ಪ್ರಯಾಣಿಕರೇ ಗಮನಿಸಿ: ಕ್ರಿಸ್ಮಸ್​​, ಹೊಸ ವರ್ಷದ ಹಿನ್ನೆಲೆ ಈ ಮಾರ್ಗಗಳಲ್ಲಿ ವಿಶೇಷ ರೈಲು

ಪ್ರಯಾಣಿಕರೇ ಗಮನಿಸಿ: ಕ್ರಿಸ್ಮಸ್​​, ಹೊಸ ವರ್ಷದ ಹಿನ್ನೆಲೆ ಈ ಮಾರ್ಗಗಳಲ್ಲಿ ವಿಶೇಷ ರೈಲು


ಬೆಂಗಳೂರು, ಡಿಸೆಂಬರ್ 14: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಡಿಸೆಂಬರ್ 24 ರಂದು ಹುಬ್ಬಳ್ಳಿ ಮತ್ತು ವಿಜಯಪುರವನ್ನು ಸಂಪರ್ಕಿಸುವ ವಿಶೇಷ ರೈಲು ಸಂಚಾರ ನಡೆಸಲಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೇ ಇದೆ. ರೈಲು ಸಂಖ್ಯೆ 07379 ಮಧ್ಯಾಹ್ನ 12ಕ್ಕೆ ಹುಬ್ಬಳ್ಳಿಯಿಂದ ಹೊರಟು ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ಮೂಲಕ ರಾತ್ರಿ 8.30ಕ್ಕೆ ಯಶವಂತಪುರ ತಲುಪಲಿದೆ. ರೈಲು ಸಂಖ್ಯೆ 06277 ರಾತ್ರಿ 9.50ಕ್ಕೆ ಯಶವಂತಪುರದಿಂದ ಹೊರಟು ತುಮಕೂರು, ಅರಸೀಕೆರೆ, ದಾವಣಗೆರೆ, ಹರಿಹರ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ಮೂಲಕ ಬೆಳಿಗ್ಗೆ 9ಕ್ಕೆ ವಿಜಯಪುರ ತಲುಪಲಿದೆ.

ರೈಲುಗಳ ಸಂಚಾರದಲ್ಲಿ ವ್ಯತ್ಯಯ

ತುಮಕೂರು ಮತ್ತು ಮಲ್ಲಸಂದ್ರ ನಡುವೆ ಅಗತ್ಯ ಎಂಜಿನಿಯರಿಂಗ್ ಕಾಮಗಾರಿಗಳು ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೇ ಇದೆ.

ಇದನ್ನೂ ಓದಿ: ಅಂತರಾಜ್ಯ ಪ್ರಯಾಣಿಕರಿಗೆ ಗುಡ್ ನ್ಯೂಸ್; 8 ವಿಶೇಷ ರೈಲುಗಳ ಘೋಷಣೆ

  • ರೈಲು ಸಂಖ್ಯೆ 66567 ಕೆಎಸ್‌ಆರ್ ಬೆಂಗಳೂರು–ತುಮಕೂರು ಮೆಮು ಡಿಸೆಂಬರ್ 17, 20, 21 ಮತ್ತು 24ರಂದು ತುಮಕೂರು ಬದಲು ದೊಡಬೆಲೆಯಲ್ಲಿ ಅಂತ್ಯಗೊಳ್ಳಲಿದೆ.
  • ರೈಲು ಸಂಖ್ಯೆ 66572 ತುಮಕೂರು–ಕೆಎಸ್‌ಆರ್ ಬೆಂಗಳೂರು MEMU ಡಿಸೆಂಬರ್ 17, 20 ಮತ್ತು 24 ರಂದು ತುಮಕೂರು ಬದಲು ದೊಡಬೆಲೆಯಿಂದ ಪ್ರಾರಂಭವಾಗಲಿದೆ.
  • ರೈಲು ಸಂಖ್ಯೆ 20652 ತಾಳಗುಪ್ಪ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಡಿಸೆಂಬರ್ 17, 21 ಮತ್ತು 24 ರಂದು ಕೆಎಸ್‌ಆರ್ ಬೆಂಗಳೂರು ಬದಲಿಗೆ ಅರಸೀಕೆರೆಯಲ್ಲಿ ಅಂತ್ಯಗೊಳ್ಳಲಿದೆ.
  • ರೈಲು ಸಂಖ್ಯೆ 12725 ಕೆಎಸ್‌ಆರ್ ಬೆಂಗಳೂರು–ಧಾರವಾಡ ಎಕ್ಸ್‌ಪ್ರೆಸ್ ಡಿಸೆಂಬರ್ 17, 20, 21 ಮತ್ತು 24ರಂದು ಕೆಎಸ್‌ಆರ್ ಬೆಂಗಳೂರು ಬದಲಿಗೆ ಅರಸೀಕೆರೆಯಿಂದ ಆರಂಭವಾಗಲಿದೆ.
  • ರೈಲು ಸಂಖ್ಯೆ 12726 ಧಾರವಾಡ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಡಿಸೆಂಬರ್ 17 ಮತ್ತು 24 ರಂದು ಕೆಎಸ್‌ಆರ್ ಬೆಂಗಳೂರು ಬದಲು ಅರಸೀಕೆರೆಯಲ್ಲಿ ಅಂತ್ಯಗೊಳ್ಳಲಿದೆ.
  • ರೈಲು ಸಂಖ್ಯೆ 66571 ಕೆಎಸ್‌ಆರ್ ಬೆಂಗಳೂರು–ತುಮಕೂರು MEMU ಡಿಸೆಂಬರ್ 17 ಮತ್ತು 24 ರಂದು ತುಮಕೂರು ಬದಲು ದೊಡಬೆಲೆಯಲ್ಲಿ ಅಂತ್ಯಗೊಳ್ಳಲಿದೆ.
  • ರೈಲು ಸಂಖ್ಯೆ 66568 ತುಮಕೂರು–ಕೆಎಸ್‌ಆರ್ ಬೆಂಗಳೂರು MEMU ಡಿಸೆಂಬರ್ 17 ಮತ್ತು 24 ರಂದು ತುಮಕೂರು ಬದಲಿಗೆ ದೊಡಬೆಲೆಯಿಂದ ಪ್ರಾರಂಭವಾಗಲಿದೆ.
  • ರೈಲು ಸಂಖ್ಯೆ 56281 ಚಾಮರಾಜನಗರ–ತುಮಕೂರು ಪ್ಯಾಸೆಂಜರ್ ಡಿಸೆಂಬರ್ 17 ಮತ್ತು 24 ರಂದು ತುಮಕೂರು ಬದಲು ಚಿಕ್ಕಬಾಣಾವರದಲ್ಲಿ ಅಂತ್ಯಗೊಳ್ಳಲಿದೆ.

ಕೆಲ ರೈಲುಗಳ ಸಂಚಾರ ರದ್ದು

ರೈಲು ಸಂಖ್ಯೆ 16239 ಚಿಕ್ಕಮಗಳೂರು–ಯಶವಂತಪುರ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16240 ಯಶವಂತಪುರ–ಚಿಕ್ಕಮಗಳೂರು ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 12614 ಕೆಎಸ್‌ಆರ್ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ರೈಲು ಸಂಚಾರ ಡಿಸೆಂಬರ್ 17 ಮತ್ತು 24 ರಂದು ರಾತ್ರಿ ವೇಳೆಗೆ ಪ್ರಕಟಣೆ ನೀಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *