ಜುಲೈ, ಅಕ್ಟೋಬರ್ 30: ಭಾರತೀಯ ರಿಸರ್ವ್ ಬ್ಯಾಂಕ್ 2017 ರಲ್ಲಿ ವಿತರಿಸಿದ ಸಾವರೀನ್ ಗೋಲ್ಡ್ ಬಾಂಡ್‌ಗಳು (SGB- ಸಾರ್ವಭೌಮ ಗೋಲ್ಡ್ ಬಾಂಡ್) ಅಂತಿಮ ರಿಡಮ್ಷನ್ ಅನ್ನು ಪ್ರಕಟಿಸಲಾಗಿದೆ. 2017-18ರ ಸೀರೀಸ್-5 ಬ್ಯಾಂಡ್‌ಗಳನ್ನು 2017 ಅಕ್ಟೋಬರ್ 30 ರಂದು ವಿತರಿಸಲಾಯಿತು. ಅಂದು ಪ್ರತೀ ಗ್ರಾಮಕ್ಕೆ 2,971 ರೂನಂತೆ ಹೂಡಿಕೆಗೆ ಅವಕಾಶ ಸಿಕ್ಕಿದೆ. ಇದೀಗ ರಿಡೆಮ್ಷನ್ ದರವಾಗಿ (ರಿಡೆಂಪ್ಶನ್ ಬೆಲೆ) ಒಂದು ಗ್ರಾಮಕ್ಕೆ 11,992 ರೂ ನಿಗದಿಪಡಿಸಲಾಗಿದೆ. ಈ ವರ್ಷದ ಈ ಬಾಂಡ್‌ಗಳು ಶೇ. 310ರಷ್ಟು ಲಾಭ ತಂದಿವೆ.
ಇತ್ತೀಚೆಗೆ ಮೆಚ್ಯೂರ್ ಆದ ಬೇರೆ ಬೇರೆ ಸರಣಿಯ ಸಾವರೀನ್ ಗೋಲ್ಡ್ ಬಾಂಡ್ ಕೂಡ ಎಂಟು ವರ್ಷದ ಶೇ. 300 ಅಧಿಕ ಲಾಭ ತಂದಿವೆ. ಇವತ್ತು ರಿಡೆಂಪ್ಷನ್‌ಗೆ ಬಂದಿರುವ ಎಸ್‌ಜಿಬಿ ಬಾಂಡ್‌ಗಳು ಶೇ. 310.54ರಷ್ಟು ರಿಟರ್ನ್ ತಂದಿವೆ. ಇದು ಎಂಟು ವರ್ಷದ ತಂದಿರುವ ಲಾಭ. ವಾರ್ಷಿಕವಾಗಿ ಶೇ. 19ರ ದರದಲ್ಲಿ ಹೂಡಿಕೆದಾರರು ಲಾಭ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಚಿನ್ನ, ಬೆಳ್ಳಿಗೆ ಸಾಲ; ಎಲ್ ಟಿವಿ ಇತ್ಯಾದಿ ಆರ್ ಬಿಐನ ಹೊಸ ಮಾರ್ಗಸೂಚಿ ಗಮನಿಸಿ…
ಏನಿದು ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್?
ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಜನರು ಚಿನ್ನದ ಬೆಲೆಯ ಮೇಲೆ ಹೂಡಿಕೆ ಮಾಡುವ ಅವಕಾಶ ಸಿಗುತ್ತದೆ. ಗ್ರಾಮಗಳ ಬೆಲೆ ಲೆಕ್ಕದಲ್ಲಿ ಜನರು ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ ಒಂದು ಗ್ರಾಮದಿಂದ ಹಿಡಿದು 4 ಕಿಲೋವರೆಗೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಇಲ್ಲಿ ಭೌತಿಕ ಚಿನ್ನ ಲಭ್ಯವಿಲ್ಲ. ಚಿನ್ನದ ಮಾರುಕಟ್ಟೆ ಬೆಲೆಗೆ ಹೂಡಿಕೆ ಮೌಲ್ಯ ಹೆಚ್ಚಾಗುತ್ತದೆ.
ಎಂಟು ವರ್ಷಕ್ಕೆ ಈ ಬಾಂಡ್‌ಗಳು ಮೆಚ್ಯೂರ್ ಆಗುತ್ತವೆ. ಹಿಂದಿನ ಮೂರು ದಿನಗಳಲ್ಲಿ ಚಿನ್ನದ ಸರಾಸರಿ ಬೆಲೆಯನ್ನು ತೆಗೆದುಕೊಳ್ಳಲಾಗಿದೆ. 2017-18ರ ಸರಣಿಯ ಗೋಲ್ಡ್ ಬಾಂಡ್‌ನಲ್ಲಿ ಆರಂಭಿಕ ಬೆಲೆ ಗ್ರಾಮಕ್ಕೆ 2,921 ರೂ ಇತ್ತು. ಈಗ ರಿಡೆಂಪ್ಷನ್ ದರ 11,992 ರೂ ಇದೆ. 100 ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ, 2,92,100 ರೂ. ಇವತ್ತು ಆ ಹೂಡಿಕೆಯು 11,99,200 ರೂ ಆಗಿರುತ್ತದೆ. ಅಂದರೆ 3 ಲಕ್ಷ ರೂಗಿಂತ ಹೂಡಿಕೆಯು 12 ಲಕ್ಷ ರೂ ಹೆಚ್ಚಾಗಿರುತ್ತಿತ್ತು.
ಇದನ್ನೂ ಓದಿ: ದಾಖಲೆ ಇಲ್ಲದೆ ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಿರಲು ಅವಕಾಶ? ಆಭರಣ ಖರೀದಿಸುವ ಮುನ್ನ ಇದು ತಿಳಿದಿರುತ್ತದೆ…
ಇದರ ಜೊತೆಗೆ ಹೂಡಿಕೆಯ ಮೊತ್ತದ ಮೇಲೆ ಆರ್ ಬಿಐ ಶೇ. 2.5ರಷ್ಟು ವಾರ್ಷಿಕ ಬಡ್ಡಿ ನೀಡಲಾಗುತ್ತದೆ. ಒಂದು ಲಕ್ಷ ರೂ ಹೂಡಿಕೆಗೆ ವರ್ಷಕ್ಕೆ 2,500 ರೂ ಬಡ್ಡಿ ಸಿಗುತ್ತದೆ. ಹೂಡಿಕೆದಾರರ ಬ್ಯಾಂಕ್ ಖಾತೆಗೆ ಈ ಬಡ್ಡಿ ಹಣ ವರ್ಷಗಳು ಜಮೆಯಾಗುತ್ತಿರುತ್ತದೆ.
ಸದ್ಯಕ್ಕೆ ಸರ್ಕಾರವು ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಅನ್ನು ಮುಂದುವರಿಸುತ್ತಿಲ್ಲ. ಸರ್ಕಾರಕ್ಕೆ ಹೊರೆಯಾಗುತ್ತಿರಬಹುದು. ಪರ್ಯಾಯವಾಗಿ ಡಿಜಿಟಲ್ ಗೋಲ್ಡ್, ಐಟಿಎಫ್ ಗೋಲ್ಡ್, ಮ್ಯೂಚುವಲ್ ಫಂಡ್ ಗೋಲ್ಡ್ ಯೋಜನೆಗಳು ಚಾಲನೆಯಲ್ಲಿ ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಕೆಯ ಲಾಭವನ್ನು ಪಡೆಯಲು ಹಲವು ಮಾರ್ಗೋಪಾಯಗಳಿವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ