Video: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪೆಟ್ರೋಲ್ ಬಂಕ್​​ನ ಲೈಟಿಂಗ್ ಕಂಬ, ಸಮಾಜವಾದಿ ಪಕ್ಷದ ನಾಯಕ ಸಾವು

Video: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪೆಟ್ರೋಲ್ ಬಂಕ್​​ನ ಲೈಟಿಂಗ್ ಕಂಬ, ಸಮಾಜವಾದಿ ಪಕ್ಷದ ನಾಯಕ ಸಾವು


ಪ್ರತಾಪಗಢ, ಫೆಬ್ರವರಿ 16: ಚಲಿಸುತ್ತಿದ್ದ ಕಾರಿನ ಮೇಲೆ ಬಂಕ್ ಪೆಟ್ರೋಲ್ ಲೈಟಿಂಗ್ ಕಂಬ ಕುಸಿದ ಪರಿಣಾಮ ಸಮಾಜವಾದಿ ಪಕ್ಷದ ನಾಯಕ ಲಾಲ್ ಬಹದ್ದೂರ್ ಯಾದವ್ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದಿದೆ. ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೈಯಕ್ತಿಕ ಕೆಲಸಕ್ಕಾಗಿ ಕ್ರೆಟಾ ಕಾರಿನಲ್ಲಿ ಬಾಬುಗಂಜ್ ಪ್ರತಾಪ ನಗರಕ್ಕೆ ಪ್ರಯಾಣಿಸುತ್ತಿದ್ದಾಗ, ಅವರ ಮನೆಗೆ ಕೇವಲ 500 ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಪೆಟ್ರೋಲ್ ಪಂಪ್ ಮುಂದೆ ಕ್ರೇನ್ ಸಹಾಯದಿಂದ ಭಾರತ್ ಪೆಟ್ರೋಲಿಯಂನ ಸುಮಾರು 65 ಅಡಿ ಎತ್ತರದ ಮಾಸ್ಟ್ ಕಂಬವನ್ನು ನಿರ್ಮಿಸಲಾಗಿದೆ. ಕಂಬ ಸುಮಾರು 40 ಕ್ವಿಂಟಾಲ್ ತೂಕವಿತ್ತು ಎಂದು ವರದಿಯಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *