Headlines

Bigg Boss Spandana Eviction: ಈ ವಾರವೂ ಸ್ಪಂದನಾ ಹೊರಬರದಿದ್ರೆ ನಡೆದೇ ಹೋಗ್ತಿದ್ದು ದೊಡ್ಡ ಯುದ್ಧ?

Bigg Boss Spandana Eviction: ಈ ವಾರವೂ ಸ್ಪಂದನಾ ಹೊರಬರದಿದ್ರೆ ನಡೆದೇ ಹೋಗ್ತಿದ್ದು ದೊಡ್ಡ ಯುದ್ಧ?

Bigg Boss Spandana Eviction: ಈ ವಾರವೂ ಸ್ಪಂದನಾ ಹೊರಬರದಿದ್ರೆ ನಡೆದೇ ಹೋಗ್ತಿದ್ದು ದೊಡ್ಡ ಯುದ್ಧ?
ಫಿನಾಲೆಗೆ ಕೆಲವೇ ದಿನಗಳಿರುವಾಗ ಸ್ಪಂದನಾ ಸೋಮಣ್ಣ ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ವಾಹಿನಿ ಕಡೆಯವರೆಂಬ ಕಾರಣಕ್ಕೆ ಅರ್ಹತೆ ಇಲ್ಲದಿದ್ದರೂ ಮನೆಯಲ್ಲಿದ್ದಾರೆ ಎಂದು ಜಾಹ್ನವಿ, ಮಾಳು ಸೇರಿದಂತೆ ಹಲವರು ಆರೋಪಿಸಿದ್ದರು. ಇದೀಗ ಅವರ ಎಲಿಮಿನೇಷನ್‌ನಿಂದಾಗಿ ಈ ಚರ್ಚೆಗೆ ತೆರೆಬಿದ್ದಿದೆ.
ಸ್ಪಂದನಾ ಸೋಮಣ್ಣ (Bigg Boss Spandana Somanna) ಈ ವಾರ ಬಿಗ್‌ಬಾಸ್‌ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಇನ್ನೇನು ಫಿನಾಲೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಅವರಿಗೆ ಎಲಿಮಿನೇಷನ್‌ ಶಾಕ್‌ ಕೊಟ್ಟಿದೆ.

ಅಷ್ಟಕ್ಕೂ ಸ್ಪಂದನಾ ಸೋಮಣ್ಣ ಈ ವಾರವೂ ಮನೆಯಿಂದ ಹೊರಕ್ಕೆ ಬರದಿದ್ದರೆ ದೊಡ್ಡ ಯುದ್ಧವೇ ನಡೆದು ಹೋಗುತ್ತಿತ್ತು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ.

ಇದಕ್ಕೆ ಕಾರಣವೂ ಇದೆ. ಸ್ಪಂದನಾ ಸೋಮಣ್ಣ ಯಾಕೆ ಇನ್ನೂ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎನ್ನುವ ಬಗ್ಗೆ ಬಿಗ್‌ಬಾಸ್‌ನ ಬಹಳ ಸ್ಪರ್ಧಿಗಳು ಪ್ರಶ್ನಿಸುತ್ತಲೇ ಬಂದಿದ್ದಾರೆ. ಮೊದಲಿಗೆ ಇವರು ಮನೆಯಲ್ಲಿ ಉಳಿದುಕೊಂಡಿರುವ ಬಗ್ಗೆ ಪ್ರಶ್ನಿಸಿದ್ದು, ಜಾಹ್ನವಿ.

ಬಿಗ್‌ಬಾಸ್‌ ಮನೆಯಲ್ಲಿ ಇರುವಾಗಲೇ ಜಾಹ್ನವಿ ಸ್ಪಂದನಾ ಬಗ್ಗೆ ದೊಡ್ಡ ಆರೋಪ ಮಾಡಿದ್ದರು. ಸ್ಪಂದನಾ ಅವರು ವಾಹಿನಿ ಕಡೆಯವರಾಗಿರುವ ಹಿನ್ನೆಲೆಯಲ್ಲಿ, ಅವರಿಗೆ ಯಾವುದೇ ಅರ್ಹತೆ ಇಲ್ಲದಿದ್ದರೂ ಉಳಿದುಕೊಂಡಿದ್ದಾರೆ ಎಂದಿದ್ದರು. ಕೊನೆಗೆ ಈ ಮಾತಿನ ಬೆನ್ನಲ್ಲೇ ಜಾಹ್ನವಿ ಬಿಗ್‌ಬಾಸ್‌ ಮನೆಯಿಂದ ಹೊರಕ್ಕೆ ಬರಬೇಕಾಯಿತು.

ಇದಾದ ಹಲವು ವಾರಗಳು ಸ್ಪಂದನಾ ಸೋಮಣ್ಣ ಉಳಿದುಕೊಂಡರು. ಫೈನಲಿಸ್ಟ್‌ ಸ್ಪರ್ಧಿಗಳು ಎನ್ನಿಸಿಕೊಂಡವರು, ಮನೆಯಿಂದ ಹೊರಕ್ಕೆ ಬಂದರೂ, ಸ್ಪಂದನಾ ಅವರನ್ನು ಉಳಿಸಿಕೊಂಡ ಬಗ್ಗೆ ಅಸಮಾಧಾನದ ಹೊಗೆಯಾಡುತ್ತಲೇ ಇತ್ತು.

ಬಳಿಕ ಡಬಲ್‌ ಎಲಿಮಿನೇಷನ್‌ನಲ್ಲಿ ಹೊರಕ್ಕೆ ಬಂದಿದ್ದ ಮಾಳು ಮತ್ತು ಸೂರಜ್‌ ಸಿಂಗ್‌ ಕೂಡ ಇದೇ ಮಾತನ್ನು ಹೇಳಿದ್ದರು. ಸ್ಪಂದನಾ ಅವರನ್ನು ಏತಕ್ಕೆ ಉಳಿಸಿಕೊಂಡಿದ್ದಾರೆ ಎನ್ನುವುದೇ ಅಚ್ಚರಿಯಾಗುತ್ತದೆ ಎಂದಿದ್ದರು. ಅದರಲ್ಲಿಯೂ ಮಾಳು ಅವರಂತೂ ಈ ಬಗ್ಗೆ ಸಿಕ್ಕಾಪಟ್ಟೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಕೊನೆಗೂ ಸ್ಪಂದನಾ ಹೊರಕ್ಕೆ ಬಂದಿದ್ದಾರೆ. ಸುದೀರ್ಘ ಅವಧಿಯ ಪಯಣವನ್ನು ಅವರು ಬಿಗ್‌ಬಾಸ್‌ ಮನೆಯಲ್ಲಿ ನಡೆಸಿ ಇದೀಗ ಹೊರಬಂದು Bigg Boss Spanda Somanna ಎಂದು ಫೇಮಸ್‌ ಆಗುತ್ತಿದ್ದಾರೆ.

Source link

Leave a Reply

Your email address will not be published. Required fields are marked *