Actress Who Married Thrice: ವೈಯಕ್ತಿಕ ಕಾರಣಗಳಿಂದಾಗಿ ಕೆಲವು ನಟಿಯರು ಒಂದಲ್ಲ, ಎರಡಲ್ಲ, ಮೂರು ಬಾರಿ ಮದುವೆಯಾಗಿದ್ದಾರೆ. ಇವರ ಸಿನಿಮಾ ಕರಿಯರ್ ಚೆನ್ನಾಗಿದ್ದರೂ ಕೂಡ, ವೈಯಕ್ತಿಕ ಜೀವನದಲ್ಲಿ ಏರಿಳಿತ, ಸೋಲು ಹೆಚ್ಚಿತ್ತು. ಹಾಗಾದರೆ ಯಾರು? ಯಾರು ಮೂರು ಮದುವೆಯಾದರು? ಇನ್ನಷ್ಟು ಮಾಹಿತಿ ಇಲ್ಲಿದೆ.

ತಮಿಳು ನಟ ವಿಜಯಕುಮಾರ್ ಅವರ ಪುತ್ರಿ ವನಿತಾ ಅವರು ಮೂರು ಬಾರಿ ಮದುವೆಯಾಗಿದ್ದು, ಇವರ ಸಿನಿಮಾ, ಕರಿಯರ್‌ಗಿಂತ ಜಾಸ್ತಿ ವೈಯಕ್ತಿಕ ವಿಷಯವೇ ಸೌಂಡ್ ಮಾಡಿದೆ. ಮೊದಲು ನಟ ಆಕಾಶ್ ಜೊತೆ ಮದುವೆಯಾಗಿ, ಒಂದು ಗಂಡು, ಒಂದು ಹೆಣ್ಣು ಮಗು ಜನಿಸಿದ್ದರು. ಐದು ವರ್ಷಗಳ ಕಾಲ ಸಂಸಾರ ಮಾಡಿ ಡಿವೋರ್ಸ್ ಪಡೆದರು, ಆಮೇಲೆ ಆನಂದ್ ಜಯರಾಜನ್ ಎನ್ನುವ ಉದ್ಯಮಿಯನ್ನು ಮದುವೆಯಾದರು. ಇವರಿಗೆ ಓರ್ವ ಮಗಳು ಇದ್ದಾರೆ. ಆಮೇಲೆ ಡಿವೋರ್ಸ್ ಪಡೆದು, ಉದ್ಯಮಿ ಪೀಟರ್ ಪೌಲ್ ಜೊತೆ ಮದುವೆಯಾದರು. ಇವರಿಂದಲೂ ದೂರ ಆದರು.

ಜೂಲಿ ಸಿನಿಮಾ ನಟಿ ಲಕ್ಷ್ಮೀ ಅವರು ಕೂಡ ಮೂರು ಬಾರಿ ಮದುವೆಯಾಗಿದ್ದಾರೆ. ಮೊದಲ ಬಾರಿಗೆ ಭಾಸ್ಕರ್ ಎನ್ನುವವರ ಜೊತೆ ಮದುವೆಯಾಗಿದ್ದರು. ಇವರಿಗೆ ಐಶ್ವರ್ಯ ಎಂಬ ಮಗಳು ಜನಿಸಿದ್ದರು. ಆಮೇಲೆ ಡಿವೋರ್ಸ್ ಪಡೆದು, ನಂತರ ನಟ ಮೋಹನ್ ಶರ್ಮಾ ಅವರನ್ನು ಮದುವೆಯಾದರು. ಇದಾದ ಬಳಿಕ ನಟ ಮತ್ತು ನಿರ್ದೇಶಕ ಶಿವಚಂದ್ರನ್ ಅವರ ಜೊತೆ ಮದುವೆಯಾದರು.

ನಟಿ ರಾಧಿಕಾ ಶರತ್‌ಕುಮಾರ್ ಅವರು ನಟ ಪ್ರತಾಪ್ ಪೋತನ್ ಜೊತೆ ಮದುವೆಯಾಗಿ ಡಿವೋರ್ಸ್ ಪಡೆದರು. ಆಮೇಲೆ ವಿದೇಶಿ ಮೂಲದ ರಿಚರ್ಡ್ ಹಾರ್ಡಿ ಜೊತೆ ಮದುವೆಯಾದರು. ಇವರಿಗೆ ಓರ್ವ ಮಗಳಿದ್ದಾಳೆ. ಆಮೇಲೆ ನಟ ಶರತ್‌ಕುಮಾರ್ ಅವರನ್ನು ಮದುವೆಯಾಗಿ ಚೆನ್ನಾಗಿದ್ದಾರೆ.

ಕನ್ನಡ, ತಮಿಳು ನಟಿ ಸರಿತಾ ಕೂಡ ಮೂರು ಮದುವೆಯಾಗಿದ್ದಾರೆ ಎನ್ನಲಾಗುವುದು. ಮೊದಲು ವೆಂಕಟ ಸುಬ್ಬಯ್ಯ ಜೊತೆ ಮದುವೆಯಾದರು. ವರ್ಷಗಳ ನಂತರ ಡಿವೋರ್ಸ್ ಪಡೆದು ಮಲಯಾಳಂ ನಟ ಮುಖೇಶ್ ಅವರನ್ನು ಮದುವೆಯಾದರು. ಇವರಿಗೆ ಎರಡು ಮಕ್ಕಳು ಜನಿಸಿದ್ದರು.

ವೆಂಕಟ ಸುಬ್ಬಯ್ಯ ಅವರನ್ನು ಮದುವೆಯಾಗೋ ಮುನ್ನ ಮೊದಲೇ ಮದುವೆಯಾಗಿದೆ ಎನ್ನಲಾಗಿದೆ.

Source link
Photos: ಒಂದಲ್ಲ, ಎರಡಲ್ಲ, ಮೂರು ಮದುವೆಯಾದ ದಕ್ಷಿಣ ಭಾರತದ ನಟಿಯರು!