‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (ಬಿಬಿಕೆ 12) ಸ್ಪಂದನಾ ಹಾಗೂ ಗಿಲ್ಲಿ ನಟ ಫ್ರೆಂಡ್‌ಶಿಪ್ ಗಮನ ಸೆಳೆದಿದೆ. ‘ಕಳ್ಳ ಪುಟ್ಟಿ’ ಎಂದು ಸ್ಪಂದನಾ ಅವರನ್ನು ಗಿಲ್ಲಿ ಪ್ರೀತಿಯಿಂದ ಕರೆಯುತ್ತಿದ್ದಾರೆ. ಗಿಲ್ಲಿ ಅವರು ಸ್ಪಂದನಾನ ಸಾಕಷ್ಟು ಗೌರವಿಸುತ್ತಾರೆ. ವಿಶೇಷ ಪ್ರೀತಿ ತೋರಿಸುತ್ತಾರೆ. ಆದರೆ, ಸ್ಪಂದನಾ ಅವರು ಗಿಲ್ಲಿ ವಿರುದ್ಧವೇ ಈಗ ಮಸಲತ್ತು ಮಾಡುತ್ತಿದ್ದಾರೆ. ಧನುಷ್ ಜೊತೆ ಜೊತೆಗೆ ಗಿಲ್ಲಿ ವಿರುದ್ಧ ಮಾತನಾಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ.
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಅವರು ಆಡುತ್ತಿದ್ದಾರೆ. ಅವರು ಗೆಲ್ಲೋ ಕುದುರೆ ಆಗಿದ್ದಾರೆ. ಈ ಕಾರಣದಿಂದಲೇ ಅನೇಕರು ಗಿಲ್ಲಿ ಸುತ್ತುತ್ತಿದ್ದಾರೆ. ಇನ್ನೂ ಕೆಲವರು ಗಿಲ್ಲಿಯನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ. ಸ್ಪಂದನಾ ಇಷ್ಟು ದಿನ ಗಿಲ್ಲಿ ಜೊತೆ ಚೆನ್ನಾಗಿಯೇ ಇದ್ದು, ಈಗ ಅವರ ವಿರುದ್ಧವೇ ಮಸಲತ್ತು ಮಾಡುತ್ತಿದ್ದಾರೆ.
ಈ ಮೊದಲು ಸ್ಪಂದನಾ ಅವರು ರಕ್ಷಿತಾ ಶೆಟ್ಟಿ ಜೊತೆ ಒಳ್ಳೆಯ ರೀತಿಯಲ್ಲಿ ಇಬ್ಬರು. ಆದರೆ, ಇತ್ತೀಚೆಗೆ ಸ್ಪಂದನಾ ಅವರು ರಕ್ಷಿತಾ ಬಗ್ಗೆ ಅಸಮಧಾನ ಹೊರಹಾಕಿದ್ದರು. ‘ರಕ್ಷಿತಾ ಮುಗ್ಧೆ ಅಲ್ಲ. ಅವಳು ಪ್ಲ್ಯಾನ್ ಮಾಡಿಕೊಂಡು ಆಡುತ್ತಿದ್ದಾಳೆ’ ಎಂದು ಹೇಳಿದ್ದರು. ರಕ್ಷಿತಾ ಬೆನ್ನ ಹಿಂದೆ ನಿಂತು ಅನೇಕ ಬಾರಿ ಅವರು ಈ ರೀತಿಯ ಮಾತನ್ನು ಹೇಳಿದ್ದಾರೆ.
ಸೀರಿಯಲ್ ಗ್ಯಾಂಗ್ ಅಭಿಮಾನಿಗಳ ಗಲಾ ಕಥೆ 😂😂.. so called ಫ್ಯಾಬ್ 4😘😘😘#BBK12 pic.twitter.com/IazCwbnmzt
— ರಾಜು-7777 (@DBOSS0718) ನವೆಂಬರ್ 19, 2025
ಈಗ ಗಿಲ್ಲಿ ಬಗ್ಗೆ ಮಾತನಾಡುತ್ತಿದ್ದಾರೆ. ಧನುಷ್ ಜೊತೆ ಸ್ಪಂದನಾ ಮಾತುಕತೆ. ‘ಎಲ್ಲರೂ ಗಿಲ್ಲಿಯನ್ನು ಅವಾಯ್ಡ್ ಮಾಡಿದರೆ ಅವನು ದಾರಿಗೆ ಬರ್ತಾನೆ’ ಎಂದ ಧನುಷ್. ‘ಏನೇ ಆದರೂ ಕಾವ್ಯಾ ಅವರನ್ನು ದೂರ ತಳ್ಳಿಲ್ಲ’ ಎಂದು ಸ್ಪಂದನಾ ಹೇಳಿದರು. ‘ಕಾವ್ಯಾಗೂ ಲಾಭವಿದೆ’ ಎಂದು ಧನು ಹೇಳಿದರು. ಆಗ ಸ್ಪಂದನಾ ಅವರು, ‘ಇದು ಕಾವ್ಯವೂ ಗೊತ್ತು ಎನಿಸುತ್ತದೆ’.
ಇದನ್ನೂ ಓದಿ: ರೇಜಿಗೆ ಹುಟ್ಟಿಸಿದ ಅಶ್ವಿನಿ ಗೌಡ-ಜಾನ್ವಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್
ಸ್ಪಂದನಾ ಅವರು ಈ ರೀತಿ ಬದಲಾಗುತ್ತಾರೆ ಎಂದು ಯಾರೂ ಇರಲಿಲ್ಲ. ‘ಗಿಲ್ಲಿ ಇಲ್ಲ ಎಂದಿದ್ರೆ ನೀವು ಇಲ್ಲಿಯವರೆಗೆ ಬರುತ್ತಲೇ ಇರುತ್ತೀರಿ, ಏರಿದ ಏಣಿಯನ್ನು ಒಡೆಯಬೇಡಿ’ ಎಂದು ಅನೇಕರು ಕಿವಿಮಾತು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 8:55 am, ಗುರುವಾರ, 20 ನವೆಂಬರ್ 25