
ನವದೆಹಲಿ, ಮಾರ್ಚ್ 25: ಅಂತರರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾದ ಎಸ್ ಅಂಡ್ ಪಿ ಗ್ಲೋಬಲ್ ಸಂಸ್ಥೆ (ಎಸ್&ಪಿ ಗ್ಲೋಬಲ್) ಭಾರತದ ಆರ್ಥಿಕ ಬೆಳವಣಿಗೆಯ ಹಾದಿಯ ಬಗ್ಗೆ ಸಕಾರಾತ್ಮಕವಾಗಿದೆ. 2026-27ರ ಹಣಕಾಸು ವರ್ಷದ ಜಿಡಿಪಿ ಶೇ. 7.1ರಷ್ಟು ಬೆಳೆಯಬಹುದು ಎಂದು ಈ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಅಂದಾಜು ಮಾಡಿದೆ. ಕಳೆದ ಬಾರಿ ಬಿಡುಗಡೆ ಮಾಡಿದ ವರದಿಯಲ್ಲಿ ಅದು ಭಾರತದ ಜಿಡಿಪಿ (ಭಾರತೀಯ ಆರ್ಥಿಕತೆ) ಶೇ. 6.7ರಷ್ಟು ಹೆಚ್ಚಬಹುದು ಎಂದು ಹೇಳಿತ್ತು. ಈಗ ತನ್ನ ಅಭಿಪ್ರಾಯ ಬದಲಿಸಿರುವ ಅದು ಬೆಳವಣಿಗೆಯ ಅಂದಾಜನ್ನು 40 ಮೂಲಾಂಕಗಳನ್ನು ಹೆಚ್ಚಿಸಿದೆ.
ಇರಾನ್‌ನಿಂದ ಜಾಗತಿಕ ಅನಿಶ್ಚಿತತೆ ಇನ್ನಷ್ಟು ಬಿಗಡಾಯಿಸಿರುವುದು, ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ, ಇವೇ ಮುಂತಾದ ನಕಾರಾತ್ಮಕ ವಾತಾವರಣದ ನಡುವೆಯೂ ಭಾರತದ ಆರ್ಥಿಕತೆಯ ಬೆಳವಣಿಗೆಯ ಬಗ್ಗೆ ಎಸ್ ಮತ್ತು ಪಿಯು ಹೆಚ್ಚು ನಿರೀಕ್ಷೆ ಇಟ್ಟಿರುವುದು ಗಮನಾರ್ಹ ಸಂಗತಿ. ದೇಶದೊಳಗೆ ಖಾಸಗಿ ಅನುಭೋಗವು ಆರ್ಥಿಕತೆಯ ಬೆಳವಣಿಗೆಗೆ ಪುಷ್ಟಿ ಕೊಡಬಹುದು ಈ ಏಜೆನ್ಸಿಯ ಅನಿಸಿಕೆ.
ಇದನ್ನೂ ಓದಿ: ಭಾರತದಲ್ಲಿ ಪಿಎನ್ಜಿ ಇನ್ ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ನಾಂದಿ ಹಾಡುತ್ತಿದೆ ಎಲ್ಪಿಜಿ ಬಿಕ್ಕಟ್ಟು
‘2027ರ ಮಾರ್ಚ್‌ಗೆ ಅಂತ್ಯವಾಗುವ ಹಣಕಾಸು ವರ್ಷದ ನೈಜ ಜಿಡಿಪಿ ಶೇ. 7.1ರಷ್ಟು ಹೆಚ್ಚಬಹುದು ಎಂಬುದು ನಮ್ಮ ಅಂದಾಜು. 2025-26ರಲ್ಲಿ ಜಿಡಿಪಿಯ ಶೇ. 7.6ರ ಬೆಳವಣಿಗೆಗಿಂತ 2026-27ರಲ್ಲಿ ಬೆಳವಣಿಗೆ ಮಂದಗೊಳ್ಳಬಹುದು. ಆ ವರ್ಷ ಬೆಳವಣಿಗೆಗೆ ಪುಷ್ಟಿ ಕೊಡುವ ಸಂಗತಿಗಳೆಂದರೆ ಉತ್ತಮ ಖಾಸಗಿ ಅನುಭೋಗ, ಖಾಸಗಿ ಹೂಡಿಕೆ ಮತ್ತು ಉತ್ತಮ ರಫ್ತು’ ಎಂದು ಎಸ್ ಅಂಡ್ ಪಿ ಗ್ಲೋಬಲ್ ಸಂಸ್ಥೆಯ ಇತ್ತೀಚಿನ ಏಷ್ಯಾ ಪೆಸಿಫಿಕ್ ವಿಶ್ಲೇಷಣೆ ಆರ್ಥಿಕ ಆರ್ಥಿಕ ವರದಿಯಲ್ಲಿದೆ.
ಜಾಗತಿಕ ಸಂಘರ್ಷಗಳ ಪರಿಣಾಮವಿಲ್ಲ…
ಜಾಗತಿಕ ಸಂಘರ್ಷಗಳು ಮತ್ತು ಅಸ್ಥಿರತೆಯ ಅಂಶಗಳು ಭಾರತದಲ್ಲಿ ಬೆಲೆ ಏರಿಕೆಗೆ ಕಾರಣವಾಗಬಹುದು. ಹೂಡಿಕೆಗಳು ಸಂಕುಚಿತಗೊಳ್ಳುವಂತೆ ಮಾಡಬಹುದು ಎಂದು ಎಸ್ ಮತ್ತು ಪಿ ಗ್ಲೋಬಲ್ ಏಜೆನ್ಸಿಯ ವರದಿಯಲ್ಲಿ ಪ್ರಕಟಿಸಲಾಗಿದೆ.
ಇದನ್ನೂ ಓದಿ: ಪೆಟ್ರೋಲ್, ಡೀಸಲ್ ಕೊರತೆ ಇಲ್ಲ, ಗಾಬರಿ ಬೇಡ: ಪೆಟ್ರೋಲಿಯಂ ಕಂಪನಿಗಳಿಂದ ಸ್ಪಷ್ಟನೆ
ಭಾರತದ ಜಿಡಿಪಿ ವೃದ್ಧಿ ಬಗ್ಗೆ ಎಸ್ ಅಂಡ್ ಪಿ ಗ್ಲೋಬಲ್ ಅಂದಾಜು
- 2025-26ಕ್ಕೆ ಶೇ. 7.6 ಜಿಡಿಪಿ ಒಟ್ಟು
- 2026-27ಕ್ಕೆ ಶೇ. 7.1 ಜಿಡಿಪಿ ಒಟ್ಟು
- 2027-28ಕ್ಕೆ ಶೇ. 7.2 ಜಿಡಿಪಿ ಒಟ್ಟು
- 2028-29ಕ್ಕೆ ಶೇ. 7.0 ಜಿಡಿಪಿ ಒಟ್ಟು
‘ಅಧಿಕ ಇಂಧನ ಬೆಲೆಗಳಿಂದ ಆರ್ಥಿಕತೆಗಳ ಖರೀದಿ ಶಕ್ತಿ ಕುಂಠಿತವಾಗುತ್ತದೆ. ಆಂತರಿಕ ಬೇಡಿಕೆ ತಗ್ಗುತ್ತದೆ. ಭಾರತ, ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್ ಇತ್ಯಾದಿಗಳಲ್ಲಿ ಅಧಿಕ ತೈಲ ಬೆಲೆಗಳಿಂದ ಸರ್ಕಾರಗಳು ಸಬ್ಸಿಡಿಗಳಿಗೆ ಹೆಚ್ಚು ವ್ಯಯಿಸಬಹುದಾಗಿದೆ. ಈ ಹಣಕಾಸು ಸ್ಥಿತಿ ದುರ್ಬಲಗೊಳ್ಳಬಹುದು ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿಯ ವರದಿಯು ಅಭಿಪ್ರಾಯಪಟ್ಟಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ