ಭಾರತೀಯರು ಹೇಳುವುದಕ್ಕೆ ಕಷ್ಟಪಡುವ ಶಿವ ತಾಂಡವ ಸ್ತೋತ್ರವನ್ನು ನಿರರ್ಗಳವಾಗಿ ಹಾಡಿದ ದಕ್ಷಿಣ ಕೊರಿಯಾ ಪಾಪ್ ಗಾಯಕ

ಭಾರತೀಯರು ಹೇಳುವುದಕ್ಕೆ ಕಷ್ಟಪಡುವ ಶಿವ ತಾಂಡವ ಸ್ತೋತ್ರವನ್ನು ನಿರರ್ಗಳವಾಗಿ ಹಾಡಿದ ದಕ್ಷಿಣ ಕೊರಿಯಾ ಪಾಪ್ ಗಾಯಕ

ಭಾರತೀಯರು ಹೇಳುವುದಕ್ಕೆ ಕಷ್ಟಪಡುವ ಶಿವ ತಾಂಡವ ಸ್ತೋತ್ರವನ್ನು ನಿರರ್ಗಳವಾಗಿ ಹಾಡಿದ ದಕ್ಷಿಣ ಕೊರಿಯಾ ಪಾಪ್ ಗಾಯಕ

ಶಿವ ತಾಂಡವ ಸ್ತೋತ್ರದ ಬಗ್ಗೆ ಅನೇಕ ಭಾರತೀಯರಿಗೇ ಗೊತ್ತೇ ಇಲ್ಲ ಗೊತ್ತಿದ್ದರೂ, ಅದನ್ನು ಹೇಳುವುದಕ್ಕೂ ಬರುವುದಿಲ್ಲ, ಹೀಗಿರುವಾಗ ದಕ್ಷಿಣ ಕೊರಿಯಾದ ಪಾಪ್ ಗಾಯಕನೋರ್ವ ಕಷ್ಟಕರವಾಗಿರುವ ಈ ಶಿವ ತಾಂಡವ ಸ್ತೋತ್ರವನ್ನು ನಿರರ್ಗಳವಾಗಿ ಹೇಳುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಶಿವರಾತ್ರಿ ಕಳೆಯಿತು. ಈ ಶಿವರಾತ್ರಿಯನ್ನು ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಉಪವಾಸ, ವೃತ ಜಾಗರಣೆ ಭಜನೆ ಪೂಜೆ ಮಾಡುವ ಮೂಲಕ ಆಚರಿಸಲಾಯ್ತು. ಅದೇ ರೀತಿ ಕೊರಿಯನ್ ಮೂಲದ ಪಾಪ್‌ ಗಾಯಕ ಔರಾ ಚೆನ್ನೈನಲ್ಲಿ ಶಿವ ದೇವಸ್ಥಾನಕ್ಕೆ ಭೇಟಿ ನೀಡಿ ಶಿವ ತಾಂಡವ ಸ್ತೋತ್ರವನ್ನು ಪಠಿಸುವ ಮೂಲಕ ಮಹಾಶಿವರಾತ್ರಿಯನ್ನು ಆಚರಿಸಿದರು.

ಭಾರತೀಯ ಅದರಲ್ಲೂ ದಕ್ಷಿಣ ಭಾರತ ಶೈಲಿಯ ಉಡುಗೆ ತೊಟ್ಟು ಅವರು ಚೆನ್ನೈನ ಶಿವ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಅಲ್ಲಿದ್ದ ಭಕ್ತರ ಮಧ್ಯೆ ಕುಳಿತು ಶಿವ ತಾಂಡವವನ್ನು ಪಠಿಸಿದರು. ಈ ಅಪರೂಪದ ಘಟನೆಯ ವೀಡಿಯೋ ವೈರಲ್ ಆಗಿದ್ದು, ಅವರು ಇದೊಂದು ಅಪರೂಪದ ಅನುಭವ ಎಂದು ಹೇಳಿದ್ದಾರೆ. ಔರಾ ಅವರ ಮೂಲ ಹೆಸರು ಪಾರ್ಕ್ ಮಿನ್-ಜುನ್ ಆಗಿದ್ದು, ಅವರು ನಗರದ ಶಿವ ದೇಗುಲಕ್ಕೆ ಭೇಟಿ ನೀಡಿ ಭಾವಪರವಶರಾಗಿ ಹಾಡಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಅವರ ಭೇಟಿಯ ಸಮಯದಲ್ಲಿ ಅವರು ಯಾವುದೇ ಉಚ್ಛಾರ ದೋಷವಿಲ್ಲದೇ ಹಾಡಿದ ಶಿವ ತಾಂಡವ ಸ್ತೋತ್ರ ಪಠಣ ಎಲ್ಲರ ಗಮನ ಸೆಳೆಯಿತು. ಸಂಕೀರ್ಣವಾದ ಸಂಸ್ಕೃತ ಶ್ಲೋಕಗಳೊಂದಿಗೆ, ಲಯ ಮತ್ತು ಉಚ್ಚಾರಣೆಗೆ ಹೆಸರುವಾಸಿಯಾದ ಈ ಸ್ತೋತ್ರವು ಮಾತೃಭಾಷಿಕರಿಗೂ ಸಹ ಪಠಿಸುವುದಕ್ಕೆ ಕಷ್ಟ. ಆದರೂ, ಔರಾ ಅದರ ಸಾಹಿತ್ಯವನ್ನು ಫೋನ್ ಅನ್ನು ನೋಡದೆ ಅಥವಾ ಪುಸ್ತಕದಲ್ಲೂ ಓದದೇ ನಿರರ್ಗಳವಾಗಿ ಭಾವಪರವಶರಾಗಿ ಹಾಡಿದರು.

ಇದನ್ನೂ ಓದಿ: ಬದುಕಿದ್ದು ಕೆಲವೇ ವರ್ಷ ನಟಿಸಿದ್ದ 3 ಸಿನಿಮಾವೂ ಸೂಪರ್ ಹಿಟ್: 25ಕ್ಕೆ ಬದುಕು ಅಂತ್ಯಗೊಳಿಸಿದ ಜಿಯಾ ಖಾನ್

ಮತ್ತೊಂದು ವೀಡಿಯೊದಲ್ಲಿ ಅವರು ಈ ಸ್ಪೋತ್ರದ ಸಾಹಿತ್ಯಕ್ಕಾಗಿ ತಮ್ಮ ಫೋನ್ ಅನ್ನು ಅವಲಂಬಿಸಿದ್ದ ಭಕ್ತರೊಂದಿಗೆ ಈ ಸ್ತೋತ್ರವನ್ನು ಹಾಡಿದರು. ಶ್ಲೋಕಗಳ ಮೇಲಿನ ಅವರ ಸ್ಪಷ್ಟತೆ ಮತ್ತು ಹಿಡಿತವು ಅನೇಕರನ್ನು ಪ್ರಭಾವಿತಗೊಳಿಸಿತು, ಅನೇಕ ವೀಕ್ಷಕರು ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳುವ ಅವರ ಸಮರ್ಪಣೆಯನ್ನು ಶ್ಲಾಘಿಸಿದರು.

ಈ ಅನುಭವವನ್ನು ನೆನಪಿಸಿಕೊಳ್ಳುತ್ತಾ, ಔರಾ ದೇವಾಲಯ ಭೇಟಿಯನ್ನು ಮರೆಯಲಾಗದ ಆಶೀರ್ವಾದ ಎಂದು ಬಣ್ಣಿಸಿದ್ದಾರೆ. ವಿಶೇಷವಾಗಿ ಭಾರತದಲ್ಲಿ ಹುಟ್ಟಿಲ್ಲದಿದ್ದರೂ ಅದರ ಸಂಸ್ಕೃತಿಯನ್ನು ಪ್ರೀತಿಸುವ ಮತ್ತು ಗೌರವಿಸುವಷ್ಟು ಬೆಳೆದ ವ್ಯಕ್ತಿಯಾಗಿ ಭಕ್ತರ ಸಮ್ಮುಖದಲ್ಲಿ ಜಪ ಮಾಡುವುದು ಆಳವಾದ ಭಾವನಾತ್ಮಕ ಅನುಭವ ನೀಡಿತು ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ ತುಂಬಿಸುವಾಗ ಸಿಗರೇಟ್ ಎಳಿಬೇಡ ಎಂದಿದ್ದಕ್ಕೆ ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚಿದ ಹುಚ್ಚ..!

ಸಾಂಪ್ರದಾಯಿಕ ಬಿಳಿ ಮುಂಡು ಪೀಚ್ ಬಣ್ಣದ ಶರ್ಟ್‌ ಧರಿಸಿದ್ದಅವರು ಅಲ್ಲಿದ್ದ ಇತರ ಶಿವಭಕ್ತರ ನಡುವೆ ಬೆರೆತು ಹೋದರು. ಉತ್ಸವಕ್ಕೆ ಕೆಲವೇ ದಿನಗಳ ಮೊದಲು, ಔರಾ ಅವರು ಶಿವ ಶಿವಂ ಎಂಬ ಶೀರ್ಷಿಕೆಯ ಸಂಗೀತ ವೀಡಿಯೊವನ್ನು ಬಿಡುಗಡೆ ಮಾಡಿದರು , ಇದು ಭಾರತೀಯ ಸಂಸ್ಕೃತಿಯ ಬಗ್ಗೆ ಅವರ ಆಧ್ಯಾತ್ಮಿಕ ಒಲವು ಮತ್ತು ಮೆಚ್ಚುಗೆಯನ್ನು ತೋರಿಸಿದೆ. ಈ ಯೋಜನೆಯು ಭಾರತೀಯ ಪ್ರೇಕ್ಷಕರೊಂದಿಗೆ ಸಂಗೀತ ಮತ್ತು ಸಾಂಸ್ಕೃತಿಕವಾಗಿ ಸಂಪರ್ಕ ಸಾಧಿಸಲು ಅವರ ನಿರಂತರ ಪ್ರಯತ್ನವಾಗಿದೆ.
View this post on Instagram
A post shared by AOORA (아우라) (@aoora69)

ಭಾರತದೊಂದಿಗಿನ ಔರಾ ಈ ಹಿಂದಿನಿಂದಲೂ ಸಂಪರ್ಕದಲ್ಲಿದ್ದಾರೆ. ಇದೇನು ಅವರ ಮೊದಲ ಭಾರತ ಭೇಟಿ ಅಲ್ಲ ಅವರು ಈ ಹಿಂದೆ ಬಿಗ್ ಬಾಸ್ 17 ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ಗಮನಾರ್ಹ ಜನಪ್ರಿಯತೆಯನ್ನು ಗಳಿಸಿದರು. ಅಂದಿನಿಂದ, ಅವರು ಆಗಾಗ ಭಾರತ ದೇಶ, ಅದರ ಸಂಪ್ರದಾಯಗಳು ಮತ್ತು ಅದರ ಜನರ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ.
View this post on Instagram
A post shared by AOORA (아우라) (@aoora69)

Source link

Leave a Reply

Your email address will not be published. Required fields are marked *