಗಂ ಕ್ಷಮೆ ಕೇಳಿದ್ದ ಸೋನು ನಿಗಮ್ ಖುದ್ದಾಗಿ ಫ್ಲೈಟ್ ಟಿಕೆಟ್ ಹಾಕ್ಕೊಂಡು ಬಂದು ಬೆಂಗಳೂರಿನ ಅರ್ಜುನ್ ಸ್ಟುಡಿಯೋದಲ್ಲಿ ಏಕ್ ಲವ್ ಯಾ ಸಿನಿಮಾದ ಹಾಡು ಹಾಡಿದ್ರು. ವಿವಾದಿತ ಸಿಂಗರ್ ಸೋನು ನಿಗಮ್​ ಪೆಹಲ್ಗಾಂ ದಾಳಿ ಬಗ್ಗೆ ಕನ್ನಡ ಬೆರೆಸಿದ್ದಕ್ಕೆ ಇಂದಿಗೂ ಸೋನು ನಿಗಂ ಮೇಲೆ ಕನ್ನಡಿಗರಿಗೆ ಬೇಸರ ಇದೆ. ಇದೀಗ ಬಾಲಿವುಡ್ ಗಾಯಕನ ಬೇಜವಾಬ್ದಾರಿ ನಡತೆ ಬಗ್ಗೆ ಪ್ರೇಮ್ ಬಾಯ್ ಬಿಟ್ಟಿದ್ದು, ತಕ್ಕ ಶಾಸ್ತಿಯನ್ನೂ ಮಾಡಿದ ಘಟನೆಯನ್ನ ಬಿಚ್ಚಿಟ್ಟಿದ್ದಾರೆ. ಇನ್ಮುಂದಾದ್ರು ನಮ್ಮ ಸ್ಯಾಂಡಲ್​ವುಡ್​​​ ಮಂದಿ ಕನ್ನಡದಲ್ಲಿ ಸೋನು ನಿಗಂಗಿಂತಲೂ ಅದ್ಭುತವಾಗಿ ಹಾಡೋ ಗಾಯಕರಿಗೆ ಅವಕಶ ಕೊಡಲಿ. 



Source link

Leave a Reply

Your email address will not be published. Required fields are marked *