
ತಾನು ಇನ್ನೂ ನಟಿಸುತ್ತಿದ್ದೇನೆ, ತಮಿಳು, ಮಲಯಾಳಂ, ಕನ್ನಡ, ಹಿಂದಿಯಂತಹ ಹಲವು ಭಾಷೆಗಳಲ್ಲಿ ನಟಿಸಿದ್ದೇನೆ ಎಂದು ನೆನಪಿಸಿಕೊಂಡರು. 1984ರಲ್ಲಿ ‘ಸಿತಾರಾ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದ ಭಾನುಪ್ರಿಯಾ, ನಂತರ ಹತ್ತು ವರ್ಷಗಳ ಕಾಲ ಬ್ಯುಸಿಯಾಗಿದ್ದೆ, ಆಮೇಲೆ ಆಯ್ದ ಸಿನಿಮಾಗಳನ್ನು ಮಾಡಲು ಆರಂಭಿಸಿದೆ ಎಂದರು.
ಹೀರೋಯಿನ್ ಆಗಿದ್ದಾಗಲೂ ಒಳ್ಳೆಯ ಪ್ರೊಡಕ್ಷನ್, ಕಥೆಯುಳ್ಳ ಚಿತ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದೆ, ಕಮರ್ಷಿಯಲ್ ಚಿತ್ರಗಳಲ್ಲೂ ನಟಿಸಿದ್ದೇನೆ ಎಂದು ವಿವರಿಸಿದರು.